ಖ್ಯಾತ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಅವರು ಬಾಡಿಗೆ ಕಟ್ಟಿಲ್ಲ ಎಂದು ಫ್ರಾನ್ಸ್ ಕೋರ್ಟ್ ಅವರನ್ನು ಮನೆಯಿಂದ ಹೊರ ಹಾಕಿದೆ.
ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ಮಲ್ಲಿಕಾ ಶೆರಾವತ್ ತಾವು ವಾಸವಿದ್ದ ಮನೆಯ ಬಾಡಿಗೆಯನ್ನು ಕಟ್ಟಿರಲಿಲ್ಲ. ಶೆರಾವತ್ ಅವರು 78, 787 ಯುರೋ ಅಂದ್ರೆ ಸುಮಾರು 60 ಲಕ್ಷ ರೂ ಬಾಡಿಗೆ ಕಟ್ಟಬೇಕಿದ್ದು, ಈ ಹಣವನ್ನು ಕಟ್ಟಿಲ್ಲ ಎಂದು ಮಾಲೀಕ ಫ್ರಾನ್ಸ್ ಕೋರ್ಟ್‍ಗೆ ದೂರು ನೀಡಿದ್ದರು.
ಮಲ್ಲಿಕಾ ಮತ್ತು ಅವರ ಪತಿ ಮಾಸಿಕ 6,054 ಯೂರೋ (4.6 ಲಕ್ಷ ರೂ) ನೀಡುವುದಾಗಿ ಕರಾರು ಮಾಡಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದರ ವಿಚಾರಣೆ ನಡೆಸಿದ ಕೋರ್ಟ್ ಮಲ್ಲಿಕಾ ಅವರ ಪತಿ, ಫ್ರೆಂಚ್ ಮೂಲದ ಆಕ್ಸೆನ್ ಫನ್ಸ್ ಗೆ ಈ ಕೂಡಲೇ ಬಾಡಿಗೆ ಪಾವತಿಸುವಂತೆ ಆದೇಶಿಸಿತ್ತು. ಆದ್ರೆ, ಅವರು ಪಾವತಿಸಿದ್ದು ಕೇವಲ 2,715 ಯೂರೋ (2ಲಕ್ಷ ರೂ) ಮಾತ್ರ. ಇದರಿಂದ ಮಾಲೀಕ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಕೋರ್ಟ್ ಮಲ್ಲಿಕಾ ಮತ್ತು ಅವರ ಪತಿಯನ್ನು ಮನೆಯಿಂದ ಹೊರಗೆ ಹಾಕಿ, ಪೀಠೋಪಕರಣಗಳನ್ನು ಜಪ್ತಿ ಮಾಡಿದೆ. ಬಾಡಿಗೆ ಹಣವನ್ನು ಜಪ್ತಿ ಮಾಡಿರೋ ಪೀಠೋಪಕರಣಗಳ ಮೂಲಕ ಪಡೆಯುವಂತೆ ಮಾಲೀಕರಿಗೆ ಸೂಚಿಸಿದೆ.