ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ ಐಶ್ವರ್ಯ ರೈ ತನ್ನ ತಾಯಿ ಎಂದು ಯುವಕನೊಬ್ಬ ಹೇಳಿಕೊಂಡಿದ್ದಾನೆ.
ಆಂಧ್ರಪ್ರದೇಶ ಮೂಲದ ಯುವಕ ಸಂಗೀತ್ ಕುಮಾರ್, ತಾನು ಐಶ್ವರ್ಯ ರೈ ಮಗ, ಐವಿಎಫ್ ಮೂಲಕ ಹುಟ್ಟಿರೋದಾಗಿ ವಿವಾದಿತ ಹೇಳಿಕೆ ನೀಡಿದ್ದಾನೆ…!
1988ರಲ್ಲಿ ನಾನು ಲಂಡನ್ ನಲ್ಲಿ ಜನಿಸಿದ್ದು, ಬಳಿಕ ತನ್ನ ತಂದೆ ವಿಶಾಖಪಟ್ಟಣಕ್ಕೆ ಕರೆತಂದ್ರು. ಆದ್ದರಿಂದ ನಾನು ಅವರ ಜೊತೆ ವಾಸವಿದ್ದೇನೆ ಎನ್ನುವ ಯುವಕ ಐಶ್ವರ್ಯ ಅವರ ಪೋಷಕರಾದ ವೃಂದಾ ಹಾಗೂ ಕೃಷ್ಣ ತನನ್ನು ಪೋಷಿಸಿದ್ದಾರಂತ ಹೇಳಿಕೊಳ್ಳುತ್ತಿದ್ದಾನೆ.
ಈ ಬಗ್ಗೆ ಈತನ ಬಳಿ ಯಾವುದೇ ದಾಖಲೆಗಳಿಲ್ಲ. ದಾಖಲೆ ಪತ್ರಗಳ ನಾಶಕ್ಕೆ ಸಂಬಂಧಿಕರು ಕಾರಣ ಎಂದು ಆರೋಪಿಸಿದ್ದಾನೆ.