ಮಧ್ಯಪ್ರದೇಶದ ಬಿಜೆಪಿ ಸಂಸದರೊಬ್ಬರು ಶಾಲಾ ಶೌಚಾಲಯ ಸ್ವಚ್ಛಗೊಳಿಸಿದ್ದಾರೆ…! ಈ ಸುದ್ದಿ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗಿದೆ.
ಹೀಗೆ ಶಾಲಾ ಶೌಚಾಲಯ ಸ್ವಚ್ಛಮಾಡಿದ ಸಂಸದರು ಜನಾರ್ದನ ಮಿಶ್ರಾ ಅವರು. ಇವರು ಕಳೆದ ವಾರ ತಮ್ಮ ಕ್ಷೇತ್ರದ ಶಾಲೆಯೊಂದಕ್ಕೆ ಹೋಗಿದ್ದರು. ವಿದ್ಯಾರ್ಥಿಗಳು ಶೌಚಾಲಯ ಬಳಸದೆ ಹೊರಗಡೆ ಹೋಗುತ್ತಿದ್ದುದು ಗಮನಕ್ಕೆ ಬಂದಿದೆ.
ಇದರಿಂದ ಮಿಶ್ರಾ ಅವರಿಗೆ ಕೋಪ ಬಂದಿದೆ. ಶೌಚಾಲಯವನ್ನು ಪರಿಶೀಲಿಸಿದ್ದಾರೆ. ಬಹಳಷ್ಟು ಸಮಯದಿಂದ ಶೌಚಾಲಯ ಸ್ವಚ್ಛ ಮಾಡದೇ ಇರೋದು ಗೊತ್ತಾಗಿದೆ. ಸ್ವತಃ ಸಂಸದರೇ ಕೈಯಲ್ಲೇ ಕ್ಲೀನ್ ಮಾಡಿದ್ದಾರೆ. ಕಮೋಡ್ ನಲ್ಲಿ ಕಟ್ಟಿದ್ದ ಮಣ್ಣು ಮತ್ತು ಕಸವನ್ನು ತೆಗೆದಿದ್ದಾರೆ.