ಕಿರಿಕ್ ಪಾರ್ಟಿ ಸಿನಿಮಾದ ಎರಡನೇ ಹೀರೋಯಿನ್ ಸಂಯುಕ್ತ ಹೆಗಡೆ… ಒಂದೇ ಒಂದು ಸಿನಿಮಾದಿಂದ ಅತ್ಯಂತ ಹೆಚ್ಚು ಜನಪ್ರಿಯತೆಯನ್ನು ಪಡೆದಿರೋ ನಟಿ…! ಕಿರಿಕ್ ಪಾರ್ಟಿ ಸಿನಿಮಾ ರಿಲೀಸ್ ಆಗ್ತಿದ್ದಂತೆ ಸಂಯುಕ್ತ ಸಿನಿಲೋಕದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಗಿಟ್ಟಿಸಿಕೊಂಡಿದ್ದಾರೆ…
ಆದ್ರೆ, ಸಿನಿಮಾಗಳಿಗಿಂತ ವಿವಾದಗಳಲ್ಲೇ ಸುದ್ದಿ ಆಗ್ತಿರೋ ಇವರೀಗ ನಟ ಹುಚ್ಚ ವೆಂಕಟ್ ಅವರ ತಂಗಿಯ ಪಟ್ಟವನ್ನು ಅಲಂಕರಿಸಿದ್ದಾರೆ…! ಅಷ್ಟೇ ಅಲ್ಲದೆ ಮನುಷ್ಯ ರೂಪದ ರಾಕ್ಷಸಿ ಎಂದು ಟ್ರೋಲ್ ಪೇಜ್ ಗಳ ಆಹಾರವಾಗಿದ್ದಾರೆ…! ಕನ್ನಡ ಬಿಗ್ ಬಾಸ್ ಸೀಸನ್ 5ರಲ್ಲಿ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಹೋಗಿರೋ ಸಂಯುಕ್ತ ಓವರ್ ಕಿರಿಕ್ ಮಾಡಿದ್ದಾರೆ. ಅಷ್ಟೇ ಅಲ್ಲ, ಸಮೀರ್ ಆಚಾರ್ಯ ಅವರಿಗೆ ಕಪಾಳಮೋಕ್ಷ ಮಾಡಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ…!
ಸೀಸನ್ 3ರ ಸ್ಪರ್ಧಿ ಹುಚ್ಚ ವೆಂಕಟ್ ಅಂದು ಪ್ರತಿಸ್ಪರ್ಧಿ ರವಿಮುರೂರ್ ಮೇಲೆ ಕೈಮಾಡಿ ಹೊರಬಂದಿದ್ದರು. ಸೀಸನ್ 4ರಲ್ಲಿ ಮತ್ತೊಂದು ಅವಕಾಶ ನೀಡಿ ಅತಿಥಿಯಾಗಿ ವೆಂಕಟ್ ಅವರನ್ನು ಬಿಗ್ ಬಾಸ್ ಮನೆಯೊಳಕ್ಕೆ ಕಳುಹಿಸಲಾಗಿತ್ತು. ಆಗ ಒಳ್ಳೆಯ ಹುಡುಗ ಪ್ರಥಮ್ ಗೆ ಹೊಡೆದು ಕೆಲವೇ ಕ್ಷಣಗಲ್ಲಿ ಮನೆಯಿಂದ ಆಚೆ ಬಂದಿದ್ದರು.
ಕಳೆದ ಎರಡು ಸೀಸನ್ ಗಳಲ್ಲಿ ಹುಚ್ಚ ವೆಂಕಟ್ ಮಾಡಿದ್ದನ್ನು ಈ ಬಾರಿ ಸಂಯುಕ್ತ ಹೆಗಡೆ ಮಾಡಿದ್ದಾರೆ…! ಸೋಶಿಯಲ್ ಮೀಡಿಯಾದಲ್ಲಿ, ಅದರಲ್ಲೂ ಟ್ರೋಲ್ ಪೇಜ್ ಗಳಲ್ಲಿ ಸಂಯುಕ್ತ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗ್ತಿದೆ. ಹುಚ್ಚ ವೆಂಕಟ್ ತಂಗಿ, ಹುಚ್ಚಿ ವೆಂಕಮ್ಮ, ವೆಂಕಟಮ್ಮ, ಲೇಡಿ ಹುಚ್ಚ ವೆಂಕಟ್, ಮನುಷ್ಯ ರೂಪದ ರಾಕ್ಷಸಿ ಎಂದು ಸಂಯುಕ್ತ ಹೆಗಡೆ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.