24 ದಿನ 600ಕಿಮೀ ಸೈಕಲ್ ತುಳಿದು ಪತ್ನಿಯನ್ನು ಹುಡುಕಿದ ಪತಿ…!

Date:

ನಾಪತ್ತೆಯಾಗಿದ್ದ ಪತ್ನಿಗಾಗಿ ಪತಿ ಸತತ 24 ದಿನ ಸುಮಾರು 600ಕಿಮೀ ದೂರ ಸೈಕಲ್ ತುಳಿದ ಘಟನೆ ಜಾರ್ಖಂಡ್ ನ ಜಮೈದ್ ಪುರ್ ನಲ್ಲಿ ನಡೆದಿದೆ. ಮನೋಹರ್ ನಾಯಕ್ ತನ್ನ ಪತ್ನಿಗಾಗಿ ಸೈಕಲ್ ಯಾತ್ರೆ ಕೈಗೊಂಡವರು.


ಇವರು ಮುಸಬಾನಿ ಬಾಲಿಗೊಂಡಾ ಗ್ರಾಮದವರಾಗಿದ್ದು ಪತ್ನಿ ಅನಿತಾ ಜನವರಿ 14ರಂದು ಸಂಕ್ರಾಂತಿ ಹಬ್ಬಕ್ಕೆಂದು ಕುಮಾರ್ಸಾಲ್ ಹಳ್ಳಿಗೆ ಹೋಗಿದ್ದರು. ಅಲ್ಲಿಂದ ನಾಪತ್ತೆಯಾಗಿದ್ದ ಈಕೆಯನ್ನು ಹುಡುಕುವಲ್ಲಿ ಮನೋಹರ್ ನಾಯಕ್ ಯಶಸ್ವಿಯಾಗಿದ್ದಾರೆ.


ಸಂಕ್ರಾಂತಿ ಹಬ್ಬಕ್ಕೆಂದು ಹೋದ ಪತ್ನಿ ಎರಡು ದಿನ ಕಳೆದರೂ ಹಿಂದಿರುಗದಿದ್ದಾಗ ಮನೋಹರ್ ಮುಸಬಾನಿ ಮತ್ತು ದುಮಾರಿಯಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪತ್ನಿ ಬಗ್ಗೆ ಪೊಲೀಸರಿಗೆ ಸುಳಿವು ಸಿಗದೇ ಇದ್ದಾಗ ತಾವೇ ಹುಡುಕಲು ನಿರ್ಧರಿಸಿದರು. ಅನಿತಾ ಅವರ ಮಾನಸಿಕ ಸ್ಥಿತಿ ಸರಿ ಇಲ್ಲ , ಜೊತೆಗೆ ಸರಿಯಾಗಿ ಮಾತಾಡಲು ಬರುವುದಿಲ್ಲ.


ಆದ್ದರಿಂದ ಮನೋಹರ್ ತನ್ನ ಹಳೆಯ ಸೈಕಲ್ ಅನ್ನು ರಿಪೇರಿ ಮಾಡಿಕೊಂಡು‌ ಗ್ರಾಮದಿಂದ ಗ್ರಾಮಕ್ಕೆ ಸುತ್ತಿದ್ದಾರೆ. ದಿನಕ್ಕೆ ಸುಮಾರು 25 ಕಿಮೀ ಸೈಕಲ್ ತುಳಿದಿದ್ದಾರೆ. 65ಗ್ರಾಮಗಳನ್ನು ಸುತ್ತಿದ್ದಾರೆ.ಆದರೂ ಪತ್ನಿಯನ್ನು ಹುಡುಕಲು ಸಾಧ್ಯವಾಗಿರಲಿಲ್ಲ.


ಕೊನೆಗೆ ಪತ್ನಿಯ ಫೋಟೋ ವನ್ನು‌ ಪತ್ರಿಕೆಗಳಿಗೆ ಕೊಟ್ಟು ಪ್ರಕಟಣೆ ಹಾಕಿಸಿದ್ದರು.‌ ಫೋಟೋ‌ ನೋಡಿದ ಒಬ್ಬರು ಪೊಲೀಸರಿಗೆ ತಿಳಿಸಿದ್ದರು. ಅಲ್ಲಿಂದ ಮುಸಬಾನಿ ಪೊಲೀಸರಿಗೆ‌ ಮಾಹಿತಿ ತಲುಪಿತ್ತು. ಅಲ್ಲಿನ ಪೊಲೀಸರು ಮನೋಹರ್ ಗೆ ಮಾಹಿತಿ ನೀಡಿದ್ದಾರೆ. ಅವರು ನೀಡಿದ ಮಾಹಿತಿಯಂತೆ ಕೋಲ್ಕತ್ತಾದ ಕೋಲ್ಕಾತ್ತಾದ ಖರಗ್ ಪುರದ ರಸ್ತೆಬದಿ ಅಂಗಡಿಯೊಂದರ ಬಳಿ‌ ಕುಳಿತಿದ್ದರು. ಅಲ್ಲಿಂದ ಪತ್ನಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ

Share post:

Subscribe

spot_imgspot_img

Popular

More like this
Related

ರಾಜ್ಯದಲ್ಲಿ ಭಾರಿ ಮಳೆಯ ಮುನ್ಸೂಚನೆ: 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ರಾಜ್ಯದಲ್ಲಿ ಭಾರಿ ಮಳೆಯ ಮುನ್ಸೂಚನೆ: 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್...

ಮಾಸಿಕ ಮುಟ್ಟಿನ ವೇಳೆ ಮಹಿಳೆಯರು ತಲೆಸ್ನಾನ ಮಾಡಬಾರದು?!

ಮಾಸಿಕ ಮುಟ್ಟಿನ ವೇಳೆ ಮಹಿಳೆಯರು ತಲೆಸ್ನಾನ ಮಾಡಬಾರದು ಎಂಬ ನಂಬಿಕೆ ಅನೇಕ...

ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆಯಾದ ಸುಹಾನಾ ಸೈಯದ್

ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆಯಾದ ಸುಹಾನಾ ಸೈಯದ್ ಸರಿಗಮಪ ಖ್ಯಾತಿಯ ಸುಹಾನಾ ಸೈಯದ್...

ತೀರ್ಥ ರೂಪಿಣಿಯಾಗಿ ದರ್ಶನ ಕೊಟ್ಟ ಕಾವೇರಿ

ತೀರ್ಥ ರೂಪಿಣಿಯಾಗಿ ದರ್ಶನ ಕೊಟ್ಟ ಕಾವೇರಿ ಮಡಿಕೇರಿ: ಜೀವನದಿ ಕಾವೇರಿಯ ಉಗಮ ಸ್ಥಾನ...