ಜೀವನದಲ್ಲಿ ಶಿಕ್ಷಣವೇ ಎಲ್ಲವೂ ಅಲ್ಲ..! ಅದರಲ್ಲೂ ರಾಜಕಾರಣಕ್ಕೆ ಯಾವ ವಿದ್ಯಾರ್ಹತೆಯೂ ಬೇಕಾಗಿಲ್ಲ..! ಬಿಹಾರದ ಹೊಸ ಸಚಿವ ಸಂಪುಟವನ್ನು ನೋಡಿದ್ರೆ ಅದು ಪಕ್ಕಾ ಅನಿಸಿಬಿಡುತ್ತೆ..! 9ನೇ ಕ್ಲಾಸ್ ಫೇಲ್ ಆದವರು, ಐಪಿಎಲ್ ನಲ್ಲಿ ಬೆಂಚ್ ಬಿಸಿ ಮಾಡಿದವರು ಇವತ್ತು ಬಿಹಾರ್ ನ ಉಪಮುಖ್ಯಮಂತ್ರಿಗಳು..! ಶಿಕ್ಷಣ ಸಚಿವರು ಓದಿರೋದು ಎಸ್ಎಸ್ಎಲ್ಸಿ..! ರಾಜಕಾರಣಕ್ಕೆ ಯಾವ ವಿದ್ಯಾರ್ಹತೆಯೂ ಬೇಕಾಗಿಲ್ಲ…! ಅಲ್ವಾ..?!
ಇಲ್ಲಿ, ಬಿಹಾರ ಕ್ಯಾಬಿನೆಟ್ ನ ಮಂತ್ರಿಗಳು ಮತ್ತು ಅವರ ವಿದ್ಯಾರ್ಹತೆ ಬಗ್ಗೆ ಮಾಹಿತಿ ಇಲ್ಲಿದೆ.
1. ನಿತೀಶ್ ಕುಮಾರ್ _ ಮುಖ್ಯಂತ್ರಿಗಳು, ಸಾಮಾನ್ಯ ಆಡಳಿತ, ಗೃಹ, ಮತ್ತು ಮಾಹಿತಿ, ಸಾರ್ವಜನಿಕ. ಇವರು ಬಿಇ (ಬ್ಯಾಚ್ಯುಲರ್ ಆಫ್ ಇಂಜಿನಿಯರಿಂಗ್ ಪದವಿಧರರು..!
2. ತೇಜಸ್ವಿ ಯಾದವ್ : ಉಪ ಮುಖ್ಯಮಂತ್ರಿಗಳು, ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.. ಇವರು ಒಂಬತ್ತನೇ ತರಗತಿ ಫೇಲ್ ಆದವರು..!
3. ತೇಜ್ ಪ್ರತಾಪ್ ಯಾದವ್ : ಆರೋಗ್ಯ, ಸಣ್ಣ ನೀರಾವರಿ, ಪರಿಸರ ಸಚಿವರು. ಇವರ ವಿದ್ಯಾರ್ಹತೆ ದ್ವಿತೀಯ ಪಿಯುಸಿ ಫೇಲ್ ಆದವರು..!
4. ಅಬ್ದುಲ್ ಬರಿ ಸಿದ್ದಿಕ್ : ಹಣಕಾಸು ಸಚಿವರು. ಇವರು ದ್ವಿತೀಯ ಪಿಯುಸಿ ಮುಗಿಸಿದವರು..!
5. ವಿಜೇಂದ್ರ ಪ್ರಸಾದ್ ಯಾದವ್ : ಇಂಧನ ಸಚಿವರು. ಇವರದ್ದು ಎಸ್ಎಸ್ಎಲ್ಸಿ ವಿದ್ಯಾರ್ಹತೆ..!
6. ಲಾಲನ್ ಸಿಂಗ್ : ಜಲ ಸಂಪನ್ಮೂಲ ಸಚಿವರು. ಇವರು ಓದಿದ್ದು ಎಂಟನೇ ತರಗತಿವರೆಗೆ..!
7. ಮಂಜು ವಮರ್ಾ : ಸಮಾಜ ಕಲ್ಯಾಣ ಸಚಿವರು. ಇವರು ದ್ವಿತೀಯ ಪಿಯುಸಿ ಓದಿದ್ದಾರೆ..!
8. ಮದನ್ ಮೋಹನ್ ಝಾ : ಕಂದಾಯ ಮತ್ತು ಭೂ ಸುಧಾರಣೆ. ಏಳನೇ ತರಗತಿ ತನಕ ಓದಿದ್ದಾರೆ.
9. ಮದನ್ ಸಾಹ್ನಿ : ಆಹಾರ ಪೂರೈಕೆ ಸಚಿವರು. ಇವರ ವಿದ್ಯಾರ್ಹತೆ ಎಸ್ಎಸ್ಎಲ್ಸಿ..!
10. ಅಶೋಕ್ ಚೌದರಿ : ಶಿಕ್ಷಣ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು. ಇವರೂ ಕೂಡ ಎಸ್ಎಸ್ಎಲ್ಸಿ ಓದಿದ್ದಾರೆ..!
11. ವಿಜಯ್ ಪ್ರಕಾಶ್ : ಕಾರ್ಮಿಕ ಸಂಪನ್ಮೂಲ ಸಚಿವರು. ಇವರು ಐದನೇ ಕ್ಲಾಸ್ ಓದಿದ್ದಾರೆ..!
12. ರಾಮ್ ವಿಚಾರ್ ರೇ : ಕೃಷಿ ಸಚಿವರು. ಪದವಿಧರರು.
13. ಕಪಿದೇವ್ ಕಾಮತ್ : ಪಂಚಾಯಿತಿ ನಿಯಮ. ಇವರು ಓದಿದ್ದು 3ನೇ ಕ್ಲಾಸ್..!
14. ಸಂತೋಷ ನಿರಾಲ : ಪ.ಜಾತಿ, ಪ. ಪಂಗಡದ ಕಲ್ಯಾಣ. ದ್ವಿತೀಯ ಪಿಯು ಓದಿದ್ದಾರೆ.
15. ಅಬ್ದುಲ್ ಜಲೀಲ್ ಮಸ್ತನ್ : ಉತ್ಪನ್ನ. ಇವರ ವಿದ್ಯಾರ್ಹತೆ 8ನೇ ತರಗತಿ ಪಾಸ್..!
16. ಅಬ್ದುಲ್ ಗಾಫರ್ : ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಇವರ ವಿದ್ಯಾರ್ಹತೆ ಎಸ್ಎಸ್ಎಲ್ಸಿ..!
17. ಚಂದ್ರಿಕಾ ರಾಯ್ : ಸಾರಿಗೆ ಸಚಿವರು. ಇವರು ಸ್ನಾತಕೋತ್ತರ ಪದವಿಧರೆ..!
18. ಮಹೇಶ್ವರ್ ಹಜಾರಿ : ಮುನ್ಸಿಪಲ್ ಅಭಿವೃದ್ಧಿ ಸಚಿವರಾದ ಇವರು ಓದಿದ್ದು ದ್ವಿತೀಯ ಪಿಯುಸಿ..!
19 ಚಂದ್ರಶೇಖರ್ : ವಿಪ್ಪತ್ತು ನಿರ್ವಹಣಾ ಸಚಿವರಾದ ಇವರು ಓದಿದ್ದು ನಾಲ್ಕನೇ ತರಗತಿ..!
20. ಜಯಕುಮಾರ್ ಸಿಂಗ್ : ಕೈಗಾರಿಕೆ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವರು..! ಇವರು ಓದಿದ್ದು ಎಸ್ಎಸ್ಎಲ್ಸಿ..!
21. ಅನಿತಾ ದೇವಿ : ಪ್ರವಾಸ ಸಚಿವರು. ಇವರು ದ್ವಿತೀಯ ಪಿಯುಸಿ ಓದುತ್ತಿದ್ದಾರೆ..!
22. ಅವ್ದೇಶ್ ಸಿಂಗ್ : ಐದನೇ ತರಗತಿ ಓದಿರೋ ಇವರು ಪಶುಪಾಲನ ಸಚಿವರು..!
23. ಮುನೇಶ್ವರ್ ಚೌದರಿ : ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಇವರು ಓದಿದ್ದು ದ್ವಿತೀಯ ಪಿಯುಸಿ..!
24. ಕೃಷ್ಣ ನಂದನ್ ವರ್ಮಾ : ಪಿಎಚ್ಡಿ ಮತ್ತು ಕಾನೂನು ಸಚಿವಾರದ ಇವರ ವಿದ್ಯಾರ್ಹತೆ ಮಾತ್ರ ಪ್ರಥಮ ಪಿಯುಸಿ..!
25. ಖುರ್ಷಿದ್ ಅಲಿಯಾಸ್ ಫಿರೋಜ್ ಅಹ್ಮದ್ : ಕಬ್ಬು ಉದ್ಯಮ ಸಚಿವರಾಗಿರೋ ಇವರು ಐದನೇ ತರಗತಿ ಓದಿದ್ದಾರೆ..!
26. ಶೈಲೇಶ್ ಕುಮಾರ್ : ಗ್ರಾಮೀಣ ವ್ಯವಹಾರಗಳ ಸಚಿವರಾದ ಇವರು ಸ್ನಾತಕೋತ್ತರ ಪದವಿಧರರು.
27. ಅಲೋಕ್ ಮೇಹ್ತಾ : ಪದವಿಪೂರ್ವ ಶಿಕ್ಷಣ ಪಡದಿರೋ ಇವರು ಸಹಕಾರ ಸಚಿವರು..!
28. ಸರ್ವಣಾ ಕುಮಾರ್ : ಗ್ರಾಮೀಣ ಅಭಿವೃದ್ಧಿ ಸಚಿವರಾದ ಇವರು ದ್ವಿತೀಯ ಪಿಯುಸಿ ಓದಿದ್ದಾರೆ..!
29. ಶಿವಚಂದನ್ ರಾಮ್ : ಕಲೆ ಸಂಸ್ಕೃತಿ ಸಚಿವರಾದ ಇವರು ಅಶಿಕ್ಷಿತರು..!
ನೋಡಿ, ಇದನ್ನೆಲ್ಲಾ ನೋಡ್ತಾ ಇದ್ರೆ ಜೀವನದಲ್ಲಿ ಶಿಕ್ಷಣವೇ ಮುಖ್ಯವಲ್ಲ ಅಂತ ಅನಿಸುತ್ತೆ ಅಲ್ವೇ..?!
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ವಿಶ್ವಕಪ್ ಗೆದ್ದ ತಂಡದ ಸದಸ್ಯ ಕಚೋರಿ ಮಾರುತ್ತಿದ್ದಾನೆ..! ಮುಂಬರುವ ಏಷ್ಯಾ ಕಪ್ ಗೂ ಆತನೇ ನಾಯಕ..!
ವೈ-ಫೈ ಗಿಂತ ೧೦೦ ಪಟ್ಟು ವೇಗವಾಗಿ ಅಂತರ್ಜಾಲವನ್ನು ಒದಗಿಸೋ ಲಿ-ಫೈ
ಭಿಕ್ಷೆ ಬೇಡ್ತಾ ಇದ್ದ ಅಜ್ಜಿಗೆ ತಿನ್ನಲು ಕೊಡುವಾಗ, ವ್ಯಾಪಾರಿ ಕೊಡಬೇಡಿ ಅಂದಿದ್ದೇಕೆ..?!
ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!