ಕೆಲವು ದಿನಗಳ ಹಿಂದೆ ಫ್ಲೋರಿಡಾ ಶಾಲೆಯೊಂದರಲ್ಲಿ ಮಾಜಿ ವಿದ್ಯಾರ್ಥಿಯೊಬ್ಬ ನಡೆಸಿದ್ದ ಗುಂಡಿನ ದಾಳಿ ವೇಳೆ ಭಾರತ ಮೂಲದ ಶಿಕ್ಷಕಿಯೊಬ್ಬರ ಸಮಯಪ್ರಜ್ಞೆಯಿಂದ ಸಂಭವಿಸಬಹುದಿದ್ದ ದೊಡ್ಡ ಅನಾಹುತ ತಪ್ಪಿದೆ.
ಶಾಲೆಯ ಗಣಿತ ಶಿಕ್ಷಕಿ ಶಾಂತಿ ವಿಶ್ವನಾಥನ್ ವಿದ್ಯಾರ್ಥಿಗಳ ಪಾಲಿಗೆ ರಕ್ಷಕಿಯಾದವರು.ಅಂದು ಆರೋಪಿ ಮಾಜಿ ವಿದ್ಯಾರ್ಥಿ ಎರ್ 15 ರೈಫಲ್ ನೊಂದಿಗೆ ಶಾಲೆ ಒಳಗೆ ಬಂದು ಏಕಾಏಕಿ ಗುಂಡಿನ ದಾಳಿ ನಡೆಸಿದ್ದ. ಆಗ ಶಾಲೆಯ ಎಚ್ಚರಿಕೆ ಗಂಟೆ ಬಾರಿಸಲಾಯಿತು. ಆಗ ಶಿಕ್ಷಕಿ ಶಾಂತ ಅವರು ಕೊಠಡಿಯ ಎಲ್ಲಾ ಕಿಟಕಿ , ಬಾಗಿಲು ಮುಚ್ಚಿ ಯಾರೂ ತರಗತಿಗೆ ಯಾರೂ ಪ್ರವೇಶದಂತೆ ನೋಡಿಕೊಂಡ್ರು. ಜೊತೆಗೆ ವಿದ್ಯಾರ್ಥಿಗಳನ್ನು ನೆಲದ ಮೇಲೆ ಮಲಗಲು ಹೇಳಿದರು ಎಂದು ವರದಿಯಾಗಿದೆ.