ಪ್ರೇಮಸಂಗಮ

0
212

ಪ್ರೇಮಸಂಗಮ

ಪ್ರೇಮಚಂದಿರ ಹೃದಯಮಂದಿರ‌
ದಿನವೂ ಹೂವಿನಹಂದರ
ಕಣ್ಣಮಂತ್ರಕೆ ಭಾವ ತಂತ್ರಕೆ
ಜೋಡಿಜೀವದ ಯಂತ್ರಕೆ
ಕಿರುಬೆರಳು ಕರೆದಾಗ
ನಸುನಾಚಿಕೆ ನೂಕಿತು ಎದೆಯಗೂಡಿಗೆ
ಪಿಸುಮಾತು ಹಿತವಾಗಿ
ಜೇನರಸವಾಗಿ ಹರಿದು ಹೋಗಿವೆ
ಎರಡು ದೇಹದ ಒಂದೇ ಆತ್ಮಕೆ
ಏನೀ ಅಂದ ಚಂದ ಕಾವ್ಯದತ್ತನ
ಪದಕಮಲದಲಿ ಪ್ರೇಮಪದಗಳ
ಆಯ್ದು ತಂದಿಹನು
ಪ್ರೀತಿಚಿಗುರೆಲೆ ಹೊತ್ತು ಬಂದಿಹನು
ಪ್ರೇಮಕವಿಯ ರೂಪತಾಳಿ.

? ದತ್ತರಾಜ್ ಪಡುಕೋಣೆ?

LEAVE A REPLY

Please enter your comment!
Please enter your name here