ಮತದಾನದ ದಿನಾಂಕ ನಿರ್ಧಾರವಾಗಿಲ್ಲ !

Must read

ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನದ ದಿನಾಂಕ ಇನ್ನೂ ನಿಗಧಿಯಾಗಿಲ್ಲ‌ ಎಂದು ಭಾರತೀಯ ಚುನಾವಣಾ ಆಯೋಗ ಇನ್ನೂ ನಿರ್ಧಾರ ಮಾಡಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ‌.


ರಾಜ್ಯ ವಿಧಾನಸಭೆ ಚುನಾಚಣೆಗೆ ಸಂಬಂಧಿಸಿದಂತೆ ಕೆಲವೊಂದು ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು ಚುನಾವಣೆ‌ ದಿನಾಂಕ‌ ಇನ್ನೂ ನಿಗಧಿಯಾಗಿಲ್ಲ ಎಂದು ಹೇಳಿದ್ರು.‌


ರಾಜ್ಯ ಚುನಾವಣಾ ಆಯೋಗ ಯಾವುದಾದರೂ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗಕ್ಕೆ‌ ಶಿಫಾರಸ್ಸು ‌ಮಾಡಿದಿಯೇ ಎಂಬುದರ ಬಗ್ಗೆ ಅವರು ಏನನ್ನು ಹೇಳಲಿಲ್ಲ.


ಏಪ್ರಿಲ್ 15 ರ ವೇಳೆಗೆ ಅಥವಾ ಮೇ‌ ಮೊದಲ ವಾರದಲ್ಲಿ ಚುನಾವಣೆ ನಡೆಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಒ.ಪಿ ರಾವತ್ ತಿಳಿಸಿದ್ದರು.

- Advertisement -spot_img

More articles

- Advertisement -spot_img

Latest article