ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ರಿಯಲ್ ಸ್ಟಾರ್ ಉಪೇಂದ್ರ ಈ ಮೂರು ಸ್ಟಾರ್ ನಟರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡ್ರೆ ಹೆಂಗಿರುತ್ತೆ…?
ಇದು ಸಿನಿಪ್ರಿಯರ ಕನಸು. ಇದನ್ನು ನನಸಾಗಿಸೋ ಪ್ರಯತ್ನದಲ್ಲಿದ್ದಾರೆ ನಿರ್ಮಾಪಕ ಮುನಿರತ್ನ. ‘ಚಂದ್ರಗುಪ್ತ ಚಾಣಕ್ಯ’ ಎಂದು ಸಿನಿಮಾಕ್ಕೆ ಹೆಸರಿಡಲಾಗಿದ್ದು, ಸ್ಕ್ರಿಪ್ಟ್ ವರ್ಕ್ ನಡೀತಾ ಇದೆ. ನಿರ್ದೇಶಕರ ಯಾರೆಂದು ಪಕ್ಕಾ ಆಗಿಲ್ಲ. ಆದ್ರೆ, ಪ್ರಸಿದ್ಧ ನಿರ್ದೇಶಕರೇ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಚಂದ್ರಗುಪ್ತನಾಗಿ ಪುನೀತ್, ಚಾಣುಕ್ಯನಾಗಿ ಉಪೇಂದ್ರ, ಅಲೆಕ್ಸಾಂಡರ್ ಆಗಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಚಿತ್ರ ಸೆಟ್ಟೇರೋದು ಗ್ಯಾರೆಂಟಿ ಎನ್ನುವ ಮುನಿರತ್ನ, ಕೆಲವೇ ತಿಂಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಹೇಳೋದಾಗಿ ತಿಳಿಸಿದ್ದಾರೆ.