ಆಳ್ವಾಸ್ ನಲ್ಲಿ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ

Date:

ಮೂಡಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಹುಟ್ಟುಹಬ್ಬದ ದಿನದಂದೇ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಪ್ರಥಮ ಪಿಯುಸಿ ವಿದ್ಯಾರ್ಥಿ ತೇಜಸ್ (16) ಮೃತ. ಬೆಂಗಳೂರು ಮೂಲದ ಈತ ಡೆತ್‍ನೋಟ್ ಬರೆದಿಟ್ಟು ಆಳ್ವಾಸ್ ಕ್ಯಾಂಪಸ್ ನ ನಂದಿನಿ ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.

ತಾಯಿಯನ್ನು ಕಳೆದುಕೊಂಡ ನೋವನ್ನು ಡೆತ್ ನೋಟ್ ನಲ್ಲಿ ತೇಜಸ್ ಉಲ್ಲೇಖಿಸಿದ್ದಾನೆ. ಸೋಮವಾರ ತೇಜಸ್ ಹುಟ್ಟುಹಬ್ಬದ ಪ್ರಯುಕ್ತ ತಂದೆ ಮತ್ತು ಚಿಕ್ಕಮ್ಮ (ತಂದೆಯ ಎರಡನೇ ಹೆಂಡತಿ) ತೇಜಸ್ ನನ್ನು ಭೇಟಿ ಆಗಿದ್ದರು. ಮಾತಾಡುವಾಗ ತಂದೆ ತನ್ನ ಬೆನ್ನುನೋವು ಸಮಸ್ಸೆ ಬಗ್ಗೆ ಹೇಳಿಕೊಂಡಿದ್ದರು. ಇದರಿಂದ ತೇಜಸ್ ನೊಂದುಕೊಂಡಿದ್ದ ಎಂದು ಸ್ನೇಹಿತರು ಹೇಳಿದ್ದಾರೆ.
ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿ ಕಾವ್ಯ 2017ರ ಜುಲೈ 20ರಂದು ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದನ್ನು ಆಕೆಯ ಪೋಷಕರು ಕೊಲೆ ಎಂದು ಆರೋಪಿಸಿದ್ದರು. ಈ ಪ್ರಕರಣ ಇನ್ನೂ ಹಸಿರಾಗಿರುವಂತೆಯೇ ಆಳ್ವಾಸ್‍ನಲ್ಲಿ ಮತ್ತೊಬ್ಬ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.

Share post:

Subscribe

spot_imgspot_img

Popular

More like this
Related

ರೈತರ ಬೇಡಿಕೆಗೆ ಮಣಿದ ಸರ್ಕಾರ: ಕಬ್ಬು ಟನ್‌ʼಗೆ 3300 ರೂ. ಬೆಲೆ ನಿಗದಿ

ರೈತರ ಬೇಡಿಕೆಗೆ ಮಣಿದ ಸರ್ಕಾರ: ಕಬ್ಬು ಟನ್‌ʼಗೆ 3300 ರೂ. ಬೆಲೆ...

ಸಕ್ಕರೆ ಲಾಬಿಯ ಒತ್ತಡಕ್ಕೆ ಸಿಎಂ ಮಣಿದಿರುವ ಸಾಧ್ಯತೆ ಇದೆ: ಹೆಚ್.ಡಿ. ಕುಮಾರಸ್ವಾಮಿ

ಸಕ್ಕರೆ ಲಾಬಿಯ ಒತ್ತಡಕ್ಕೆ ಸಿಎಂ ಮಣಿದಿರುವ ಸಾಧ್ಯತೆ ಇದೆ: ಹೆಚ್.ಡಿ. ಕುಮಾರಸ್ವಾಮಿ ಮೈಸೂರು:...

ಕರ್ನಾಟಕದ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸಾಧಾರಣ ಮಳೆ: ಹವಾಮಾನ ಇಲಾಖೆ

ಕರ್ನಾಟಕದ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸಾಧಾರಣ ಮಳೆ: ಹವಾಮಾನ ಇಲಾಖೆ ಬೆಂಗಳೂರು: ಕರ್ನಾಟಕದಲ್ಲಿ...

ಬೆಳಿಗ್ಗೆ ನುಗ್ಗೆಕಾಯಿ ರಸ ಕುಡಿಯುವ ಅಭ್ಯಾಸ ಮಾಡಿಕೊಂಡ್ರೆ ಪ್ರಯೋಜನಗಳೇನು ಗೊತ್ತಾ..?

ಬೆಳಿಗ್ಗೆ ನುಗ್ಗೆಕಾಯಿ ರಸ ಕುಡಿಯುವ ಅಭ್ಯಾಸ ಮಾಡಿಕೊಂಡ್ರೆ ಪ್ರಯೋಜನಗಳೇನು ಗೊತ್ತಾ..? ನುಗ್ಗೆಕಾಯಿ (Drumstick)...