ಬಡತನ, ಅವಮಾನ ವ್ಯಕ್ತಿಯನ್ನು ಗಟ್ಟಿಗೊಳಿಸುತ್ತವೆ…! ಉಳಿಯ ಪೆಟ್ಟು ತಿಂದ ಕಲ್ಲು ಮಾತ್ರ ವಿಗ್ರಹವಾಗುವುದು. ಹಾಗೇ ಚಂದನ ವಾಹಿನಿಯ ಸುಪ್ರಸಿದ್ಧ ನಿರೂಪಕ ಕೆ.ಸಿ ಶಿವರಾಂ ಅವರು…! ಅವಮಾನ, ಬಡತನ, ನೋವಿನ ದಿನಗಳನ್ನು ಎದುರಿಸಿ, ನಂಬಿದವರಿಂದ ಮೋಸ ಹೋಗುತ್ತಾ ಬೆಳೆದವರು.
ಚಂದನ ವಾಹಿನಿಯಲ್ಲಿ ಸಂದರ್ಶನಗಳ ಮೂಲಕ ಬ್ರಾಂಡ್ ಆಗಿರೋ ಶಿವರಾಂ ಅವರ ಪರಿಚಯ ಖಂಡಿತಾ ನಿಮಗಿರುತ್ತೆ. ಇವರು ನಡೆಸಿಕೊಡುತ್ತಿದ್ದ ‘ಬೆಳಕು’ ಕಾರ್ಯಕ್ರಮ ನಿಮಗಿನ್ನೂ ನೆನಪಿದೆ ಅಲ್ಲವೇ…?
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕೆ.ಪಿ ದೊಡ್ಡಿ ಎಂಬ ಪುಟ್ಟ ಹಳ್ಳಿಯಲ್ಲಿ ಬಡ ರೈತಕುಟುಂಬದಲ್ಲಿ ಹುಟ್ಟಿದವರು ಕೆ.ಸಿ ಶಿವರಾಂ. ತಂದೆ ಚಲುವಯ್ಯ, ತಾಯಿ ಬೋರಮ್ಮ. ತಂದೆ-ತಾಯಿ ನಾಲ್ಕು ಮಕ್ಕಳಲ್ಲಿ ಶಿವರಾಂ 3ನೇಯವರು. ಪತ್ನಿ ಶಾರದ, ಶಶಾಂಕ್ ಮತ್ತು ಶ್ರವಣ ಮಕ್ಕಳು.
ತನ್ನ 7ನೇ ವಯಸ್ಸಿನಲ್ಲೇ ಶಿವರಾಂ ತಾಯಿಯನ್ನು ಕಳೆದುಕೊಳ್ಳುತ್ತಾರೆ. ಒಂದೆಡೆ ಬಡತನ, ಇನ್ನೊಂದೆಡೆ ಅಮ್ಮನ ಪ್ರೀತಿ ಸಿಗದ ನೋವು. ಬದುಕಿನುದ್ದಕ್ಕೂ ಕಷ್ಟ, ಅವಮಾನಗಳು ಎದುರಾದವು. ಆದ್ರೆ, ಅವುಗಳಿಗೆ ಹೆದರದೆ ಸವಾಲಾಗಿ ಸ್ವೀಕರಿಸಿದ್ರು.
ಹುಟ್ಟೂರಿನ ಸಮೀಪದ ಕಲ್ಲು ದೇವರಹಳ್ಳಿಯಲ್ಲಿ ಪ್ರಾಥಮಿಕ, ಮಾಗಡಿಯಲ್ಲಿ ಮಾಧ್ಯಮಿಕ ಮತ್ತು ಪದವಿ ಪೂರ್ವ ಶಿಕ್ಷಣ, ಬೆಂಗಳೂರು ಭಗವಾನ್ ಬುದ್ಧ ಪ್ರಥಮದರ್ಜೆ ಕಾಲೇಜಿನಲ್ಲಿ ಬಿಎ ಪದವಿ ಹಾಗೂ ಬೆಂಗಳೂರು ವಿವಿಯಲ್ಲಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
ಚಿಕ್ಕಂದಿನಿಂದಲೂ ಮಾಧ್ಯಮದಲ್ಲಿ ಕೆಲಸ ಮಾಡುವ ಕನಸಿತ್ತು. ಸಮಾಜ ಕಲ್ಯಾಣ ಇಲಾಖೆಯಿಂದ ಪ್ರಜಾವಾಣಿಯಲ್ಲಿ 1ವರ್ಷದ ಪತ್ರಿಕೋದ್ಯಮ ಡಿಪ್ಲೋಮ ಪದವಿಯನ್ನು ಪಡೆದ ಬಳಿಕ ಆಸೆ ಇಮ್ಮಡಿಯಾಯಿತು. ಆದರೆ, ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವಿ ಬಳಿಕ ಉಪನ್ಯಾಸ ವೃತ್ತಿ ಆರಂಭಿಸಿದರು. ಸುಮಾರು 11 ವರ್ಷಗಳ ಕಾಲ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ.
ಉಪನ್ಯಾಸಕ ವೃತ್ತಿಯ ಜೊತೆಗೆ ದಿನಪತ್ರಿಕೆ, ನಿಯತಕಾಲಿಕೆಗಳಿಗೆ ಸಾಕಷ್ಟು ಲೇಖನಗಳನ್ನು ಬರೆಯುತ್ತಿದ್ದರು. 2001ರಲ್ಲಿ ದೂರದರ್ಶನದ ಮೂಲಕ ದೃಶ್ಯ ಮಾಧ್ಯಮ ಕ್ಷೇತ್ರಕ್ಕೆ ಬಂದ ಶಿವರಾಂ ಅವರು ಸಂದರ್ಶನಗಳ ಸರದಾರರಾಗಿದ್ದಾರೆ…! 6,500ಕ್ಕೂ ಹೆಚ್ಚು ಮಂದಿ ಸಾಧಕರನು ಸಂದರ್ಶಿಸಿದ್ದಾರೆ. ‘ಬೆಳಗು’ ಕಾರ್ಯಕ್ರಮವೊಂದರಲ್ಲೇ ಸುಮಾರು 4500 ಮಂದಿಯನ್ನು ಸಂದರ್ಶಿಸಿದ ಕೀರ್ತಿ ಇವರದ್ದು. ‘ಹಲೋಗೆಳೆಯರೇ’ ಕಾರ್ಯಕ್ರಮ ಸೇರಿದಂತೆ ಹತ್ತಾರು ಕಾರ್ಯಕ್ರಮಗಳಲ್ಲಿ ಚಂದದ ನಿರೂಪಣೆ ಮೂಲಕ ಮನೆಮಾತಾಗಿದ್ದಾರೆ, ಮನಗೆದ್ದಿದ್ದಾರೆ.
ದೂರದರ್ಶನದ ಜೊತೆ ಜೊತೆಗೆ ‘ಅರ್ಕಾವತಿ’ ಎಂಬ ಮಾಸಪತ್ರಿಕೆಯ ಸಂಪಾದಕರಾಗಿ ದುಡಿದಿದ್ದಾರೆ. ಜಲ ಮತ್ತು ಪರಿಸರದ ಕುರಿತಾದ ಪತ್ರಿಕೆ ಇದಾಗಿತ್ತು. ಕಳೆದ 1 ವರ್ಷದಿಂದ ‘ಮಾರ್ಧನಿ’ ದಿನಪತ್ರಿಕೆ ಸಂಪಾದಕಾರಿಗಿದ್ದಾರೆ. ಹೀಗೆ ದೃಶ್ಯ ಮಾಧ್ಯಮ ಮತ್ತು ಮುದ್ರಣ ಮಾಧ್ಯಮ ಎರಡರಲ್ಲೂ ಬ್ಯುಸಿ ಇರೋ ಪತ್ರಕರ್ತರು ಶಿವರಾಂ.
ಗ್ರಾಮೀಣ, ಹಳ್ಳಿ ಭಾಗದ ಜನರಿಗೆ ಇದು ಆಗಲ್ಲ, ಅದಾಗಲ್ಲ ಅಂತ ಪ್ರಯತ್ನಿಸದೇ ಇರುವುದು ಸರಿಯಲ್ಲ. ನಿರಂತರ ಅಭ್ಯಾಸ, ಕಲಿಕೆಯಿಂದ ಎಲ್ಲವೂ ಸಾಧ್ಯ. ಸಿಕ್ಕ ಅವಕಾಶಗಳನ್ನು ಬಳಸಿಕೊಂಡರೆ ಗೆಲುವು ಶತಸಿದ್ಧ ಎನ್ನುವುದು ಶಿವರಾಂ ಅವರ ಅನುಭವದ ನುಡಿ.
ಜ್ಞಾನಪೀಠ ಪ್ರಶಸ್ತಿ ಪುರಸ್ಕøತರು ಸೇರಿದಂತೆ ದೊಡ್ಡ ದೊಡ್ಡ ವ್ಯಕ್ತಿಗಳ ಸಂದರ್ಶನ ಮತ್ತು ಹಳ್ಳಿಗಾಡಿನ ಜನರ ಸಂದರ್ಶನವನ್ನೂ ಮಾಡಿರೋ ಶಿವರಾಂ ಅವರಿಗೆ ಹಳ್ಳಿ, ಗುಡ್ಡಗಾಡಿನ ಜನರೊಂದಿಗೆ ನಡೆಸಿದ ಸಂದರ್ಶನ ಅತ್ಯಂತ ಖುಷಿ ಮತ್ತು ತೃಪ್ತಿ ತಂದುಕೊಟ್ಟಿದೆಯಂತೆ.
ಶಿವರಾಂ ಅವರು ಕಲಾವಿದರೂ ಸಹ ಹೌದು. ಅನೇಕ ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅಭಿನಯ, ಬರವಣಿಗೆ ಜೊತೆಗೆ ಹಾಡುವುದು ಸಹ ಇವರಿಗೆ ಸಿದ್ಧಿಸಿದೆ.
ಸ್ವಪ್ನ ಬುಕ್ ಹೌಸ್ ನ ಸಂಸ್ಥಾಪಕರಾದ ಸುರೇಶ್ ಅವರ ಜೀವನ ಚರಿತ್ರೆ, ದಲಿತ ರಾಜಕಾರಣ ಮೊದಲಾದ ಕೃತಿಗಳನ್ನು ಬರೆದಿದ್ದಾರೆ. ಜಲ ಮತ್ತು ಪರಿಸರ ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ. ಅರ್ಕಾವತಿ ಮತ್ತು ಕುಮುದ್ವತಿ ನದಿಗಳ ಪುನಶ್ಚೇತನಕ್ಕಾಗಿ ನಡೆದ ಜಲ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದರು.
ನಿರೂಪಣೆ, ದಿನಪತ್ರಿಕೆ, ಸಾಹಿತ್ಯ ಕೃಷಿ, ಪರಿಸರ ರಕ್ಷಣೆ ಹೋರಾಟ ಹೀಗೆ ಎಲ್ಲದರಲ್ಲೂ ಶಿವರಾಂ ಅವರಿದ್ದಾರೆ. ದಣಿವರಿಯದ ವ್ಯಕ್ತಿ, ವರ್ಣನೆಗೆ ನಿಲುಕುದ ದೊಡ್ಡ ವ್ಯಕ್ತಿತ್ವ.
-ಶಶಿಧರ್ ಎಸ್ ದೋಣಿಹಕ್ಲು
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
1) 10 ನವೆಂಬರ್ 2017 : ಈಶ್ವರ್ ದೈತೋಟ
2)11 ನವೆಂಬರ್ 2017 : ಭಾವನ
3)12 ನವೆಂಬರ್ 2017 : ಜಯಶ್ರೀ ಶೇಖರ್
4)13 ನವೆಂಬರ್ 2017 : ಶೇಷಕೃಷ್ಣ
5)14 ನವೆಂಬರ್ 2017 : ಶ್ರೀಧರ್ ಶರ್ಮಾ
6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ
7)16 ನವೆಂಬರ್ 2017 : ಅರವಿಂದ ಸೇತುರಾವ್
8)17 ನವೆಂಬರ್ 2017 : ಲಿಖಿತಶ್ರೀ
9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ
10)19 ನವೆಂಬರ್ 2017 : ಅಪರ್ಣಾ
11)20 ನವೆಂಬರ್ 2017 : ಅಮರ್ ಪ್ರಸಾದ್
12)21 ನವೆಂಬರ್ 2017 : ಸೌಮ್ಯ ಮಳಲಿ
13)22 ನವೆಂಬರ್ 2017 : ಅರುಣ್ ಬಡಿಗೇರ್
14)23ನವೆಂಬರ್ 2017 : ರಾಘವ ಸೂರ್ಯ
15)24ನವೆಂಬರ್ 2017 : ಶ್ರೀಲಕ್ಷ್ಮಿ
16)25ನವೆಂಬರ್ 2017 : ಶಿಲ್ಪ ಕಿರಣ್
17)26ನವೆಂಬರ್ 2017 : ಸಮೀವುಲ್ಲಾ
18)27ನವೆಂಬರ್ 2017 : ರಮಾಕಾಂತ್ ಆರ್ಯನ್
19)28ನವೆಂಬರ್ 2017 : ಮಾಲ್ತೇಶ್
20)29/30ನವೆಂಬರ್ 2017 : ಶ್ವೇತಾ ಆಚಾರ್ಯ [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ. ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]
21)30ನವೆಂಬರ್ 2017 : ಸುರೇಶ್ ಬಾಬು
22)01 ಡಿಸೆಂಬರ್ 2017 : ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)
23)02 ಡಿಸೆಂಬರ್ 2017 : ಶಶಿಧರ್ ಭಟ್
24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್
25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ
26)05 ಡಿಸೆಂಬರ್ 2017 : ಶ್ರುತಿ ಜೈನ್
27)06ಡಿಸೆಂಬರ್ 2017 : ಅವಿನಾಶ್ ಯುವನ್
28)07ಡಿಸೆಂಬರ್ 2017 : ಶಿಲ್ಪ ಕೆ.ಎನ್
29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ
30)09ಡಿಸೆಂಬರ್ 2017 : ಸಂದೀಪ್ ಕುಮಾರ್
31)10ಡಿಸೆಂಬರ್ 2017 : ಪ್ರತಿಮಾ ಭಟ್
32)11ಡಿಸೆಂಬರ್ 2017 : ಹರೀಶ್ ಪುತ್ರನ್
33)12ಡಿಸೆಂಬರ್ 2017 : ನಿಶಾ ಶೆಟ್ಟಿ
34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ
35)14ಡಿಸೆಂಬರ್ 2017 : ಹಬೀಬ್ ದಂಡಿ
36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್
37)16ಡಿಸೆಂಬರ್ 2017 : ಜ್ಯೋತಿ ಇರ್ವತ್ತೂರು
38)17ಡಿಸೆಂಬರ್ 2017 : ಶಿಲ್ಪ ಐಯ್ಯರ್
39)18ಡಿಸೆಂಬರ್ 2017 : ನಾಝಿಯಾ ಕೌಸರ್
40) 19ಡಿಸೆಂಬರ್ 2017 : ಶ್ರುತಿಗೌಡ
41) 20ಡಿಸೆಂಬರ್ 2017 : ಎಂ.ಆರ್ ಶಿವಪ್ರಸಾದ್
42) 21ಡಿಸೆಂಬರ್ 2017 : ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)
43) 22ಡಿಸೆಂಬರ್ 2017 : ಶರ್ಮಿತಾ ಶೆಟ್ಟಿ
44) 23ಡಿಸೆಂಬರ್ 2017 : ಕಾವ್ಯ
45) 24ಡಿಸೆಂಬರ್ 2017 : ಹರ್ಷವರ್ಧನ್ ಬ್ಯಾಡನೂರು
46) 25ಡಿಸೆಂಬರ್ 2017 : ಸುಧನ್ವ ಖರೆ
47) 26ಡಿಸೆಂಬರ್ 2017 : ಸೌಜನ್ಯ ಕೀರ್ತಿ
48) 27ಡಿಸೆಂಬರ್ 2017 :ವಾಣಿ ಕೌಶಿಕ್
49) 28ಡಿಸೆಂಬರ್ 2017 : ಸುಗುಣ
50) 29ಡಿಸೆಂಬರ್ 2017 : ಜಯಪ್ರಕಾಶ್ ಶೆಟ್ಟಿ
ಡಿಸೆಂಬರ್ ೩೦ ಮತ್ತು ೩೧ ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ.
51) 01ಜನವರಿ 2018 :ಐಶ್ವರ್ಯ ಎ.ಎನ್
52) 02ಜನವರಿ 2018 :ಶ್ರೀಧರ್ ಆರ್
53) 03ಜನವರಿ 2018 : ದಿವ್ಯಶ್ರೀ
54) 04ಜನವರಿ 2018 : ಮಂಜುಳ ಮೂರ್ತಿ
55) 05ಜನವರಿ 2018 : ಅಭಿಷೇಕ್ ರಾಮಪ್ಪ
56) 06ಜನವರಿ 2018 : ರೋಹಿಣಿ ಅಡಿಗ
57) 07ಜನವರಿ 2018 :ಮಾದೇಶ್ ಆನೇಕಲ್
58) 08ಜನವರಿ 2018 :ಶ್ರುತಿ ಕಿತ್ತೂರು
59) 08ಜನವರಿ 2018 : ಕೆ.ಸಿ ಶಿವರಾಂ