ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 2018ರ ಇಂಡಿಯಾ -ಕೊರಿಯಾ ಆರ್ಥಿಕ ವ್ಯವಹಾರಗಳ ಶೃಂಗಸಭೆ ಆರಂಭವಾಗಿದೆ.
ಇಲ್ಲಿ ದಕ್ಷಿಣ ಕೊರಿಯಾದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ಹ್ಯುಂಡೈ ತನ್ನ ಭವಿಷ್ಯದ ವಾಹನಗಳನ್ನು ಪ್ರದರ್ಶನ ಮಾಡಿತು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶೃಂಗಸಭೆಗೆ ಚಾಲನೆ ನೀಡಿದರು. ಅಷ್ಟೇ ಅಲ್ಲದೆ ಹ್ಯುಂಡೈ ಮೋಟಾರ್ಸ್ ಜೊತೆ ಔಪಚಾರಿಕ ಮಾತುಕತೆ ನಡೆಸಿದರಲ್ಲದೆ , ಅದರ ಭವಿಷ್ಯದ ವಾಹನಗಳ ಬಗ್ಗೆ ಮಾಹಿತಿ ಪಡೆದರು.
ಬಳಿಕ ಅವರೇ ಕಾರು ಚಾಲನೆ ಮಾಡಿದರು…! ಸ್ವತಃ ಕಾರು ಚಲಾಯಿಸಿದ ಮೋದಿ , ಪಕ್ಕದಲ್ಲಿ ಕುಳಿತ ಹ್ಯುಂಡೈ ಆರ್ ಡಿ ವಿಭಾಗದ ಎಸ್ ಎಚ್ ಕಿಮ್ ಜೊತೆ ಹೊಸ ಕಾರಿನ ಬಗ್ಗೆ ಚರ್ಚಿಸಿದರು. ನೆಕ್ಸೋ ಮತ್ತು ಇಯೋಕಿಕ್ ಎಂಜಿನ್ ಸಾಮಾರ್ಥ್ಯದ ಮತ್ತು ಪರಿಸರ ಮಾಲಿನ್ಯ ತಡೆಯುವಲ್ಲಿ ಹೊಸ ಕಾರುಗಳ ಪಾತ್ರದ ಬಗ್ಗೆ ಚರ್ಚೆ ಮಾಡಿದ್ರು.