ಮನೋವಿಕಾರ

0
214

ಮನೋವಿಕಾರ

ನಾನೆಂಬುದೇ ತುಳಿಯುತಿದೆ ನನ್ನ
ಅವನಿವನ – ಅವರಿವರ
ವಿಡಂಬನೆಯಲೇ ಕಾಲಕಳೆದವನು
ಊರ ಕಾವಲಿಗೆ ನಿಂತಾಗ
ನಿಂತಲ್ಲೇ ಕಂತೆಯ ಎಣಿಸ ಕುಂತವನು
ಹೊನ್ನ ಹೆಸರಲೇ ಮೂಗಗೊಣ್ಣೆಯ ಹೊತ್ತು
ತನ್ನವರ ಹೆಣದ ಹಣೆಯಲೂ
ಎಂಟಾಣಿ ಆಯುತಿರುವವನು
ಯಾರಿಲ್ಲದ ವೇಳೆ ವಿಕಾರವಾಗಿ
ಜನರೆದುರು ತಾನೊಬ್ಬನೇ ಆಕಾರದಿ
ಭಗೀರಥನೆಂದಾಗ
ಕಾಲವೇ ಅವನೊಳಗಿನ
ಅಹಂಕಾರವ ಉರಿಸಿ
ಈ ಜಗದಿಂದಲೇ ಅಳಿಸುವುದಂತೂ
ದಿಟವೆಂದನು ಕಾವ್ಯದತ್ತ.

?ದತ್ತರಾಜ್ ಪಡುಕೋಣೆ?

LEAVE A REPLY

Please enter your comment!
Please enter your name here