ಮಲಯಾಳಂ ಚೆಲುವೆ,ಕಣ್ಣೋಟದಲ್ಲೇ ಹುಡುಗರ ಮನಗೆದ್ದ ಸುಂದರಿಗೆ ಮಂಗಳೂರು ಕಾರ್ಪೋರೇಟರ್ ಒಬ್ಬರು ಬೋಲ್ಡ್ ಆಗಿದ್ದಾರೆ…!
ಹೌದು, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸಭೆಯಲ್ಲಿ ಗಂಭೀರವಾದ ವಿಷಯವೊಂದರ ಕುರಿತು ಚರ್ಚೆ ನಡೀತಾ ಇತ್ತು. ಸಭೆಯಲ್ಲಿ ಉಪಸ್ಥಿತರಿದ್ದ ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಎಬಿಡಿ ಯೋಜನೆ ಅವ್ಯವಹಾರದಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯಿದ್ದಿನ್ ಬಾವಾ ಶಾಮೀಲಾಗಿದ್ದಾರೆ ಎಂದು ಬಹಿರಂಗ ಆರೋಪ ಮಾಡುತ್ತಿದ್ದರು.
ಚರ್ಚೆ ವಾಗ್ವಾದಕ್ಕೆ ತಿರುಗಿತ್ತು. ಆದರೆ, ಕಾರ್ಪೋರೇಟರ್ ಕಾಂಗ್ರೆಸ್ ನ ನವೀನ್ ಡಿಸೋಜಾ ಪ್ರಿಯ ಪ್ರಕಾಶ್ ವಾರಿಯರ್ ಅವರ ಕಣ್ಣೋಟದ ವೀಡಿಯೋದಲ್ಲಿ ಮೈಮರೆತಿದ್ರು…!