ಬಾಲಿವುಡ್ ನಟಿ ಕಂಗನಾ ರಣಾವತ್ ರಾಜಕೀಯಕ್ಕೆ ಎಂಟ್ರಿಕೊಡ್ತಿದ್ದಾರೆ ಎಂಬ ಅಂತೆಕಂತೆ ಸುದ್ದಿಗೆ ಸುಳ್ಳು…! ಈ ಬಗ್ಗೆ ಅವರ ಮ್ಯಾನೇಜರೇ ಸ್ಪಷ್ಟಪಡಿಸಿದ್ದಾರೆ.
ಕಂಗನಾ ಯಾವ ಪಕ್ಷವನ್ನು ಸೇರುತ್ತಿಲ್ಲ. ಈ ಸುದ್ದಿ ಸುಳ್ಳು. ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಹ ಭೇಟಿ ಮಾಡಿಲ್ಲ ಎಂದು ಮ್ಯಾನೇಜರ್ ಹೇಳಿದ್ದಾರೆ. ಅವರು ರಾಜಕೀಯದಲ್ಲಿ ಆಸಕ್ತಿ ತೋರಿಸುತ್ತಿಲ್ಲ. ಸದ್ಯ ಮಣಿಕರ್ಣಿಕಾ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಅನೇಕ ಸಿನಿಮಾಗಳು ಅವರ ಕೈಯಲ್ಲಿದೆ. ಸುಳ್ಳು ಸುದ್ದಿಯನ್ನು ನಂಬ ಬೇಡಿ ಎಂದು ಮ್ಯಾನೇಜರ್ ಹೇಳಿದ್ದಾರೆ.