ಲೀಲಾಭಾಸ್ಕರ

0
170

ಲೀಲಾಭಾಸ್ಕರ

ಓ ಭಾಸ್ಕರ..
ಓ ಆರ್ಯಮ..
ಓ ಶಕ್ರ, ಏನೀ ನಿನ್ನ ಲೀಲೆ
ಜೀವಜಾತನು ನೀ
ಪ್ರಾಣಧಾತನು ನೀ
ಈ ಜಗದುಸಿರೇ ನೀ
ದಿನ ಹರಸುವೆ – ದಿನ ಬೆಳಗುವೆ
ಜಗ ನಗಿಸುವೆ
ಅಂಧಕಾರವ ಅಳಿಸಿ
ಹೊಸ ಆಶಾಕಿರಣವ ಹರಿಸುವೆ
ಮೂಳೆ ಮಾಂಸಕೆ ಉಸಿರನಿತ್ತವನು ನೀ
ಪಾಲಿಸಿ ಹೆಸರನಿತ್ತವ ನೀ
ಕರ್ಮಾದಾನುಸಾರಕೆ ಪ್ರಳಯ ಹೊತ್ತವನು ನೀ
ನಯನಗಳಿಗೆ ನಗುವ ತಂದಿತ್ತವನು ನೀ
ತ್ರಿಮೂರ್ತಿಗಳ ಸಾಕಾರ ರೂಪವು ನೀ
ದಿನ ಸುಳಿವೆ ಮನ ತಣಿವೆ
ನಿದ್ರಾ ದೇವತೆಯ ಬಳಿ ಕರೆದು ದಣಿವ ಕಳೆವೆ
ಏನೆಂದು ಪೊಗಳಲಿ ನಾ
ಓ ಭಾಸ್ಕರ ಬಾ ಬಾನಲ್ಲಿ ಮತ್ತೊಮ್ಮೆ
ಮಗದೊಮ್ಮೆ
ಈ ಜಗಕೆ ಧಾತೃ ನೀ
ಭೂಮಂಡಲಕೆ ಪ್ರಾಣದ ಸ್ತೋತ್ರವೂ ನೀ
ಕಾವ್ಯದತ್ತನ ಮನವಿಯೊಂದಿಹುದು..!
ಬಾರಯ್ಯ ಬಾ ವಿಕ್ರಮ
ತೋರಯ್ಯ ಯುಗಯುಗಕೆ ಪರಾಕ್ರಮ.
-?ದತ್ತರಾಜ್ ಪಡುಕೋಣೆ?

LEAVE A REPLY

Please enter your comment!
Please enter your name here