ಡಿಸೆಂಬರ್ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲಬುರಗಿಗೆ ಹೋಗಿದ್ದಾಗ ಒಂದು ಹೊತ್ತಿನ ಊಟಕ್ಕೆ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮಾಡಿರೋ ಖರ್ಚು ತೀವ್ರ ಟೀಕೆಗೆ ಗುರಿಯಾಗಿದೆ…!
ಐವಾನ್ ಇ ಶಾಹಿ ಗೆಸ್ಟ್ ಹೌಸ್ ನಲ್ಲಿ ಊಟವನ್ನು ಆಯೋಜಿಸಿದ್ದ ಶರಣ ಪ್ರಕಾಶ್ ಪ್ರಕಾಶ್ ಪಾಟೀಲ್ ಬೆಳ್ಳಿ ತಟ್ಟೆಯಲ್ಲಿ ಊಟದ ವ್ಯವಸ್ಥೆ ಮಾಡಿದ್ದರು…! 1 ಊಟಕ್ಕೆ 800 ರೂನಂತೆ 1ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು ಒಟ್ಟಾರೆ ಹೆಚ್ಚು ಕಡಿಮೆ 10 ಲಕ್ಷ ರೂ ಅನ್ನು ಖರ್ಚು ಮಾಡಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ಒಳ್ಳೆಯ ಬೆಲೆ ಕೊಡಿಸಲಾಗಲ್ಲ. ಮುಖ್ಯಮಂತ್ರಿಗಳನ್ನು ಮೆಚ್ಚಿಸೋದಕ್ಕೆ ಬೆಳ್ಳಿತಟ್ಟೆ ಊಟದ ವ್ಯವಸ್ಥೆ ಮಾಡಿದ್ದಾರೆ ಎಂದು ಕಲಬುರಗಿ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ರಾಜಕುಮಾರ್ ಆರೋಪಿಸಿದ್ದಾರೆ.