`ಕೊಹಿನೂರು ವಜ್ರ' ಪಾಕಿಸ್ತಾನದ್ದಂತೆ..! `ಕೊಹಿನೂರು ವಜ್ರ'ದ ಮೇಲೂ ಬಿತ್ತು ಪಾಕ್ ಕಣ್ಣು..!

Date:

ಪಾಕಿಸ್ತಾನ ಈಗ ಹೊಸ ಖ್ಯಾತೆ ತೆಗೆದಿದೆ. ಭಾರತದ ವಿಷಯದಲ್ಲಿ ಮತ್ತೆ ತನ್ನ ಹಸ್ತಕ್ಷೇಪವನ್ನು ಮುಂದುವರೆಸಿದೆ. ಈ ಬಾರಿ ಪಾಕ್ ಖ್ಯಾತೆ ತೆಗೆದಿರುವುದು ಗಡಿ ವಿಚಾರದಲ್ಲಿ ಅಲ್ಲ..! ಬದಲಾಗಿ `ಕೊಹಿನೂರ್’ ವಜ್ರದ ವಿಷಯದಲ್ಲಿ..!
ಹೌದು, ವಿಶ್ವದಲ್ಲೇ ಅಮೂಲ್ಯವಾದ ವಸ್ತುಗಳಲ್ಲಿ ಪ್ರಮುಖವಾಗಿರುವ `ಕೊಹಿನೂರು ವಜ್ರ’ದ ಮೇಲೆ ಪಾಕ್ ಕಣ್ಣು ಬಿದ್ದಿದೆ..! ಇಂಗ್ಲೆಂಡಿನಿಂದ `ಕೊಹಿನೂರು ವಜ್ರ’ವನ್ನು ದೇಶಕ್ಕೆ ತರಲು ಭಾರತ ಅವಿರತ ಪ್ರಯತ್ನ ಮಾಡುತ್ತಿರುವಾಗಲೇ ಪಾಕ್ ಕೂಡ ಅದನ್ನು ತನ್ನ ದೇಶಕ್ಕೆ ತರಲು ಎದುರು ನೋಡುತ್ತಿದೆ..!
`ಕೊಹಿನೂರು ವಜ್ರ’ವನ್ನು ಪಾಕ್ ಸರ್ಕಾರ ವಶಕ್ಕೆ ಪಡೆದು ಬ್ರಿಟನ್ನಿಂದ ಪಾಕಿಸ್ತಾಕ್ಕೆ ತರಬೇಕು ಎಂದು ಒತ್ತಾಯಿಸಿ ಲಾಹೋರ್ ಹೈಕೋರ್ಟ್ ನಲ್ಲಿ ಅರ್ಜಿಯೊಂದನ್ನು ದಾಖಲಿಸಲಾಗಿದೆ. `ಕೊಹಿನೂರು ವಜ್ರ’ ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದ ಸಾಂಸ್ಕೃತಿಕ ಪರಂಪರೆಯ ಪ್ರತೀಕ. ಈ ಅಮೂಲ್ಯ ರತ್ನ ಸಿಗಬೇಕಾಗಿದ್ದು ಪಾಕಿಸ್ತಾಕ್ಕೆ..! ಇದು ಪಂಜಾಬ್ ಪ್ರಾಂತ್ಯದ ಜನರ ನೈಜವಾದ ಹಕ್ಕು..! ಆದ್ದರಿಂದ ಈ ಅನಘ್ರ್ಯ ರತ್ನವನ್ನು ಪಾಕಿಸ್ತಾನಕ್ಕೆ ತರುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ `ಬ್ಯಾರಿಸ್ಟರ್ ಜಾವೇದ್ ಇಕ್ಬಾಲ್ ಜಾಫ್ರಿ’ಒತ್ತಾಯಿಸಿದ್ದಾರೆ. ಲಾಹೋರ್ ಕೋರ್ಟ್ ಸರ್ಕಾರಕ್ಕೆ ಈ ಬಗ್ಗೆ ಆದೇಶಿಸಬೇಕೆಂದು ಅರ್ಜಿದಾರರು ಆಗ್ರಹಿಸಿದ್ದಾರೆ.

17ನೇ ಶತಮಾನದಲ್ಲಿ ಪಂಜಾಬಿನ ಮಹಾರಾಜ ರಣಜೀತ್ ಸಿಂಗ್ನ ಮೊಮ್ಮಗನಾದ ದಿಲೀಪ್ ಸಿಂಗ್ ಉಪಯೋಗಿಸುತ್ತಿದ್ದಂತ ಈ `ಕೊಹಿನೂರು ವಜ್ರ’ವನ್ನು ಬ್ರಿಟೀಷರು ಕದ್ದು ಇಂಗ್ಲೆಂಡಿಗೆ ತೆಗೆದು ಕೊಂಡು ಹೋಗಿದ್ದರು. ಭಾರತದದಿಂದ ಅಪಹರಿಸಿ ಬ್ರಿಟನ್ ಗೆ ಒಯ್ದಿದ್ದ ವಜ್ರವನ್ನು 1953ರಲ್ಲಿ ಇಂಗ್ಲೆಂಡಿನ ರಾಣಿ ಎರಡನೇ ಎಲಿಜಬೆತ್ ಪಟ್ಟಾಭಿಷೇಕದ ಸಂದರ್ಭದಲ್ಲಿ ಅವರ ಕೀರಿಟಕ್ಕೆ ಅಳವಡಿಸಲಾಯಿತು..! ಆದ್ದರಿಂದ ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವಂತಹ ಈ ವಜ್ರದ ಮೇಲೆ ಅಲ್ಲಿನ ರಾಣಿಗೆ ಯಾವುದೇ ಹಕ್ಕಿಲ್ಲವೆಂದು ಇಕ್ಬಾಲ್ ಜಾಫ್ರಿ ವಾದಿಸುತ್ತಿದ್ದಾರೆ.
ಅಂದಹಾಗೆ ಈ ಅಮೂಲ್ಯ ವಜ್ರದ ಮೂಲ ಕೊಲ್ಲೂರು..! ಮಧ್ಯಯುಗದಲ್ಲಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಲ್ಲೂರು ಗಣಿಯಿಂದ `ಕೊಹಿನೂರು ವಜ್ರ’ವನ್ನು ತೆಗೆಯಲಾಗಿತ್ತು..! ಹೀಗೆ ತೆಗೆದ ವಜ್ರವನ್ನು ನಂತರದ ದಿನಗಳಲ್ಲಿ ಕಾಕತೀಯ ರಾಜರುಗಳ ಆಡಳಿತದಲ್ಲಿ ದೇವಿಯ ವಿಗ್ರಹಕ್ಕೆ ಕಣ್ಣಾಗಿಸಲಾಗಿತ್ತು..! 1849ರಲ್ಲಿ ಬ್ರಿಟೀಷರು ಪಂಜಾಬ್ ಪ್ರಾಂತ್ಯದ ಮೇಲೆ ದಾಳಿಮಾಡಿ ಗೆಲುವನ್ನು ಪಡೆದಾಗ ಅಲ್ಲಿನ ಆಸ್ತಿಯಲ್ಲವನ್ನೂ ವಶಪಡಿಸಿಕೊಂಡರು..! ಆ ಸಂದರ್ಭದಲ್ಲಿ `ಕೊಹಿನೂರು ವಜ್ರ’ ಕೂಡ ಅವರದ್ದಾಗಿ ಬಿಟ್ಟಿತ್ತು..!

  • ಶಶಿಧರ ಡಿ ಎಸ್ ದೋಣಿಹಕ್ಲು

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಇವರು ನಮ್ಮ ಬೆಂಗಳೂರಿನ ತ್ಯಾಜ್ಯೋಧ್ಯಮಿ..! ಕಸ ಆಯುವಾತನಿಗೆ ವಿಶ್ವಸಂಸ್ಥೆಯಿಂದ ಕರೆ..!

‘ಧ್ಯಾನ್ ಚಂದ್’ರನ್ನು ಸಂಪರ್ಕಿಸಿದ್ದ ಹಿಟ್ಲರ್..! ಹಿಟ್ಲರ್ ಧ್ಯಾನ್ ಚಂದರನ್ನು ಭೇಟಿ ಮಾಡಿದ್ದೇಕೆ..?!

ಚೆನ್ನೈ ಸಂತ್ರಸ್ಥರಿಗೆ ಸಹಾಯ ಮಾಡಿ..! ಬೆಂಗಳೂರಿನಿಂದ ಹೊರಡುತ್ತಿದೆ ಕಿರಿಕ್ ಕೀರ್ತಿ ತಂಡ..!

ಇದು ಓರ್ವ ಭಿಕ್ಷುಕಿ ಮತ್ತು ಆಕೆಯ ಮಕ್ಕಳ ಕಥೆ..!

ಯಾವ್ಯಾವ ದೇಶದಲ್ಲಿ ಡ್ರೈವಿಂಗ್ ಮಾಡೋಕೆ ಇಂಡಿಯನ್ ಲೈಸೆನ್ಸ್ ಇದ್ರೆ ಸಾಕು ಗೊತ್ತಾ..?!

99ರಷ್ಟು ಶೇರುಗಳನ್ನು ದಾನ ಮಾಡುತ್ತಿರುವ ಫೇಸ್ ಬುಕ್ ಸಿಇಓ ಮಾರ್ಕ್ ಜುಕರ್ ಬರ್ಗ್ ..!

ಮಕ್ಕಳಿಗಾಗಿ 3055 ಗ್ರಂಥಾಲಯ ಕಟ್ಟಿಸಿದ ಸಮಾಜಸೇವಕ..!

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...