ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ 50ನೇ ಚಿತ್ರ ‘ಕುರುಕ್ಷೇತ್ರ’ ದಲ್ಲಿ ಬ್ಯುಸಿ ಇದ್ದಾರೆ. ಈ ನಡುವೆ 51ನೇ ಚಿತ್ರದ ತಯಾರಿ ಸದ್ದಿಲ್ಲದೆ ನಡೆಯುತ್ತಿದೆ.
ದರ್ಶನ್ ಅವರ 51ನೇ ಸಿನಿಮಾದಲ್ಲಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ನಾಯಕಿ.
ವಿಷ್ಣುವರ್ಧನ ಸಿನಿಮಾ ನಿರ್ದೇಶಿಸಿದ್ದ ಪಿ.ಕುಮಾರ್ ದರ್ಶನ್ ಮುಂದಿನ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಶೈಲಜಾ ನಾಗ್ ನಿರ್ಮಾಣದ ಈ ಸಿನಿಮಾಕ್ಕೆ ವಿ. ಹರಿಕೃಷ್ಣ ಸಂಗೀತ ನೀಡಲಿದ್ದಾರೆ. ಇದೊಂದು ಪಕ್ಕಾ ಸ್ವಮೇಕ್ ಸಿನಿಮಾ ಎನ್ನುತ್ತಿದ್ದಾರೆ ನಿರ್ದೇಶಕರು.
ಸಿನಿಮಾ ಶೂಟಿಂಗ್ ಫೆಬ್ರವರಿಯಲ್ಲಿ ಆರಂಭವಾಗಲಿದೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿರುತ್ತಾರೆ. ಇಬ್ಬರಲ್ಲಿ ಒಬ್ಬರು ರಶ್ಮಿಕಾ ಮಂದಣ್ಣ, ಇನ್ನೊಬ್ಬ ನಾಯಕಿಯ ಹುಡುಕಾಟ ನಡೀತಾ ಇದೆ. ಕೃತಿ ಕರಬಂಧ ಮತ್ತು ರಚಿತಾ ರಾಮ್ ಹೆಸರು ಕೇಳಿಬಂದಿದ್ದು ಅಂತಿಮವಾಗಿಲ್ಲ.