ಕೈ ಕುಲುಕಿದವಳು ಕೈ ಹಿಡಿದಾಗ…

Date:

ಕಿರಿಕ್ ಪಾರ್ಟಿ ಸಿನಿಮಾದ ನಿರ್ದೇಶಕ ರಿಷಬ್ ಶೆಟ್ಟಿ ಪ್ರೇಮ್ ಕಹಾನಿ ಇದು.


`ಅದು ರಿಕ್ಕಿ ಸಿನಿಮಾದ ಪ್ರೀಮಿಯರ್ ಶೋ. ಚಿತ್ರ ವೀಕ್ಷಿಸಿ ಹೊರಗೆ ಬಂದವರೆಲ್ಲಾ ಚಿತ್ರವನ್ನು ಎಂಜಾಯ್ ಮಾಡಿದ್ದರೆಂದು ಅವರ ಪ್ರಸನ್ನ ವದನಗಳಿಂದ ತಿಳಿಯುತ್ತಿತ್ತು. ಒಂದೆಡೆ ಹೀರೋ-ಹೀರೋಯಿನ್ನಿನ ಸೆಲ್ಫೀ ಸೆಷನ್ ನೆಡೆಯುತ್ತಿತ್ತು. ನನಗೆ ಪರಿಚಯವಿದ್ದ ಕೆಲವರು ಕಾರ್ನರಿನಲ್ಲಿ ನಿಂತಿದ್ದ ನನ್ನನ್ನು ಗುರುತಿಸಿ ಕೈ ಕುಲುಕಿ ಹೋಗುತ್ತಿದ್ದರು. ಮುಜುಗರದಿಂದ ಅತ್ತಿತ್ತ ನೋಡುತ್ತಾ ನಿಂತಿದ್ದ ನನ್ನ ಬಳಿಗೆ ನನ್ನಷ್ಟೇ ನಾಚುತ್ತಾ ಬಂದ ಹುಡುಗಿಯೊಬ್ಬಳು ನಕ್ಕು ಮಾತನಾಡಿಸಿ ಫೋಟೋ ತೆಗೆದುಕೊಂಡು ಕೊನೆಯಲ್ಲಿ `ಸಿನಿಮಾ ಬಹಳ ಚೆನ್ನಾಗಿದೆ.. ಹಿಟ್ ಆಗಲಿ.. ಆಲ್ ದ ಬೆಸ್ಟ್’ ಎಂದು ಕೈ ಕುಲುಕಿ ಹೋಗಿದ್ದಳು.ರಿಕ್ಕಿಯಿಂದಲೋ, ಲಕ್ಕಿನಿಂದಲೋ ಅಂದು ಕೈಕುಲುಕಿ ಹೋದವಳನ್ನೇ ಕೈ ಹಿಡಿಯುವ ಭಾಗ್ಯ ನನ್ನದಾಯ್ತು. ಎರಡು ವರ್ಷದ ಹಿಂದೆ ನಿನ್ನನ್ನು ಮೊದಲ ಬಾರಿ ಭೇಟಿ ಮಾಡಿದ ಆ ದಿನವನ್ನು ನೆನೆಯುತ್ತಾ…’


ಹೀಗೆಂದು‌ ರಿಷಬ್ ಫೇಸ್ ಬುಕ್ ನಲ್ಲಿ ಬರೆದುಕೊಂಡು ಪತ್ನಿಯನ್ನು ಟ್ಯಾಗ್ ಮಾಡಿದ್ದಾರೆ. ರಿಕ್ಕಿ ಸಿನಿಮಾ ನೋಡಿ ಕೈ ಕುಲಕಿ ವಿಶ್ ಮಾಡಿದ್ದ ಪ್ರಗತಿ ಅವರೇ ಇವತ್ತು ರಿಷಬ್ ಅವರ ಪತ್ನಿ. ರಿಷಬ್ ಶೆಟ್ಟಿ ಕುಂದಾಪುರ ಮೂಲದವರು. ಪ್ರಗತಿ ಶಿವಮೊಗ್ಗದವರು.
ಇವರು 2017ರ ಫೆಬ್ರವರಿ 19 ರಂದು‌ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.

Share post:

Subscribe

spot_imgspot_img

Popular

More like this
Related

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್!

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್! ಬೆಂಗಳೂರು:- ಆಟೋಗೆ ಕಸ...

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್!

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್! ನೆಲಮಂಗಲ: ನೆಲಮಂಗಲದ ಅಪಾರ್ಟ್ಮೆಂಟ್‌ವೊಂದರಲ್ಲಿ 24ನೇ ಮಹಡಿಯಿಂದ...

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...