ರೆಬಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಗೌಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ ಅನ್ನೋದು ಹಳೇ ಸುದ್ದಿ. ಆದ್ರೆ, ಯಾವ ಸಿನಿಮಾ, ಇವರ ಚೊಚ್ಚಲ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳೋದು ಯಾರು…? ನಿರ್ಮಾಣ ಮಾಡೋದು ಯಾರು…? ಇತ್ಯಾದಿ ಇತ್ಯಾದಿ ಚರ್ಚೆಗಳಿದ್ವು.
ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಪವನ್ ಒಡೆಯರ್ ಅವರು ಅಂಬರೀಶ್ ಅವರ ಮಗ ಅಭಿಷೇಕ್ ಅವರ ಚೊಚ್ಚಲ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳೋದು ಪಕ್ಕಾ ಆಗಿದೆ.
ಪವನ್ ಒಡೆಯರ್ ಅವರ ಕಥೆಯನ್ನು ಕೇಳಿರುವ ಸಂದೇಶ್ ನಾಗರಾಜ್ ಬಂಡವಾಳ ಹಾಕಲು ರೆಡಿಯಾಗಿದ್ದಾರೆ. ಪವನ್ ಒಡೆಯರ್ ಸ್ಕ್ರಿಪ್ಟ್ ಮತ್ತು ಸಂಭಾಷಣೆ ಬರೆಯುವಲ್ಲಿ ಬ್ಯುಸಿ ಆಗಿದ್ದು, ಫೆಬ್ರವರಿ ಕೊನೆಯವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ಸಿನಿಮಾ ಶೂಟಿಂಗ್ ಶುರುವಾಗದಲಿದೆಯಂತೆ.