ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ ನಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ.
ಕ್ರೈಸ್ಟ್ ಚರ್ಚ್ ನ ಹ್ಯಾಗ್ಲೀ ಓವೆಲ್ ಮೈದಾನದಲ್ಲಿ ಇಂದು ನಡೆದ 2 ನೇ ಸೆಮಿಫೈನಲ್ ಪಂದ್ಯದಲ್ಲಿ ಪೃಥ್ವಿ ಶಾ ನೇತೃತ್ವದ ಟೀಂ ಇಂಡಿಯಾ 203 ರನ್ ಗಳಿಂದ ಪಾಕಿಸ್ತಾನವನ್ನು ಮಣಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಶುಭ್ ಮನ್ ಗಿಲ್ ಅವರ ಅಜೇಯ ಶತಕ ( 102) ರನ್ ಗಳ ಸಹಾಯದಿಂದ ನಿಗಧಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಭಾರತದ ಮಾರಕ ದಾಳಿಗೆ ತತ್ತರಿಸಿ 29.3 ಓವರ್ ಗಳಲ್ಲಿ ಕೇವಲ 69 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲಪ್ಪಿಕೊಂಡಿತು.
ಬ್ಯಾಟಿಂಗ್ ನಲ್ಲಿ ಭಾರತದ ಪರ ನಾಯಕ ಪೃಥ್ವಿ ಶಾ 41, ಮನ್ ಜೋತ್ ಕಾಲ್ರಾ 47, ಅನುಕುಲ್ ರಾಯ್ 33 ರನ್ ಕೊಡುಗೆ ನೀಡಿದರು.
ಬೌಲಿಂಗ್ ನಲ್ಲಿ ಇಶಾನ್ ಪೊರೆಲ್ 4, ಶಿವಸಿಂಗ್, ರಿಯಾನ್ ಪರಾಗ್ ತಲಾ 2 , ಅನುಕುಲ್ ರಾಯ್ ಮತ್ತು ಅಭಿಷೇಕ್ ಶರ್ಮಾ ತಲಾ 1 ವಿಕೆಟ್ ಪಡೆದರು.
ಹೀಗೆ ಸಂಘಟಿತ ಹೋರಾಟದಿಂದ ಫೈನಲ್ ಪ್ರವೇಶಿಸಿದ ದ್ರಾವಿಡ್ ಹುಡುಗರು ಫೆ.3 ರಂದು ಫೈನಲ್ ನಲ್ಲಿ ಆಸ್ಟ್ರೇಲಿಯಾ ವನ್ನು ಎದುರಿಸಲಿದ್ದಾರೆ.