ಕೃಷಿಯೇ ಖುಷಿ ಎನ್ನುವ ನಿರೂಪಕ ಸುಧನ್ವ…!

0
678

ಹಳ್ಳಿ ಜೀವನವೇ ಚಂದ…! ಕೃಷಿಯಲ್ಲೇ ಖುಷಿ ಇದೆ…! ಬದುಕಿನಲ್ಲಿ ಬದಲಾವಣೆ ಅನಿವಾರ್ಯ…! ಹೊರಪ್ರಪಂಚದ ಅನುಭವ ಬೇಕು. ಹಾಗಾಗಿ ಹಳ್ಳಿಬಿಟ್ಟೆ…! ಭವಿಷ್ಯದಲ್ಲಿ ಹುಟ್ಟೂರಿಗೆ ವಾಪಸ್ಸು ಹೋಗಿ ಕೃಷಿಯಲ್ಲಿ ತೊಡಗಿಸಿಕೊಳ್ಳೋದೇ ಗುರಿ, ಕನಸು ಎಲ್ಲವೂ ಹೌದು…!


ಇದು ರಾಜ್ ನ್ಯೂಸ್ ನ ನಿರೂಪಕ ಸುಧನ್ವ ಖರೆ ಅವರ ಮನದಾಳದ ನುಡಿಮುತ್ತುಗಳು. ಬದುಕಿಗೊಂದು ಹೊಸ ಅರ್ಥ ನೀಡಿದ ಮಾಧ್ಯಮ ಕ್ಷೇತ್ರದಲ್ಲಿ ಖುಷಿ ಖುಷಿಯಿಂದಲೇ ಕೆಲಸ ಮಾಡುತ್ತಿರುವ ಇವರ ಕನಸು ಕೃಷಿ. ಈ ಕ್ಷೇತ್ರದಲ್ಲಿ ಹೊಸತೇನಾದರು ಸಾಧಿಸಬೇಕು ಎನ್ನುವ ತುಡಿತ ಇವರದ್ದು.


ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಂಜುಗುಣಿ ಕ್ಷೇತ್ರದ ಸಮೀಪದ ಕಲ್ಲಳ್ಳಿ ಇವರ ಊರು. ತಂದೆ ನೀಲಕಂಠ ಖರೆ, ತಾಯಿ ಅಪರ್ಣಾ ಖರೆ, ಅಣ್ಣ ಅರವಿಂದ ಖರೆ, ಅತ್ತಿಗೆ ಸಂಗೀತಾ ಖರೆ.


ಸುಧನ್ವ ಮಂಜುಗುಣಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಮಂಗಳೂರಿನ ರಾಮಕೃಷ್ಣ ಆಶ್ರಮದಲ್ಲಿ ಪ್ರೌಢಶಿಕ್ಷಣವನ್ನು ಪಡೆದರು. ಬಾಲ್ಯದಿಂದ ತುಂಬಾ ತುಂಟ, ಹಠಮಾರಿ. ರಾಮಕೃಷ್ಣ ಆಶ್ರಮಕ್ಕೆ ಯಾವಾಗ ಸೇರಿದ್ರೋ ಅಲ್ಲಿಂದ ಸಂಪೂರ್ಣ ಬದಲಾದ್ರು.


ಪ್ರೌಢಶಿಕ್ಷಣ ಮುಗಿದ ಮೇಲೆ ಏನ್ ಮಾಡೋದು, ಭವಿಷ್ಯದ ಗುರಿ ಯಾವುದೂ ಇರಲಿಲ್ಲ. ಮುರಡೇಶ್ವರದಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಪ್ಲೋಮ ಮಾಡಲು ಮುಂದಾದ್ರು. ಅದನ್ನು ಕಂಪ್ಲೀಟ್ ಮಾಡೋಕೆ ಆಗಲಿಲ್ಲ. ಹಾಗಾಗಿ ಊರಿಗೆ ಮರಳಿದ್ರು. ಶಿರಸಿಯ ಎಂಇಎಸ್ ಕಾಲೇಜಿನಲ್ಲಿ ಪಿಯುಸಿ (ಕಲಾವಿಭಾಗ) ಮಾಡಿದ್ರು. ಇಲ್ಲಿ ಕನ್ನಡ ಉಪನ್ಯಾಸಕಿ ಆಗಿದ್ದ ಮಮತಾ ಅವರು ಸುಧನ್ವ ಅವರಲ್ಲಿದ್ದ ಬರಹ ಶಕ್ತಿಯನ್ನು ಗಮನಿಸಿದ್ರು. ಒಂದಿಷ್ಟು ಲೇಖನಗಳನ್ನು ಬರೆಸಿದ್ರು. ಜರ್ನಲಿಸಂನಲ್ಲಿ ನಿಗೊಂದು ಒಳ್ಳೆಯ ಭವಿಷ್ಯವಿದೆ. ಅದರಲ್ಲೇ ಮುಂದುವರಿ ಎಂದು ಸಲಹೆ ನೀಡಿದ್ರು.


ನೆಚ್ಚಿನ ಉಪನ್ಯಾಸಕಿಯ ಮಾತಿನಂತೆ ಶಿರಸಿಯ ಎಂಎಂ ಆಟ್ರ್ಸ್ ಅಂಡ್ ಸೈನ್ಸ್ ಕಾಲೇಜಿನಲ್ಲಿ ಬಿಎ ಪದವಿಗೆ ಸೇರಿದ್ರು. ಸಂಗೀತದ ಬಗ್ಗೆ ಆಸಕ್ತಿಯಿತ್ತು. ಅಲ್ಪ-ಸ್ವಲ್ಪ ಕಲಿತಿದ್ರು. ಬಿಎಯಲ್ಲಿ ಪತ್ರಿಕೋದ್ಯಮ ಮತ್ತು ಸಂಗೀತ ವಿಷಯವನ್ನು ಆಯ್ಕೆ ಮಾಡಿಕೊಂಡ್ರು. ಶಾಲಾ-ಕಾಲೇಜು ದಿನಗಳಲ್ಲಿ ನಾನಾ ಕಾರ್ಯಕ್ರಮಗಳಲ್ಲಿ ಸುಧನ್ವ ಅವರ ಹಾಡು ಮಿಸ್ ಆಗ್ತಿರ್ಲಿಲ್ಲ.


ಪದವಿ ಮಾಡುವಾಗ ಜರ್ನಲಿಸಂ ಉಪನ್ಯಾಸಕ ರಾಘವೇಂದ್ರ ಅವರು ಸುಧನ್ವಗೆ ತುಂಬಾನೇ ಪ್ರೋತ್ಸಾಹ ನೀಡಿದ್ರು. ಪದವಿ ವೇಳೆಯಲ್ಲಿ 3 ವರ್ಷಗಳ ಕಾಲ ಸ್ಥಳಿಯ ಚಾನಲ್ ‘ಸುಮುಖ’ದಲ್ಲಿ ಕೆಲಸ ಮಾಡಿದ್ರು. ನಿರೂಪಣೆ, ವಾಯ್ಸ್ ವೋವರ್ ಕೊಡೋದು, ರಿಪೋರ್ಟಿಂಗ್ ಮತ್ತಿತರ ಎಲ್ಲಾ ಕೆಲಸಗಳನ್ನು ಮಾಡಿ ಸೈ ಎನಿಸಿಕೊಂಡ್ರು.


ಪದವಿ ಬಳಿಕ ಉತ್ತರ ಕನ್ನಡ ಜಿಲ್ಲೆಯ ‘ನೂತನ’ ಚಾನಲ್‍ನಲ್ಲಿ ಕೆಲಸ ಮಾಡೋ ಅವಕಾಶ ಸುಧನ್ವ ಅವರದ್ದಾಯ್ತು. 2013ರಲ್ಲಿ ನೂತನ ಚಾನಲ್ ಗೆ ಸೇರಿದ ಸುಧನ್ವ 1 ವರ್ಷ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡಿದ್ರು. ಈ ವೇಳೆಯಲ್ಲಿ ಟಿವಿ9ನ ಜಿಲ್ಲಾ ವರದಿಗಾರ ಸಂದೀಪ್ ಸಾಗರ್ ಸೇರಿದಂತೆ ಅನೇಕ ಪತ್ರಕರ್ತರು ಸುಧನ್ವ ಅವರಿಗೆ ವರದಿಗಾರಿಕೆ ಪಾಠ ಮಾಡಿದ್ರು. ಸ್ಕ್ರಿಪ್ಟ್ ಬರೆಯೋದನ್ನು ಕಲಿಸಿಕೊಟ್ರು. ರಾಜ್ ನ್ಯೂಸ್‍ನ ವರದಿಗಾರ ದರ್ಶನ್ ಅವರು ರಾಜ್ ನ್ಯೂಸ್ ಗೆ ಟ್ರೈಮಾಡು ಅಂತ ಸಲಹೆ ಕೊಟ್ರು. ಆಫೀಸಲ್ಲಿ ವಿಚಾರಿಸಿ ತಿಳಿಸಿದ್ರು.


ಬೆಂಗಳೂರಿನ ರಾಜ್ ನ್ಯೂಸ್ ಕಚೇರಿಗೆ ಬಂದ್ರು. ಚಾನಲ್ ನ ಮುಖ್ಯಸ್ಥರಾದ ಹಮೀದ್ ಪಾಳ್ಯ ಅವರು ಇಂಟರ್ ವ್ಯೂ ಮಾಡಿದ್ರು. ಒಂದೆರಡು ದಿನದಲ್ಲಿ ರಾಜ್ ನ್ಯೂಸ್ ನಿಂದ ಕರೆಬಂತು…! ಜಯಪ್ರಕಾಶ ಶೆಟ್ಟಿ, ಹಮೀದ್ ಪಾಳ್ಯ, ರೆಹಮಾನ್ ಹಾಸನ್ , ಗೌರೀಶ್ ಅಕ್ಕಿ ಮೊದಲಾದ ನಿರೂಪಕರನ್ನು ಸ್ಕ್ರೀನ್ ನಲ್ಲಿ ನೋಡಿ ಖುಷಿಪಟ್ಟು, ತಾನೂ ಇವರಂತೆ ಆಗ್ಬೇಕು ಅಂತ ಕನಸು ಕಾಣುತ್ತಿದ್ದ ಸುಧನ್ವ ಅವರಿಗೆ ರಾಜ್ ನ್ಯೂಸ್ ನಿಂದ ಕರೆಬಂದಾಗ ಸಂತೋಷಕ್ಕೆ ಪಾರವೇ ಇರಲಿಲ್ಲ. ಅದು 2014.


ನ್ಯೂಸ್ ರೀಡಿಂಗ್, ನಿರೂಪಣೆ, ಸ್ಕ್ರಿಪ್ಟ್ ಬರೆಯೋದು, ಡಿಸ್ಕಷನ್ ಎಲ್ಲವನ್ನೂ ಸುಧನ್ವ, ಮಂಜುಳಾ ಮಾಸ್ತಿಕಟ್ಟೆ, ಚಿಂತನ್, ಅಶ್ವಿನಿ ಅವರು ತುಂಬಾ ಸಪೋರ್ಟ್ ಮಾಡ್ತಾರೆ ಎನ್ನುತ್ತಾರೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ವಿಧಿವಶರಾದಾಗ, ಕಾವೇರಿ ಗಲಾಟೆ ಮೊದಲಾದ ಸಂದರ್ಭಗಳಲ್ಲಿ ನಡೆಸಿಕೊಟ್ಟ ಲೈವ್ ಪ್ರೋಗ್ರಾಂ ಇವರಿಗೆ ಖಷಿ ಕೊಟ್ಟಿದೆಯಂತೆ.


ತನಗೆ ಜರ್ನಲಿಂಗೆ ಹೋಗುವಂತೆ ತಿಳಿಸಿದ್ದ ಉಪನ್ಯಾಸಕಿ ಮಮತಾ ಅವರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಈ ಸುದ್ದಿಯನ್ನು ಓದಿ ಹೊರಬಂದಮೇಲೆ ಸುಧನ್ವ ಅವರಿಗೆ ಗೊತ್ತಾಗಿದ್ದು, ‘ನಾನು ಓದಿದ್ದು ನನ್ನ ನೆಚ್ಚಿನ ಉಪನ್ಯಾಸಕಿಯ ಸಾವಿನ ಸುದ್ದಿಯನ್ನು’…! ಅಂತ. ಆಗ ತುಂಬಾ ದುಃಖಿತರಾಗಿದ್ದರು. ಈ ಘಟನೆ ಮತ್ತೆ ಮತ್ತೆ ನೆನಪಾಗಿ, ಬೇಜಾರಾಗುತ್ತಿರುತ್ತಂತೆ.


ಸಂಗೀತ ಇವರಿಗೆ ಇಷ್ಟ. ಹಾಡುತ್ತಾರೆ, ಹಾರ್ಮೋನಿಯಂ ನುಡಿಸುತ್ತಾರೆ. ಅಷ್ಟೇ ಅಲ್ಲದೆ ತಬಲ ಕಲಾವಿದರೂ ಹೌದು.
ಇವುಗಳಲ್ಲದೆ ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳೋದು ಸುಧನ್ವ ಅವರಿಗಿಷ್ಟ. ಹಲವಾರು ಬ್ಲಡ್ ಕ್ಯಾಂಪ್ ಗಳನ್ನು ಸ್ನೇಹಿತರೊಡಗೂಡಿ ನಡೆಸಿಕೊಟ್ಟಿದ್ದಾರೆ. ನೂರಾರು ಬ್ಲಡ್ ಕ್ಯಾಂಪ್ ಗಳಲ್ಲಿ ಭಾಗಿಯಾಗಿದ್ದಾರೆ. ಸ್ವಾಮಿ ವಿವೇಕಾನಂದ ಅವರ ಕುರಿತ ಪುಸ್ತಕಗಳನ್ನು ಹಂಚಿದ್ದಾರೆ.


ಮೊದಲೇ ಹೇಳಿದಂತೆ ಕೆಲವೊಂದಿಷ್ಟು ವರ್ಷ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ, ಬಳಿಕ ಕೃಷಿಯಲ್ಲಿ ಮುಂದುವರೆಯುವುದು ಇವರ ಹೆಬ್ಬಯಕೆ. ಸಧ್ಯ ರಾಜ್ ನ್ಯೂಸ್ ನಲ್ಲಿ ರಾರಾಜಿಸುತ್ತಿದ್ದಾರೆ. ಅಂದುಕೊಂಡಿದ್ದೆಲ್ಲವನ್ನು ಸಾಧಿಸುವಂತಾಗಲಿ.

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

1) 10 ನವೆಂಬರ್ 2017 : ಈಶ್ವರ್ ದೈತೋಟ

2)11 ನವೆಂಬರ್ 2017 : ಭಾವನ

3)12  ನವೆಂಬರ್ 2017 : ಜಯಶ್ರೀ ಶೇಖರ್

4)13 ನವೆಂಬರ್ 2017 : ಶೇಷಕೃಷ್ಣ

5)14 ನವೆಂಬರ್ 2017 : ಶ್ರೀಧರ್ ಶರ್ಮಾ

6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

7)16 ನವೆಂಬರ್ 2017 : ಅರವಿಂದ ಸೇತುರಾವ್

8)17 ನವೆಂಬರ್ 2017 : ಲಿಖಿತಶ್ರೀ

9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

10)19 ನವೆಂಬರ್ 2017 : ಅಪರ್ಣಾ

11)20 ನವೆಂಬರ್ 2017 :  ಅಮರ್ ಪ್ರಸಾದ್

12)21 ನವೆಂಬರ್ 2017 :   ಸೌಮ್ಯ ಮಳಲಿ

13)22 ನವೆಂಬರ್ 2017 :  ಅರುಣ್ ಬಡಿಗೇರ್

14)23ನವೆಂಬರ್ 2017 :  ರಾಘವ ಸೂರ್ಯ

15)24ನವೆಂಬರ್ 2017 :  ಶ್ರೀಲಕ್ಷ್ಮಿ

16)25ನವೆಂಬರ್ 2017 :  ಶಿಲ್ಪ ಕಿರಣ್

17)26ನವೆಂಬರ್ 2017 :  ಸಮೀವುಲ್ಲಾ

18)27ನವೆಂಬರ್ 2017 :  ರಮಾಕಾಂತ್ ಆರ್ಯನ್

19)28ನವೆಂಬರ್ 2017 :  ಮಾಲ್ತೇಶ್

20)29/30ನವೆಂಬರ್ 2017 :  ಶ್ವೇತಾ ಆಚಾರ್ಯ  [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ.  ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]

21)30ನವೆಂಬರ್ 2017 :  ಸುರೇಶ್ ಬಾಬು 

22)01 ಡಿಸೆಂಬರ್ 2017 :  ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)

23)02 ಡಿಸೆಂಬರ್ 2017 : ಶಶಿಧರ್ ಭಟ್

24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್

25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ

26)05 ಡಿಸೆಂಬರ್ 2017 : ಶ್ರುತಿ ಜೈನ್

27)06ಡಿಸೆಂಬರ್ 2017 : ಅವಿನಾಶ್ ಯುವನ್  

28)07ಡಿಸೆಂಬರ್ 2017 : ಶಿಲ್ಪ ಕೆ.ಎನ್

29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ

30)09ಡಿಸೆಂಬರ್ 2017 : ಸಂದೀಪ್ ಕುಮಾರ್

31)10ಡಿಸೆಂಬರ್ 2017 : ಪ್ರತಿಮಾ ಭಟ್

32)11ಡಿಸೆಂಬರ್ 2017 :  ಹರೀಶ್ ಪುತ್ರನ್

33)12ಡಿಸೆಂಬರ್ 2017 : ನಿಶಾ ಶೆಟ್ಟಿ

34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ

35)14ಡಿಸೆಂಬರ್ 2017 :  ಹಬೀಬ್ ದಂಡಿ

36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್

37)16ಡಿಸೆಂಬರ್ 2017 :  ಜ್ಯೋತಿ ಇರ್ವತ್ತೂರು

38)17ಡಿಸೆಂಬರ್ 2017 :  ಶಿಲ್ಪ ಐಯ್ಯರ್ 

39)18ಡಿಸೆಂಬರ್ 2017 :  ನಾಝಿಯಾ ಕೌಸರ್

40) 19ಡಿಸೆಂಬರ್ 2017 :  ಶ್ರುತಿಗೌಡ

41) 20ಡಿಸೆಂಬರ್ 2017 :  ಎಂ.ಆರ್ ಶಿವಪ್ರಸಾದ್

42) 21ಡಿಸೆಂಬರ್ 2017 :  ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)

43) 22ಡಿಸೆಂಬರ್ 2017 :  ಶರ್ಮಿತಾ ಶೆಟ್ಟಿ

44) 23ಡಿಸೆಂಬರ್ 2017 :  ಕಾವ್ಯ

45) 24ಡಿಸೆಂಬರ್ 2017 :  ಹರ್ಷವರ್ಧನ್ ಬ್ಯಾಡನೂರು

46) 25ಡಿಸೆಂಬರ್ 2017 : ಸುಧನ್ವ ಖರೆ

LEAVE A REPLY

Please enter your comment!
Please enter your name here