ಅವತ್ತು ಇವರ ಅಮ್ಮ ಮನೆ ಮಂದಿಯನ್ನೆಲ್ಲ ಹಾಲ್ ನಲ್ಲಿ ಸೇರಿಸಿ ಟಿವಿ ಆನ್ ಮಾಡಿದ್ರು…! ಉದಯ ಚಾನಲ್ ತೆರೆಯುತ್ತಿದ್ದಂತೆ ಎಲ್ಲರಿಗೂ ಅಚ್ಚರಿಯ ಖುಷಿ…! ಕಾರಣ, ಮನೆಮಗಳು ರೋಹಿಣಿ ಅಡಿಗ ಟಿವಿ ಪರದೆಯಲ್ಲಿದ್ರು…!
ತಾನು ಫಸ್ಟ್ ನ್ಯೂಸ್ ಓದೋದನ್ನು ಅಮ್ಮನಿಗೆ ಮಾತ್ರ ಹೇಳಿ ಹೋಗಿದ್ರು. ಅಮ್ಮನಿಗೆ ಮಗಳು ಟಿವಿಯಲ್ಲಿ ಹೇಗೆ ಕಾಣ್ತಾಳೆ ಅನ್ನೋ ಕುತೂಹಲ…! ಆದ್ರೆ, ರೋಹಿಣಿ ನ್ಯೂಸ್ ಓದೋದು ಅಪ್ಪ, ಅಕ್ಕಂದಿರಿಗೆ ಗೊತ್ತೇ ಇರ್ಲಿಲ್ಲ…! ಅವರಿಗದು ಸರ್ಪೈಸ್…!
ರೋಹಿಣಿ ಅವರು ಹುಟ್ಟಿದ್ದು, ಬೆಳೆದಿದ್ದೆಲ್ಲಾ ಬೆಂಗಳೂರಲ್ಲಿ. ತಂದೆ ದಿನಕರ್, ತಾಯಿ ಅನ್ನಪೂರ್ಣ. ರಾಗಿಣಿ ಮತ್ತು ರಜನಿ ಅಕ್ಕಂದಿರು. ಪತಿ ವೆಂಕಟೇಶ್ ಅಡಿಗ, ಮಗಳು ಶಿವನ್ಯ.
ಸ್ಟೆಲ್ಲಾ ಮೇರೀಸ್ ನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಪಿಯುಸಿ ಹಾಗೂ ಪದವಿ (ಬಿಎ)ಯನ್ನು ಅಮ್ಮಣ್ಣಿ ಕಾಲೇಜಿನಲ್ಲಿ ಮಾಡಿದ್ರು.
ಶಾಲ ದಿನಗಳಲ್ಲಿ ಪ್ರೇಯರ್ ಟೈಮಲ್ಲಿ ಸೀನಿಯರ್ಸ್ ನ್ಯೂಸ್ ಪೇಪರ್ ಓದುವುದನ್ನು ನೋಡಿ, ನಾನೂ ಮುಂದೆ ನ್ಯೂಸ್ ಓದ್ಬೇಕು ಅಂತ ದಿನನಿತ್ಯ ಬೆಳಗ್ಗೆ ಮನೆಯಲ್ಲಿ ನ್ಯೂಸ್ ಪೇಪರ್ ಓದ್ತಿದ್ರು. ದೂರದರ್ಶನದಲ್ಲಿ ಬರ್ತಿದ್ದ ನ್ಯೂಸ್ ನೋಡಿ, ಅನುಕರಣೆ ಮಾಡ್ತಿದ್ರು. ಕಾಲೇಜು ಮೆಟ್ಟಿಲು ಹತ್ತುವಷ್ಟರಲ್ಲಿ ನ್ಯೂಸ್ ಆ್ಯಂಕರ್ ಆಗ್ಬೇಕು ಎಂಬ ಆಸೆ ಗಟ್ಟಿಯಾಗಿ ಮನಸ್ಸಲ್ಲಿ ಬೇರೂರಿತ್ತು.
ಕಾಲೇಜು ದಿನಗಳಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ತಿದ್ರು. ಅಪ್ಪ-ಅಮ್ಮ ಕೂಡ ತುಂಬಾನೇ ಪ್ರೋತ್ಸಾಹ ನೀಡಿದ್ರು.
ಸುವರ್ಣ ಚಾನಲ್ ನಲ್ಲಿ ಚರ್ಚಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ರು. ಅವರ ಭಾಗವಹಿಸುವಿಕೆಯನ್ನು ಗಮನಿಸಿದ ಅಂದು ಸುವರ್ಣದಲ್ಲಿದ್ದ ಪತ್ರಕರ್ತ, ನಿರೂಪಕ ಚನ್ನವೀರ ಸಗರನಾಳ್ ಅವರು, ನೀವು ಸಿನಿಮಾ, ಧಾರವಾಹಿಗಳಿಗೆ ಪ್ರಯತ್ನಿಸಬಹುದಲ್ಲ ಅಂದ್ರು. ಇಲ್ಲ, ನನಗೆ ನ್ಯೂಸ್ ಆ್ಯಂಕರ್ ಆಗ್ಬೇಕೆಂಬ ಆಸೆಯಿದೆ ಅಂತ ರೋಹಿಣಿ ಹೇಳಿಕೊಂಡ್ರು.
ಚನ್ನವೀರ ಸಗರನಾಳ್ ಅವರು ಉದಯ ಟಿವಿಯ ಜಯಶ್ರೀ ಶೇಖರ್ ಅವರಿಗೆ ರೋಹಿಣಿ ಅವರನ್ನು ರೆಫರ್ ಮಾಡಿದ್ರು. ಆ ಮೂಲಕ ಉದಯ ಸಂಪರ್ಕ ಪಡೆದ ರೋಹಿಣಿ ಇಂಟರ್ ವ್ಯೂ ಅಟೆಂಡ್ ಮಾಡಿ, ಸ್ಕ್ರೀನ್ ಟೆಸ್ಟ್ ನಲ್ಲಿ ಪಾಸ್ ಆಗಿ 2007ರಲ್ಲಿ ಉದಯ ಟಿವಿಗೆ ಸೇರಿದ್ರು. ಇಲ್ಲಿಂದ ಇವರ ಮೀಡಿಯಾ ಜರ್ನಿ ಶುರುವಾಗುತ್ತೆ.
2010ರಲ್ಲಿ ಕಸ್ತೂರಿಗೆ ಪಾದಾರ್ಪಣೆ, ಅಲ್ಲಿ ಮನೋಜ್ ಕುಮಾರ್, ಆನಂದ ಅವರ ಪ್ರೋತ್ಸಾಹದಿಂದ ಆರೇಳು ತಿಂಗಳು ಕೆಲಸ ಮಾಡಿ ಹೊಸದಾಗಿ ಆರಂಭವಾಗುತ್ತಿದ್ದ ಜನಶ್ರೀ ಕುಟುಂಬಕ್ಕೆ ಎಂಟ್ರಿ ಕೊಡ್ತಾರೆ. ಅನಂತ ಚಿನಿವಾರ್ ಅವರು ತಮ್ಮನ್ನು ತುಂಬಾ ಪ್ರೋತ್ಸಾಹಿಸಿದ್ದನ್ನು ಮರೆಯುವುದಿಲ್ಲ. 2016ರಲ್ಲಿ ಮಗಳು ಹುಟ್ಟುವವರೆಗೆ ಜನಶ್ರೀಯಲ್ಲಿಯೇ ಇದ್ರು.
ಸದ್ಯ ಮಗಳ ಜೊತೆ ಕಾಲಕಳೆಯುತ್ತಿದ್ದಾರೆ. ಜೊತೆಗೆ ಫ್ರೀ ಲ್ಯಾನ್ಸರ್ ಆಗಿ ಟಿಡಿಸಿ, ಐಸಿರಿಯಲ್ಲಿ ಆಗಾಗ ಕಾಣಿಸಿಕೊಳ್ತಿರುತ್ತಾರೆ. ಮಗಳಿಗೆ ಶಾಲೆಯ ದಾರಿ ತೋರಿಸಿ, ಶೀಘ್ರದಲ್ಲೇ ಸುದ್ದಿಮಾಧ್ಯಮದ ಕಡೆ ಪುನರಾಗಮನ ಮಾಡಲಿದ್ದಾರೆ.
ಇವರು ಹೆಚ್ಚಾಗಿ ಜ್ಯೋತಿಷ್ಯ, ಸ್ಪೆಷಲ್ ಸೆಗಮೆಂಟ್ಸ್, ಸಿನಿಮಾಗೆ ಸಂಬಂಧಿಸಿದ ಪ್ರೋಗ್ರಾಂ, ದೇವರು-ದೇವಾಲಯಗಳು, ವೈದ್ಯಕೀಯಕ್ಕೆ ಸಂಬಂಧಿಸಿದಕಾರ್ಯಕ್ರಮಗಳು, ಹಲವಾರು ಚರ್ಚಾ ಕಾರ್ಯಕ್ರಮಗಳನ್ನು ನಡೆಸಿಕೊಡುವುದರ ಮೂಲಕ ಜನಮಾನಸದಲ್ಲಿ ನೆಲೆಸಿದ್ದಾರೆ.
ಜನಶ್ರೀಯಲ್ಲಿರುವಾಗ ರವಿಬೆಳೆಗೆರೆ ಅವರ ಜೊತೆ, ಪಾವಗಡ ಪ್ರಕಾಶ್ ಅವರೊಡನೆ ನಡೆಸಿಕೊಟ್ಟ ಡಿಸ್ಕಷನ್ ಗಳು ಸ್ಮರಣೀಯ ಎಂದು ಹೇಳಿಕೊಳ್ತಾರೆ.
ಸಂಗೀತ ಕೇಳುವುದು ಇವರಿಗಿಷ್ಟ. ಫೋಟೋಗ್ರಫಿ ಕ್ರೇಜ್ ಇದೆ. ಜೋಳದ ರೊಟ್ಟಿ, ಚಪಾತಿ, ಚಂಪಾಕಲಿ ಇಷ್ಟದ ತಿನಿಸುಗಳು. ಸ್ಟ್ರಾಂಗ್ ಶುಂಠಿ ಚಹಾ ಆಲ್ ಟೈಮ್ ಫೇವರೆಟ್…
ಹೈಸ್ಕೂಲ್ ದಿನಗಳಲ್ಲಿಯೇ ಇವರಿಗೆ ಸಿನಿಮಾ ಆಫರ್ ಬಂದಿತ್ತು. ಶಿವಣ್ಣ ನಟನೆಯ ಪರಮೇಶಿ ಪಾನ್ ವಾಲ, ಪುನೀತ್ ಅಭಿನಯದ ಅರಸು ಚಿತ್ರದಲ್ಲಿ ನಟಿಸಲು ಅವಕಾಶ ಒದಗಿ ಬಂದಿತ್ತು. ಆದ್ರೆ, ನ್ಯೂಸ್ ಆ್ಯಂಕರೇ ಆಗ್ಬೇಕೆಂದು ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ರು.
ಹ್ಞಾಂ, ಇನ್ನೊಂದು ವಿಷ್ಯ ಹೇಳಲೇ ಬೇಕು. ಇವರನ್ನು ಸ್ನೇಹಿತರು ಪ್ರೀತಿಯಿಂದ “ಲೇಡಿಡಾನ್” ಅಂತಾರೆ…! ಯಾವುದಕ್ಕೂ, ಯಾವ ಸಂದರ್ಭದಲ್ಲೂ ಹೆದರದ ವ್ಯಕ್ತಿ, ವ್ಯಕ್ತಿತ್ವ.ಸ್ನೇಹಿತರೆಂದ್ರೆ ಪ್ರಾಣ ಬಿಡೋ ಸ್ನೇಹ ಜೀವಿ ರೋಹಿಣಿ.
ಎಲ್ಲಕ್ಕಿಂತ ಮುಖ್ಯವಾಗಿ ವೈದ್ಯಕೀಯ ಕ್ಷೇತ್ರದ ಬಗ್ಗೆ ಎಲ್ಲಿಲ್ಲದ ಆಸಕ್ತಿ. ಕಲಾ ವಿದ್ಯಾರ್ಥಿಯಾಗಿದ್ದರೂ ವೈದ್ಯಕೀಯದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳುತ್ತಿರುತ್ತಾರೆ. ಬರವಣಿಗೆ ಅಂದ್ರೆ ಇವರಿಗೆ ತುಂಬಾ ಇಷ್ಟ. ಅದರಲ್ಲೂ ವೈದ್ಯಕೀಯದ ಬಗ್ಗೆ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ.
ಮನೆ ಮದ್ದುಗಳ ಬಗ್ಗೆ ಸಂಗ್ರಹಿಸಿ ಬರೆದ್ದಾರೆ…! ಇದನ್ನು ಪುಸ್ತಕ ರೂಪದಲ್ಲಿ ಹೊರತರುವ ಯೋಚನೆ ಇದೆ. ಇವರ ಫ್ರೆಂಡ್ಸ್ ಆರೋಗ್ಯದ ಬಗ್ಗೆ ಏನೇ ಮಾಹಿತಿ ಬೇಕಂದ್ರು ಇವರಿಗೇ ಕಾಲ್ ಮಾಡೋದು.
ಹೆಲ್ತ್ ಕ್ಲಬ್ ನ ಸದಸ್ಯೆ ಕೂಡ ಆಗಿದ್ದಾರೆ. ನ್ಯೂಟ್ರೀಷನ್ ಕ್ಲಬ್ ನ ಕರುಣಾಕರ್ ಅವರಿಂದ ಆರೋಗ್ಯದ ಬಗ್ಗೆ ಸಾಕಷ್ಟು ಮಾಹಿತಿ ಪಡೆದಿದ್ದೇನೆ ಎಂದು ಹೇಳುತ್ತಾರೆ ರೋಹಿಣಿ.
ಕೃಷಿ ಬಗ್ಗೆ ಅಷ್ಟೊಂದು ತಿಳುವಳಿಕೆಯಿಲ್ಲ, ಒಂದಿಷ್ಟು ತಿಳಿದು ಭವಿಷ್ಯದಲ್ಲಿ ಕೃಷಿಯಲ್ಲೂ ತೊಡಗಿಸಿಕೊಳ್ಳಬೇಕೆಂದ್ದಾರೆ. ಹೆತ್ತವರು, ಅತ್ತೆ ಮಾವ ಎಲ್ಲರೂ ತುಂಬಾ ಸಪೋರ್ಟೀವ್ ಆಗಿದ್ದಾರೆ ಎನ್ನುತ್ತಾರೆ.
ಜೀವನದ ಪ್ರತಿ ಹಂತದಲ್ಲೂ “ನನ್ನನ್ನು ಮೊದಲು ಮುಂದೆ ಬಿಟ್ಟು ನಿನ್ನಿಂದ ಇದು ಸಾಧ್ಯ, ನಡಿ ಮುನ್ನುಗ್ಗು” ಎಂದು ಬೆನ್ನು ತಟ್ಟುವ ಪತಿಯ ಬಗ್ಗೆ ಖುಷಿಯಿಂದ ಹೇಳಿಕೊಳ್ಳುತ್ತಾರೆ.
ಹೊಯ್ಸಳ ಗಸ್ತುವಾಹನಕ್ಕೆ ಇವರು ಮತ್ತು ಇವರ ಪತಿ ವೆಂಕಟೇಶ್ ಅವರು ಕಂಠದಾನ ಮಾಡಿದ್ದರು. ಸುಮಾರು 2-3 ವರ್ಷ ಹೊಯ್ಸಳದಲ್ಲಿ ಇವರ ದನಿ ಕೇಳಿಬರುತ್ತಿತ್ತು. ಈ ಬಗ್ಗೆ ಬೆಂಗಳೂರು ಮಿರರ್‍ನಲ್ಲಿ ಲೇಖನ ಬಂದಿತ್ತು. ಅದು ತುಂಬಾ ಸರ್ಪೈಸ್ ಆಗಿತ್ತು. ಅಷ್ಟೇಅಲ್ಲದ ಇವರ ಬಗ್ಗೆ ಕೇಬಲ್ ವಾರ್ತೆ ಎಂಬ ನಿಯತಕಾಲಿಕೆಯಲ್ಲಿ ಲೇಖನ ಪ್ರಕಟವಾಗಿದೆ.
ರೋಹಿಣಿ ಮತ್ತು ವೆಂಕಟೇಶ್ ಅವರಿಬ್ಬರೂ ಅಮಿತಾ ಬಚ್ಚನ್, ಕಮಲ ಹಾಸನ್, ರಜನಿಕಾಂತ್ ಅಭಿಮಾನಿಗಳು. ಅಮಿತಾ ಬಚ್ಚನ್ ಅವರ ಅಕ್ಕ-ಪಕ್ಕದಲ್ಲೇ ಕುಳಿತು ‘ಪಾ’ ಸಿನಿಮಾ ನೋಡಿದ್ದನ್ನು, ಕಮಲ ಹಾಸನ್ ಅವರನ್ನು ಭೇಟಿ ಮಾಡಿದ್ದನ್ನು ರೋಹಿಣಿ ನೆನೆಯುತ್ತಾರೆ.
ತಾನು ಓದಿದ ಸ್ಟೆಲ್ಲಾ ಮೇರೀಸ್ ಶಾಲೆಯಲ್ಲಿ ಸ್ವಲ್ಪ ದಿನ ಯೋಗ ಟೀಚರ್ ಆಗಿ ಸೇವೆಸಲ್ಲಿಸಿದ್ದ ರೋಹಿಣಿ ಅವರು ಇವತ್ತಿಗೂ ಶಾಲೆಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಪಾಲ್ಗೊಳ್ಳುತ್ತಿರುತ್ತಾರೆ. ಮುಂಬೈ ಸೇರಿದಂತೆ ಹೊರ ಊರುಗಳಲ್ಲಿ ಸ್ಟೇಜ್ ಈವೆಂಟ್ ನಡೆಸಿಕೊಟ್ಟಿದ್ದಾರೆ. ನಾನಾ ಸಂಘ-ಸಂಸ್ಥೆಗಳು ಇವರನ್ನು ಸನ್ಮಾಸಿವೆ..
-ಶಶಿಧರ್ ಎಸ್ ದೋಣಿಹಕ್ಲು
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
1) 10 ನವೆಂಬರ್ 2017 : ಈಶ್ವರ್ ದೈತೋಟ
2)11 ನವೆಂಬರ್ 2017 : ಭಾವನ
3)12 ನವೆಂಬರ್ 2017 : ಜಯಶ್ರೀ ಶೇಖರ್
4)13 ನವೆಂಬರ್ 2017 : ಶೇಷಕೃಷ್ಣ
5)14 ನವೆಂಬರ್ 2017 : ಶ್ರೀಧರ್ ಶರ್ಮಾ
6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ
7)16 ನವೆಂಬರ್ 2017 : ಅರವಿಂದ ಸೇತುರಾವ್
8)17 ನವೆಂಬರ್ 2017 : ಲಿಖಿತಶ್ರೀ
9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ
10)19 ನವೆಂಬರ್ 2017 : ಅಪರ್ಣಾ
11)20 ನವೆಂಬರ್ 2017 : ಅಮರ್ ಪ್ರಸಾದ್
12)21 ನವೆಂಬರ್ 2017 : ಸೌಮ್ಯ ಮಳಲಿ
13)22 ನವೆಂಬರ್ 2017 : ಅರುಣ್ ಬಡಿಗೇರ್
14)23ನವೆಂಬರ್ 2017 : ರಾಘವ ಸೂರ್ಯ
15)24ನವೆಂಬರ್ 2017 : ಶ್ರೀಲಕ್ಷ್ಮಿ
16)25ನವೆಂಬರ್ 2017 : ಶಿಲ್ಪ ಕಿರಣ್
17)26ನವೆಂಬರ್ 2017 : ಸಮೀವುಲ್ಲಾ
18)27ನವೆಂಬರ್ 2017 : ರಮಾಕಾಂತ್ ಆರ್ಯನ್
19)28ನವೆಂಬರ್ 2017 : ಮಾಲ್ತೇಶ್
20)29/30ನವೆಂಬರ್ 2017 : ಶ್ವೇತಾ ಆಚಾರ್ಯ [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ. ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]
21)30ನವೆಂಬರ್ 2017 : ಸುರೇಶ್ ಬಾಬು
22)01 ಡಿಸೆಂಬರ್ 2017 : ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)
23)02 ಡಿಸೆಂಬರ್ 2017 : ಶಶಿಧರ್ ಭಟ್
24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್
25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ
26)05 ಡಿಸೆಂಬರ್ 2017 : ಶ್ರುತಿ ಜೈನ್
27)06ಡಿಸೆಂಬರ್ 2017 : ಅವಿನಾಶ್ ಯುವನ್
28)07ಡಿಸೆಂಬರ್ 2017 : ಶಿಲ್ಪ ಕೆ.ಎನ್
29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ
30)09ಡಿಸೆಂಬರ್ 2017 : ಸಂದೀಪ್ ಕುಮಾರ್
31)10ಡಿಸೆಂಬರ್ 2017 : ಪ್ರತಿಮಾ ಭಟ್
32)11ಡಿಸೆಂಬರ್ 2017 : ಹರೀಶ್ ಪುತ್ರನ್
33)12ಡಿಸೆಂಬರ್ 2017 : ನಿಶಾ ಶೆಟ್ಟಿ
34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ
35)14ಡಿಸೆಂಬರ್ 2017 : ಹಬೀಬ್ ದಂಡಿ
36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್
37)16ಡಿಸೆಂಬರ್ 2017 : ಜ್ಯೋತಿ ಇರ್ವತ್ತೂರು
38)17ಡಿಸೆಂಬರ್ 2017 : ಶಿಲ್ಪ ಐಯ್ಯರ್
39)18ಡಿಸೆಂಬರ್ 2017 : ನಾಝಿಯಾ ಕೌಸರ್
40) 19ಡಿಸೆಂಬರ್ 2017 : ಶ್ರುತಿಗೌಡ
41) 20ಡಿಸೆಂಬರ್ 2017 : ಎಂ.ಆರ್ ಶಿವಪ್ರಸಾದ್
42) 21ಡಿಸೆಂಬರ್ 2017 : ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)
43) 22ಡಿಸೆಂಬರ್ 2017 : ಶರ್ಮಿತಾ ಶೆಟ್ಟಿ
44) 23ಡಿಸೆಂಬರ್ 2017 : ಕಾವ್ಯ
45) 24ಡಿಸೆಂಬರ್ 2017 : ಹರ್ಷವರ್ಧನ್ ಬ್ಯಾಡನೂರು
46) 25ಡಿಸೆಂಬರ್ 2017 : ಸುಧನ್ವ ಖರೆ
47) 26ಡಿಸೆಂಬರ್ 2017 : ಸೌಜನ್ಯ ಕೀರ್ತಿ
48) 27ಡಿಸೆಂಬರ್ 2017 :ವಾಣಿ ಕೌಶಿಕ್
49) 28ಡಿಸೆಂಬರ್ 2017 : ಸುಗುಣ
50) 29ಡಿಸೆಂಬರ್ 2017 : ಜಯಪ್ರಕಾಶ್ ಶೆಟ್ಟಿ
ಡಿಸೆಂಬರ್ ೩೦ ಮತ್ತು ೩೧ ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ.
51) 01ಜನವರಿ 2018 :ಐಶ್ವರ್ಯ ಎ.ಎನ್
52) 02ಜನವರಿ 2018 :ಶ್ರೀಧರ್ ಆರ್
53) 03ಜನವರಿ 2018 : ದಿವ್ಯಶ್ರೀ
54) 04ಜನವರಿ 2018 : ಮಂಜುಳ ಮೂರ್ತಿ
55) 05ಜನವರಿ 2018 : ಅಭಿಷೇಕ್ ರಾಮಪ್ಪ
56) 06ಜನವರಿ 2018 : ರೋಹಿಣಿ ಅಡಿಗ