No menu items!
12.4 C
Munich
Wednesday, April 29, 2026

-36 ಡಿಗ್ರೀ ಸೆಲ್ಶಿಯಸ್ ನಲ್ಲಿ ಸ್ವಿಮ್ಮಿಂಗ್..! ಇದು ಸೈಬೀರಿಯನ್ ಮಂದಿಯ ಹುಚ್ಚು ಸಾಹಸ..!

Must read

ನಮ್ ಮಂದಿ ಚಳಿಯಾದರೆ ಸಾಕು ಮುಖಕ್ಕೆ ನೀರನ್ನೂ ತಾಕಿಸುವುದಿಲ್ಲ. ಕೆಲವೊಮ್ಮೆ ಬೆಚ್ಚನೆಯ ಹೊದಿಕೆಗಳ ಮೊರೆ ಹೋಗುತ್ತಾರೆ. ಅದರಲ್ಲೂ ಸೈಬೀರಿಯಾದಂತಹ ದಟ್ಟ ಚಳಿಯ ವಾತಾವರಣದೊಳಗೆ ಸಿಲುಕಿ ಹಾಕಿಕೊಂಡರಂತೂ ಮನೆ ಬಿಟ್ಟು ಹೊರಗೇ ಬರುವುದಿಲ್ಲ. ಏಕೆಂದರೆ ಸೈಬೀರಿಯಾದಲ್ಲಿನ ಚಳಿ ಮೈನಸ್ ಡಿಗ್ರಿಗಳನ್ನು ದಾಟಿರುತ್ತದೆ. ಆದರೆ ಅಲ್ಲಿನ ಮಂದಿಗೆ ತುಸು ಹುಚ್ಚು ಬುದ್ದಿ ಜಾಸ್ತಿ ಅನ್ನಿಸುತ್ತೆ. ಏಕೆಂದರೆ ಅಲ್ಲಿನ -36 ಡಿಗ್ರೀ ಸೆಲ್ಶೀಯಸ್ ವಾತಾವರಣದೊಳಗೂ ಸ್ವಿಮ್ಮಿಂಗ್ ಫೂಲ್ ನಲ್ಲಿ ಈಜಾಡುತ್ತಾರೆ..!
ಯೆಸ್.. -36 ಡಿಗ್ರಿ ಸೆಲ್ಶಿಯಸ್ ಅಂದರೆ ಬಿಸಿ ನೀರೂ ಕೂಡಾ ಕೆಲವೇ ಕ್ಷಣದಲ್ಲಿ ಮಂಜಿನ ರೂಪ ತಾಳಿಬಿಡುತ್ತದೆ. ಅಂತಹ ಚಳಿಯ ವಾತಾವರಣದೊಳಗೂ ಅಲ್ಲಿನ ಜನರು ಸ್ವಿಮ್ಮಿಂಗ್ ಫೂಲ್ ನಲ್ಲಿ ಈಜಾಡುತ್ತಿದ್ದಾರೆ. ಥರ ಥರ ನಡುಗುತ್ತಿದ್ರೂ ಕೂಡಾ ನೀರಿನಲ್ಲಿ ಮುಳುಗುತ್ತಾ ಮೇಲೇಳುತ್ತಿದ್ದಾರೆ..! ಅಲ್ಲಿನ ಚಳಿ ನಮ್ಮ ಕಡೆ ಏನಾದರೂ ಬಂದಿದ್ದರೆ ನಮ್ಮ ಸರ್ಕಾರಿ ಶಾಲಾ ಕಾಲೇಜುಗಳಿಗೆ ರಜೆ ನೀಡಿ ಮನೆಯಲ್ಲಿ ಬೆಚ್ಚಗಿರಿ ಎಂದು ಹೇಳುತ್ತಿತ್ತು. ಆದರೆ ಸೈಬೀರಿಯಾದಲ್ಲಿ ಮಾತ್ರ ವಿಚಿತ್ರ.
ಸೈಬೀರಿಯಾವು ಸದಾ ಚಳಿಯಿಂದ ಕೂಡಿರುವ ಪ್ರದೇಶ. ಅಲ್ಲಿನ ಭೀಕರ ಚಳಿಯ ಮಧ್ಯೆಯೂ ಆ ಜನರು ಸುಖವಾಗಿ ಬಾಳುತ್ತಾರೆ. ಭಾರೀ ಪ್ರಮಾಣದ ಚಳಿಯ ಮಧ್ಯೆಯೂ ಈಜಾಡುತ್ತಾರೆ. ಅದೂ ಕೂಡಾ ಕುಟುಂಬ ಸಮೇತ..! ವಿಚಿತ್ರ ಹೇಗಿದೆ ಎಂದರೆ ಹೀಗೆ ಚಳಿಯಲ್ಲಿ, ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂಬ ನಂಬಿಕೆ ಸೈಬೀರಿಯನ್ನರ ಬಳಿ ಇದೆ. ಆದ್ದರಿಂದ ಅದೆಷ್ಟೇ ಚಳಿ ಇದ್ದರೂ ಸರಿ, ಅಲ್ಲಿನ ಜನ ಕೋಲ್ಡ್ ವಾಟರ್ ಸ್ನಾನವನ್ನಂತೂ ಮರೆಯುವುದಿಲ್ಲವಂತೆ. ಇಷ್ಟಕ್ಕೂ ಸಧ್ಯಕ್ಕೆ ಸೈಬೀರಿಯಾದಲ್ಲಿನ ವಾತಾವರಣ -36 ಡಿಗ್ರೀಗಿಂತ ಕಡಿಮೆ ಇದೆಯಂತೆ. ನಮ್ಮಲ್ಲಿ +36..! ಹೇಗಿದೆ ನೋಡಿ ನಮ್ಮ ಲೋಕ..?

  • ರಾಜಶೇಖರ ಜೆ

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಶಿಕ್ಷಣವೇ ಜೀವನದಲ್ಲಿ ಎಲ್ಲವೂ ಅಲ್ಲ..!

ವಿಶ್ವಕಪ್ ಗೆದ್ದ ತಂಡದ ಸದಸ್ಯ ಕಚೋರಿ ಮಾರುತ್ತಿದ್ದಾನೆ..! ಮುಂಬರುವ ಏಷ್ಯಾ ಕಪ್ ಗೂ ಆತನೇ ನಾಯಕ..!

ವೈ-ಫೈ ಗಿಂತ ೧೦೦ ಪಟ್ಟು ವೇಗವಾಗಿ ಅಂತರ್ಜಾಲವನ್ನು ಒದಗಿಸೋ ಲಿ-ಫೈ

ಭಿಕ್ಷೆ ಬೇಡ್ತಾ ಇದ್ದ ಅಜ್ಜಿಗೆ ತಿನ್ನಲು ಕೊಡುವಾಗ, ವ್ಯಾಪಾರಿ ಕೊಡಬೇಡಿ ಅಂದಿದ್ದೇಕೆ..?!

ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!

44 ವರ್ಷದ ನಂತರ ಜೈಲಿನಿಂದ ಹೊರಬಂದ ವ್ಯಕ್ತಿಯ ಪ್ರತಿಕ್ರಿಯೆ..!

ಇಡೀ ಜೀವನವನ್ನೇ ತಮ್ಮಂದಿರಿಗಾಗಿ ಮುಡಿಪಾಗಿಟ್ಟ ಅಣ್ಣ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article