ಭಾರತದಲ್ಲಿ ಹೆಚ್ಚಿದೆ ಕಾಂಡೋಮ್ ಬಳಸೋ ಮಹಿಳೆಯರ ಸಂಖ್ಯೆ…!

0
129

ಭಾರತದಲ್ಲಿ ಅವಿವಾಹಿತ ಮಹಿಳೆಯರು ಮತ್ತು ಸೆಕ್ಸ್ ವರ್ಕರ್ ಗಳಲ್ಲಿ ಕಾಂಡೋಮ್ ಬಳಕೆ ಹೆಚ್ಚಾಗಿದೆ..! ಹೀಗೆಂದು ಕೇಂದ್ರ ಆರೋಗ್ಯ ಸಚಿವಾಲಯ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.
ಆರೋಗ್ಯ ಸಚಿವಾಲಯ 2015-16ರಲ್ಲಿ ಸಮೀಕ್ಷೆ ನಡೆಸಿದ್ದು, 10 ವರ್ಷಗಳಲ್ಲಿ ಅವಿವಾಹಿತ ಮಹಿಳೆ ಮತ್ತು ಸೆಕ್ಸ್ ವರ್ಕರ್ ಗಳಲ್ಲಿ ಶೇ. 2ರಿಂದ ಶೇ.12ರಷ್ಟು ಕಾಂಡೋಮ್ ಬಳಕೆ ಹೆಚ್ಚಿದೆ ಎಂದು ಗೊತ್ತಾಗಿದೆ. ಕಾಂಡೋಮ್ ಬಳಕೆ ಜಾಗೃತಿಯಿಂದ ದಶಕದಲ್ಲಿ 6ಪಟ್ಟು ಬಳಕೆ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.


ಮಣಿಪುರ, ಬಿಜಾರ ಮತ್ತು ಮೇಘಾಲಯ ರಾಜ್ಯಗಳಲ್ಲಿ ಶೇ. 24ರಷ್ಟು ಜನರು ಮಾತ್ರ ಗರ್ಭ ನಿರೋಧಕ ವಿಧಾನಗಳನ್ನು ಅಳವಡಿಸಿಕೊಂಡಿದ್ದಾರೆ. ಪಂಜಾಬ್ ನಲ್ಲಿ ಅತಿ ಹೆಚ್ಚು ಅಂದರೆ ಶೇ. 76ರಷ್ಟು ಮಂದಿ ನಿರೋಧ್ ಬಳಸುತ್ತಿದ್ದಾರೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಕ್ಷದ್ವೀಪದಲ್ಲಿ ಅತಿ ಕಡಿಮೆ (ಶೇ.30) ರಷ್ಟು ಕಾಂಡೋಮ್ ಬಳಸ್ತಿದ್ದಾರೆ. ಚಂಡೀಗಢದಲ್ಲಿ ಅತೀ ಹೆಚ್ಚು, ಅಂದ್ರೆ ಶೇ.74ರಷ್ಟು ಮಂದಿ ಕಾಂಡೋಮ್ ಬಳಕೆ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here