ಇಂಥಾ ರಾಕ್ಷಸರು ಇದ್ದಾರ..?! ನಿಜಕ್ಕೂ ಆಶ್ಚರ್ಯವಾಗುತ್ತೆ…! ಮನುಷ್ಯ ರೂಪದಲ್ಲಿರುವ ರಕ್ಕಸಿಯೊಬ್ಬಳು ಮಗನನ್ನು ಕೊಂದು ಸೂಟ್ ಕೇಸಗ ನಲ್ಲಿ ತುಂಬಿದ್ದ ಘಟನೆ ಗುಜರಾತ್ ನ ಕೃಷ್ಣ ನಗರದಲ್ಲಿ ನಡೆದಿದೆ. 6ವರ್ಷದ ಧ್ರುವ ಕೊಲೆಯಾದ ದುರ್ದೈವಿ. ಈತನ ಮಲತಾಯಿ ಝೀನಲ್ ಆರೋಪಿ.

ಈಕೆ ಮಗನನ್ನು ಕೊಂದು ಸೂಟ್ ಕೇಸ್ ನಲ್ಲಿ ತುಂಬಿ, 2ಗಂಟೆಗಳಿಂದ ಮಗ ಕಾಣೆಯಾಗಿದ್ದಾನೆ ಎಂದು ಹುಡುಕಾಡುವ ನಾಟಕ ಮಾಡಿದ್ದಾಳೆ.ಬಳಿಕ ಪತಿ ಶಾಂತಿಲಾಲ್ ಜೊತೆಗೆ ಹೋಗಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಮನೆಗೆ ಬಂದು ತಪಾಸಣೆ ನಡೆಸಿದಾಗ ಸೂಟ್ ಕೇಸ್ ಪತ್ತೆಯಾಗಿತ್ತು…! ಅದರಲ್ಲಿ ಧ್ರುವನ ಶವ ಇತ್ತು…! ವಿಚಾರಣೆ ವೇಳೆ ಝೀನಲ್ ತಪ್ಪೊಪ್ಪಿಕೊಂಡಿದ್ದಾಳೆ…!

ಝೀನಲ್ ಮತ್ತು ಶಾಂತಿಲಾಲ್ 1ವರ್ಷದ ಹಿಂದೆ ಮದುವೆಯಾಗಿದ್ದರು. ಶಾಂತಿಲಾಲ್ ಅವರ ಮೊದಲ ಹೆಂಡ್ತಿ ಮಗ ಧ್ರುವ (ಕೊಲೆಯಾದವ). ಝೀನಲ್ ತನ್ನ ಮಗಳ ಬಗ್ಗೆ ಮಾತ್ರ ಯೋಚಿಸುತ್ತಿದ್ದಳು. ಧ್ರುವನನ್ನು ಕಂಡರೆ ದ್ವೇಷಿಸುತ್ತಿದ್ದಳು. ಆತನ ಪ್ಯಾಂಟಿನಿಂದಲೇ ಕುತ್ತಿಗೆ ಬಿಗಿದು ಕೊಂದು…ಈಗ ಪೊಲೀಸರ ಅತಿಥಿಯಾಗಿದ್ದಾಳೆ.








