ಇದು ಓರ್ವ ಭಿಕ್ಷುಕಿ ಮತ್ತು ಆಕೆಯ ಮಕ್ಕಳ ಕಥೆ..!

Date:

ಆ ಟೀ ಸ್ಟಾಲ್ ಮುಂದೆ ಗೆಳೆಯರ ಬಳಗ ಸೇರಿತ್ತು. ಚೆನ್ನಾಗಿ ಹರಟೆ ಹೊಡೆಯುತ್ತಾ, ಟೀ ಕುಡಿಯುತ್ತಿದ್ದರವರು. ಆಗ ಅಲ್ಲಿಗೆ ಓರ್ವ ಹುಡುಗ ಬಂದು ಊಟಕ್ಕೆ ಹಣ ಕೇಳಿದ. ಆದರೆ ಅಲ್ಲಿದ್ದ ಎಲ್ಲರಿಗೂ ಆ ಹುಡುಗ ನಾಟಕ ಮಾಡುತ್ತಿರಬಹುದಾ ಎಂಬ ಅನುಮಾನವಿತ್ತು. ಆದ್ದರಿಂದ ಅವರೇ ಊಟ ಕೊಡಿಸುವ ನಿರ್ಧಾರಕ್ಕೆ ಬಂದು ಊಟವನ್ನೂ ಕೊಡಿಸಿದರು. ಅಷ್ಟು ಸಾಕಲ್ಲವೇ ಹಸಿದ ಹೊಟ್ಟೆಯ ಹುಡುಗನಿಗೆ.
ಎಲ್ಲರ ನಿರೀಕ್ಷೆ ಹುಸಿಯಾಯ್ತು. ಆ ಹುಡುಗ ಮಾತ್ರ ಊಟವನ್ನು ದೂರದಲ್ಲೆಲ್ಲೋ ನಿಂತಿದ್ದ ಓರ್ವ ಭಿಕ್ಷುಕಿಗೆ ನೀಡಿದ. ಮೇಲು ನೋಟಕ್ಕೆ ಆಕೆ ಆ ಹುಡುಗನ ತಾಯಿಯಂತೆ ಕಾಣುತ್ತಿದ್ದಳು. ಅದನ್ನು ಗಮನಿಸಿದ ಗೆಳೆಯರು `ಆ ಮಹಿಳೆ ತನ್ನ ಮಗನನ್ನು ಇಂಥಾ ಕೆಲಸಕ್ಕೆ ಬಳಸಿಕೊಳ್ಳುತ್ತಿರುವುದು ಸರಿಯೆನಿಸಲಿಲ್ಲ. ಆದ್ದರಿಂದ ಹತ್ತಿರ ಹೋಗಿ ದಬಾಯಿಸಲು ಮುಂದಾದರು. ಆಗ ಆಕೆಯ ಕಂಕುಳಲ್ಲಿದ್ದ ಹೆಣ್ಣುಮಗು ಅಳುತ್ತಾ ಅನ್ನಕ್ಕಾಗಿ ಮೊರೆಯಿಡುತ್ತಿತ್ತು. ಅಲ್ಲದೇ ಆ ಮಹಿಳೆಗೂ ಕೂಡಾ ದುಡಿದು ತಿನ್ನುವಷ್ಟು ಕಸುವು ಇರಲಿಲ್ಲ. ಯಾರ ಬಳಿ ಸಹಾಯ ಬೇಡಿದರೂ ಕೂಡಾ ಅವರು ಬೈದು ಕಳುಹಿಸುತ್ತಿದ್ದರು. ಅನಿವಾರ್ಯವಾಗಿ ಆಕೆಯ ಮಗನೇ ಭಿಕ್ಷೆ ಬೇಡಲು ಮುಂದಾಗಿದ್ದ. ಆ ಘಟನೆಯನ್ನು ಗಮನಿಸಿದ ಸ್ನೇಹಿತರ ಮನಸ್ಸು ಕೂಡಾ ಬದಲಾಯಿತು. ಆದ್ದರಿಂದ ಇನ್ನಷ್ಟು ಊಟ ನೀಡಿದರು. ಹೊಟ್ಟೆ ತುಂಬಾ ತಿನ್ನಿಸಿದರು.
ಊಟ ಮಾಡಿಸಿದರೆ ಸಾಕೇ..? ಅವರಿಗೆ ಇರಲು ವ್ಯವಸ್ಥೆ ಮಾಡಿದರೆ ಚೆನ್ನಾಗಿರುತ್ತದೆ ಎಂಬ ಕಲ್ಪನೆ ಆ ಸ್ನೇಹಿತರಲ್ಲೊಬ್ಬನಿಗೆ ಹೊಳೆಯಿತು. ತಕ್ಷಣವೇ ಅವರನ್ನು ಒಂದು ಎನ್.ಜಿ.ಓ ಸಂಪರ್ಕಕ್ಕೆ ತರಲು ನಿರ್ಧರಿಸಿದರು. ಆದರೆ ಆ ಎನ್ ಜಿಓ ಮಾತ್ರ ಭಿಕ್ಷುಕರನ್ನು ಸೇರಿಸಿಕೊಳ್ಳುವ ನಿಯಮ ನಮ್ಮಲ್ಲಿಲ್ಲ. ಆದ್ದರಿಂದ ಅವರಿಗೆ ಸಹಾಯ ಮಾಡಲು ಆಗುವುದಿಲ್ಲ ಎಂದು ಎನ್.ಜಿ.ಓ.ದಲ್ಲಿನ ಅಧಿಕಾರಿಗಳು ಕಡ್ಡಿ ತುಂಡು ಮಾಡಿದಂತೆ ಹೇಳಿದರು.
ಎನ್.ಜಿ.ಓ.ದಲ್ಲಿನ ಅಧಿಕಾರಿಗಳ ಮಾತು ಕೇಳಿ ಈ ಸ್ನೇಹಿತರು ಸುಮ್ಮನಿರಲಿಲ್ಲ. ಬದಲಿಗೆ ಪ್ರತಿಭಟಿಸಿದರು. ನಿಯಮವನ್ನು ಬದಲಿಸಿಕೊಳ್ಳುವಂತೆ ಆಗ್ರಹಿಸಿದರು. ಕ್ಯಾಂಡಲ್ ಮೆರವಣಿಗೆ ಮಾಡಿದರು, ಚಾನೆಲ್ ಗಳ ಮೂಲಕ ಓಲೈಸಲು ಯತ್ನಿಸಲಾಯಿತು. ಆದರೆ ಅದ್ಯಾವುದಕ್ಕೂ ಅಧಿಕಾರಿಗಳು ಕ್ಯಾರೇ ಎನ್ನಲಿಲ್ಲ.
ಇಷ್ಟಕ್ಕೂ ನಮ್ಮ ಸಮಾಜದಲ್ಲಿ ಭಿಕ್ಷುಕರೆಲ್ಲರೂ ಕೆಟ್ಟವರು ಎಂಬ ಭಾವನೆ ಇದೆ. ಆದರೆ ಕೆಲವರು ಪರಿಸ್ಥಿತಿಯ ಕೈಗೊಂಬೆಯಾಗಿ ಭಿಕ್ಷೆ ಬೇಡುವಂತಹ ಹೀನ ಕೆಲಸಕ್ಕೆ ಕೈ ಹಾಕಿರುತ್ತಾರೆ. ಆದರೆ ಅಂಥವರಿಗೆ ನಾವಂತೂ ಸಹಾಯ ಮಾಡುವುದಿಲ್ಲ. ಆದ್ದರಿಂದಲೇ ಸರ್ಕಾರ ಎನ್.ಜಿ.ಗಳಿಗೆ ಧನ ಸಹಾಯ ಮಾಡುತ್ತಿದೆ. ಆದರೆ ಸರ್ಕಾರದ ಹಣ ಪಡೆದು ಬಡವರಿಗೆ ಸಹಾಯ ಮಾಡಬೇಕಿದ್ದ ಎನ್.ಜಿ.ಓ ಇಂದು ಬಡವರನ್ನು ಕಸಕ್ಕಿಂತ ಕೀಳಾಗಿ ನೋಡಿಕೊಳ್ಳುತ್ತಿದೆ. ಇಂತಹ ವ್ಯವಸ್ಥೆ ಬದಲಾಗಬೇಕು. ಬೀದಿಯಲ್ಲಿ ಭಿಕ್ಷೆ ಬೇಡುತ್ತಾ ಅಪಮಾನದ ಜೀವನ ನಡೆಸುತ್ತಿರುವ ಬಡಪಾಯಿಗಳ ಜೀವನಕ್ಕೆ ದಾರಿಯಾಗಬೇಕು.

  • ರಾಜಶೇಖರ ಜೆ

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಯಾವ್ಯಾವ ದೇಶದಲ್ಲಿ ಡ್ರೈವಿಂಗ್ ಮಾಡೋಕೆ ಇಂಡಿಯನ್ ಲೈಸೆನ್ಸ್ ಇದ್ರೆ ಸಾಕು ಗೊತ್ತಾ..?!

99ರಷ್ಟು ಶೇರುಗಳನ್ನು ದಾನ ಮಾಡುತ್ತಿರುವ ಫೇಸ್ ಬುಕ್ ಸಿಇಓ ಮಾರ್ಕ್ ಜುಕರ್ ಬರ್ಗ್ ..!

ಮಕ್ಕಳಿಗಾಗಿ 3055 ಗ್ರಂಥಾಲಯ ಕಟ್ಟಿಸಿದ ಸಮಾಜಸೇವಕ..!

ಮಾನವೀಯತೆಯ ಪಾಠ ಹೇಳಿದ ಡಾಬಾ ಮಾಲೀಕ..!

ರಾಷ್ಟ್ರಗೀತೆಗೆ ಗೌರವ ಕೊಡಬೇಕ ಅಂತ ಕೇಳೋರು ದಯವಿಟ್ಟು ಈ ವೀಡಿಯೋ ನೋಡಬೇಡಿ..!

ಶಿಕ್ಷಣವೇ ಜೀವನದಲ್ಲಿ ಎಲ್ಲವೂ ಅಲ್ಲ..!

ವಿಶ್ವಕಪ್ ಗೆದ್ದ ತಂಡದ ಸದಸ್ಯ ಕಚೋರಿ ಮಾರುತ್ತಿದ್ದಾನೆ..! ಮುಂಬರುವ ಏಷ್ಯಾ ಕಪ್ ಗೂ ಆತನೇ ನಾಯಕ..!

ವೈ-ಫೈ ಗಿಂತ ೧೦೦ ಪಟ್ಟು ವೇಗವಾಗಿ ಅಂತರ್ಜಾಲವನ್ನು ಒದಗಿಸೋ ಲಿ-ಫೈ

ಭಿಕ್ಷೆ ಬೇಡ್ತಾ ಇದ್ದ ಅಜ್ಜಿಗೆ ತಿನ್ನಲು ಕೊಡುವಾಗ, ವ್ಯಾಪಾರಿ ಕೊಡಬೇಡಿ ಅಂದಿದ್ದೇಕೆ..?!

ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!

44 ವರ್ಷದ ನಂತರ ಜೈಲಿನಿಂದ ಹೊರಬಂದ ವ್ಯಕ್ತಿಯ ಪ್ರತಿಕ್ರಿಯೆ..!

ಇಡೀ ಜೀವನವನ್ನೇ ತಮ್ಮಂದಿರಿಗಾಗಿ ಮುಡಿಪಾಗಿಟ್ಟ ಅಣ್ಣ..!

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...