ಈಗ ರೇಡಿಯೋ ತರಂಗಾಂತರಗಳಿಂದ ಅಂತರ್ಜಾಲದ ಸಂಕೇತಗಳನ್ನು ರವಾನಿಸಲಾಗುತ್ತಿರೋದು ನಿಮಗೂ ಗೊತ್ತಿದೆ..! ಆದರೆ ಈಗ ಹೊಸ ವಿಧಾನವೊಂದನ್ನು ಪರಿಚಯಿಸಲಾಗಿದೆ..! ಸಾಂಪ್ರದಾಯಿಕ `ವೈ-ಫೈ’ ಬದಲಿಗೆ ಹೊಸ ಮಾದರಿಯ ಲಿ-ಫೈ ಈಗ ಸದ್ದು ಮಾಡ್ತಾ ಇದೆ..! ವೈ-ಫೈ ಗಿಂತ ೧೦೦ ಪಟ್ಟು ವೇಗವಾಗಿ ಅಂತರ್ಜಾಲವನ್ನು ಒದಗಿಸೋ ಲಿ-ಫೈ ಅನ್ನು ಕಛೇರಿಗಳಲ್ಲಿ ಬಳಸಿ ಟೆಸ್ಟ್ ಮಾಡಲಾಗಿದೆ ಎಂದು ತಜ್ಞರು ಹೇಳ್ತಾ ಇದ್ದಾರೆ..!
ಏನಿದು ಲಿ-ಫೈ..? :
ರೇಡಿಯೋ ತರಾಂಗತರದ ಮೂಲಕ ಇಂಟರ್ನೆಟ್ ಸಂಕೇತಗಳನ್ನು ರವಾನಿಸುವ ಬದಲಿಗೆ `ವಿದ್ಯುತ್ ಬಲ್ಬ್ ಮೂಲಕ ಸಂಕೇತಗಳನ್ನು ರವಾನಿಸುವ ಹೊಸ ವ್ಯವಸ್ಥೆಯೇ ಈ ಲಿಫೈ..!
ಈ ಲಿಫೈ ತಂತ್ರಜ್ಞಾನವು `ವೈಫೈ’ ತಂತ್ರಜ್ಞಾನಕ್ಕೆ ಪರ್ಯಾಯವಾಗಿದೆ..! ಇದು ಸಾಂಪ್ರದಾಯಿಕ ವೈ-ಫೈಗಿಂತ 100 ಪಟ್ಟು ವೇಗದಲ್ಲಿ ಇಂಟರ್ನೆಟ್ ಅನ್ನು ಒದಗಿಸಬಲ್ಲದು..! ಇದರ ಸ್ಪೀಡ್ 1ಜಿಬಿಪಿಎಸ್ (ಗಿಗಾಬೈಟ್ ಪರ್ ಸೆಕೆಂಡ್) ವರೆಗೂ ಇರುತ್ತಂತೆ..!
ಈ ಲಿ-ಫೈಯು ವಿದ್ಯುತ್ ಬಲ್ಬ್ ಅವಶ್ಯಕತೆಯನ್ನು ಹೊಂದಿದ್ದು, ಎಲ್ಇಡಿ ಬಲ್ಬ್ ಮೂಲಕ ಇಂಟರ್ನೆಟ್ ಪೂರೈಕೆ ಮಾಡೋ ತಂತ್ರಜ್ಞಾನವಾಗಿದೆ..! ಈ ಲಿಫೈ ವ್ಯವಸ್ಥೆಗೆ ಬೇಕಾಗೋ ಮೂಲಗಳೆಂದರೆ, ಒಳ್ಳೆಯ ಎಲ್ಇಡಿ ಬಲ್ಬ್, ಒಂದು ಇಂಟರ್ನೆಟ್ ಸಂಪರ್ಕ ಮತ್ತು ಫೋಟೋ ಡೈರೆಕ್ಟರ್..! ಲಿಫೈ ತಂತ್ರಜ್ಞಾನದ ಮೈಕ್ರೋ ಚಿಪ್ ಅಳವಡಿಸಿರೋ ಒಂದು ವ್ಯಾಟ್ ಸಾಮರ್ಥ್ಯ ಇರೋ ಎಲ್ಇಡಿ ಬಲ್ಬ್ ನಿಂದ ಹೊರ ಹೊಮ್ಮೋ ಸಂಕೇತಗಳಿಂದ 4 ಕಂಪ್ಯೂಟರ್ ಗಳಿಗೆ ಅಂತರ್ಜಾಲ ಕಲ್ಪಿಸಬಹುದೆಂದು ತಜ್ಞರು ತಿಳಿಸಿದ್ದಾರೆ..!
ಲಿ-ಫೈ ಹೇಗೆ ಕೆಲಸ ಮಾಡುತ್ತೆ..?
ಲಿಫೈ ಯು ಗೋಚರ ಬೆಳಕಿನ ನ್ಯಾನೋ ಸೆಕೆಂಡ್ ಪಲ್ಸ್ ನಲ್ಲಿ ಡೇಟಾ ಅಥವಾ ದತ್ತಾಂಶಗಳನ್ನೆಲ್ಲಾ ಎನ್ಕೋಡ್ ಮಾಡುತ್ತೆ..! ಅಂದರೆ ಇದು, ಮನುಷ್ಯನ ಕಣ್ಣುಗಳಿಂದ ಸೆರೆ ಹಿಡಿಯಲಾರದಷ್ಟು ವೇಗವಾಗಿರುತ್ತೆ..! ಗೋಚರ ಬೆಳಕಿನ ವರ್ಣಪಟಲವು ವೈ-ಫೈ ಗೆ ಬಳಸಲ್ಪಡುವ ಸ್ಪೆಕ್ಟ್ರಮ್ 10,000 ಪಟ್ಟಿನಷ್ಟು ಹೆಚ್ಚಾಗಿದೆ..! ಇದೊಂತರ ಟಿವಿ ರಿಮೋಟ್ ಕಂಟ್ರೋಲ್ನಂತೆ..! ಅಂದರೆ ಜಸ್ಟ್ ರಿಮೋಟ್ ನಲ್ಲಿ ಬಟನ್ ಟಚ್ ಮಾಡಿದ ಕೂಡಲೇ ಎಷ್ಟೊಂದು ಬೇಗ ಚೇಂಜ್ ಆಗುತ್ತೋ ಆ ವೇಗದಲ್ಲಿರುತ್ತೆ..!
ಇನ್ಫ್ರಾ-ರೆಡ್ 1,000 ಬಿಪಿಎಸ್ (ಬಿಟ್ಸ್ ಪರ್ ಸೆಕೆಂಡ್)ಗಿಂತ ಕಡಿಮೆ
ಆಧುನಿಕ ಎಲ್ಇಡಿಗಳಾದರೆ, ಸ್ಥಿರ ಬ್ರಾಡ್ಬ್ಯಾಂಡ್ ಕನೆಕ್ಷನ್ ಸಾಕಾಗುತ್ತೆ..! ಆದರೆ ಸಾಮಾನ್ಯ ಬಿಳಿ ಬೆಳಕಿನಂತೆ ಕಾಣುತ್ತೆ..!
ಗೋಚರ 1,000,000,000 ಬಿಪಿಎಸ್ (ಬಿಟ್ಸ್ ಪರ್ ಸೆಕೆಂಡ್)ವರೆಗೆ
ಹೀಗೆ ಲಿಫೈ ಅತ್ಯಾದುನಿಕ ತಂತ್ರಜ್ಞಾನಾವಿದ್ದು ಅತಿವೇಗದಲ್ಲಿ ಕಡಿಮೆ ದರದಲ್ಲಿ ಅಂತರ್ಜಾಲವನ್ನು ನೀಡುತ್ತೆ..! ಆದರೂ ಇದೂ ಕೂಡ ಅವಗುಣ ಅಥವಾ ಲೋಪದಿಂದ ಹೊರತಾಗಿಲ್ಲ..! ಮುಖ್ಯವಾಗಿ ಇದನ್ನು ಔಟ್ಡೋರ್ ಅಥವಾ ಹೊರಾಂಗಣದಲ್ಲಿ ಸೂರ್ಯನ ನೇರವಾದ ಬೆಳಕಿಗೆ ನಿಯೋಜಿಸಲಾಗಲ್ಲ..! ಏಕೆಂದರೆ ಅದು ಸಿಗ್ನಲ್ಗೆ ಹಸ್ತಕ್ಷೇಪ ಮಾಡುತ್ತೆ, ತೊಂದರೆ ನಿರ್ಮಾಣವಾಗುತ್ತೆ..!