ಸಿನಿಮಾಗೆ ಹೋಗಿ ಕೂತಾಗ ಹೆಂಗಿರುತ್ತೋ ಏನೋ ಅನ್ನೋ ಡೌಟಿತ್ತು..! ಆದ್ರೂ ಟ್ರೇಲರ್ ಸಖತ್ತಾಗಿತ್ತು ಅನ್ನೋ ಕಾರಣಕ್ಕೆ ಮೊದಲ ದಿನವೇ ಸಿನಿಮಾಗೆ ಹೋಗಿದ್ದೆ. ಸಿನಿಮಾ ಮುಗಿಸಿ ಹೊರಗೆ ಬರುವಾಗ ಸಿಕ್ಕಿದ್ದೇನು ಗೊತ್ತಾ..? ಕೊಟ್ಟ ದುಡ್ಡಿಗೆ ಡಬಲ್ ಎಂಟರ್ಟೇನ್ಮೆಂಟ್ ಸಿಕ್ತು ಅನ್ನೋ ಸಮಾಧಾನ..! ಸಿನಿಮಾ ಎಲ್ಲೂ ಬೋರ್ ಹೊಡ್ಸಲ್ಲ, ಫುಲ್ ಕಾಮಿಡಿ ಟ್ರ್ಯಾಕಲ್ಲಿ ಹೋಗೋ ಸಿನಿಮಾ ಇನ್ನೇನು ಮುಗೀತು ಅನ್ಬೇಕಾದ್ರೆ ಒಳ್ಳೇ ಮೆಸೇಜ್ ಕೊಡುತ್ತೆ ..! ನಮ್ಮ ಶಿಕ್ಷಣ ವ್ಯವಸ್ಥೆಯ ಕರಾಳ ಮುಖ ಬಿಚ್ಚಿಡುತ್ತೆ…! ಅದೇ ಫಸ್ಟ್ ರ್ಯಾಂಕ್ ರಾಜು..!
ಸಿನಿಮಾ ಸಂಪೂರ್ಣ ಹೀರೋ ರಾಜು ಸುತ್ತ ಸುತ್ತುತ್ತೆ. ರಾಜು ಪಾತ್ರದಲ್ಲಿ ಗುರುನಂದನ್ ಸಖತ್ ಮಿಂಚಿದ್ದಾರೆ. ಬರೀ ಶಾಲೆಯ ಪಾಠಗಳಲ್ಲೇ ಮುಳುಗಿ ಹೋಗೋ ಬುದ್ಧಿವಂತ ಹುಡುಗ ಸಮಾಜದಲ್ಲಿ ಹೇಗೆ ದಡ್ಡ ಆಗ್ತಾನೆ ಅಂತ ತೋರಿಸ್ತಾನೆ ರಾಜು..! ಪುಟ್ಟ ಪುಟ್ಟ ವಿಷಯಗಳನ್ನೇ ತುಂಬಾ ಹಾಸ್ಯಾಸ್ಪದವಾಗಿ ತೋರಿಸಿದ್ದಾರೆ. ಕೆಲವೊಂದು ದೃಶ್ಯಗಳಲ್ಲಂತೂ ಜನ ಬಿದ್ದುಬಿದ್ದು ನಗಬೇಕಾಗಿ ಬರುತ್ತೆ. ಅಲ್ಲಲ್ಲಿ ಡಬಲ್ ಮೀನಿಂಗ್ ಡೈಲಾಗ್ ಇದ್ರೂ ಸಹ ಅದು ರಾಜುವಿನ ಮುಗ್ಧತೆ ಮುಂದೆ ಡಬಲ್ ಮೀನಿಂಗ್ ಅನ್ಸೋದಿಲ್ಲ..! ಹಾಗಾಗಿ ಇಡೀ ಫ್ಯಾಮಿಲಿ ರಾಜುವನ್ನು ಖುಷಿಯಾಗಿ ಎಂಜಾಯ್ ಮಾಡಬಹುದು. ಸಿನಿಮಾ ನೋಡಿ ಮನಸಾರೆ ನಕ್ಕು ತುಂಬಾ ದಿನವಾಗಿದೆ ಅಂತಾದ್ರೆ ಈಗಲೇ ರಾಜು ನೋಡೋಕೆ ಟಿಕೆಟ್ ಬುಕ್ ಮಾಡಿ..! ರಾಜು ಮೂಲಕ ನಿರ್ದೇಶಕ ನರೇಶ್ ಕುಮಾರ್ ಭರವಸೆಯ ನಿರ್ದೇಶಕ ಅಂತ ಅನ್ನಿಸಿಕೊಳ್ತಾರೆ. ಅಚ್ಯುತ್ ರಾವ್ ರಾಜುವಿನ ಅಪ್ಪನ ಪಾತ್ರದಲ್ಲಿ ೧೦೦% ಮಾರ್ಕ್ಸ್ ತಗೊಂಡಿದ್ದಾರೆ. ಅಪ್ಪ ಮಗ ಇಬ್ಬರು ಸಿನಿಮಾಗೆ ಪ್ಲಸ್ ಪಾಯಿಂಟ್..! ಒಂದೆರೆಡು ಹಾಡುಗಳು ಓಕೆ ಅನ್ನೋ ಹಾಗಿದೆ. ಆದ್ರೆ ಸಿನಿಮಾದ ಸಂಭಾಷಣೆಯ ಯಶಸ್ಸಿನ ಮುಂದೆ ಬೇರೆಲ್ಲಾ ಮರೆತುಹೋಗುತ್ತೆ..! ಒಟ್ಟಾರೆ ಹೇಳಬೇಕು ಅಂದ್ರೆ, ಕನ್ನಡಕ್ಕೆ ಫಸ್ಟ್ ರ್ಯಾಂಕ್ ರಾಜು ಒಂದು ಅದ್ಭುತ ಎಂಟರ್ಟೇನರ್.. ಟೆನ್ಷನ್ ಮರೆತು ಸಿನಿಮಾ ನೋಡಿ ನಗಬೇಕು ಅನ್ಸಿದ್ರೆ ರಾಜು ಬೆಸ್ಟ್ ಸಿನಿಮಾ..! ಸಿನಿಮಾ ತಂಡಕ್ಕೆ ಧನ್ಯವಾದ ಮತ್ತು ಶುಭಾಶಯ..! ಕನ್ನಡಿಗರು ನಿಮ್ಮ ಸಿನಿಮಾ ಗೆಲ್ಲಿಸಲಿ..ಮುಂದೆ ಇನ್ನಷ್ಟು ಸಿನಿಮಾಗಳು ಬರಲಿ..! ಜೈ ರಾಜು..
– ಕಿರಿಕ್ ಕೀರ್ತಿ(ಕೀರ್ತಿ ಶಂಕರಘಟ್ಟ)
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಭಿಕ್ಷೆ ಬೇಡ್ತಾ ಇದ್ದ ಅಜ್ಜಿಗೆ ತಿನ್ನಲು ಕೊಡುವಾಗ, ವ್ಯಾಪಾರಿ ಕೊಡಬೇಡಿ ಅಂದಿದ್ದೇಕೆ..?!
ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!
44 ವರ್ಷದ ನಂತರ ಜೈಲಿನಿಂದ ಹೊರಬಂದ ವ್ಯಕ್ತಿಯ ಪ್ರತಿಕ್ರಿಯೆ..!
ಇಡೀ ಜೀವನವನ್ನೇ ತಮ್ಮಂದಿರಿಗಾಗಿ ಮುಡಿಪಾಗಿಟ್ಟ ಅಣ್ಣ..!
ವಯಸ್ಸಾದ ಅಪ್ಪ ಬೆಂಗಳೂರಲ್ಲಿ ಒಬ್ಬಂಟಿ, ಮಗ ಹೆಂಡತಿ ಮಕ್ಕಳೊಡನೆ ಅಮೇರಿಕಾದಲ್ಲಿ..!
ರಾಹುಲ್ ಗಾಂಧಿ ಇಂದು ಮೇಕ್ ಇನ್ ಇಂಡಿಯಾ ವರ್ಕ್ ಆಗ್ತಿಯಾ ಅಂತ ಕೇಳಿದ್ರು..! ಬೆಂಗಳೂರು ಹುಡುಗೀರು ಏನಂದ್ರು ಗೊತ್ತಾ..?!
ಅಭಿಷೇಕ್ ಗೆ ಗೂಗಲ್ ನೀಡುತ್ತೆ 20000000 ರೂಪಾಯಿಗಳ ಸಂಬಳ..! ಐಐಟಿ ವಿದ್ಯಾರ್ಥಿಗೆ ಕೋಟಿ ಕೋಟಿ ಸಂಬಳದ ಆಫರ್ ..!