ರಾಕಿಂಗ್ ಸ್ಟಾರ್ ಯಶ್ ಅಪರಾಧ ಮುಕ್ತ ಸಮಾಜದ ನಿರ್ಮಾಣಕ್ಕೆ ಮುಂದಾಗಿದ್ದಾರೆ .ನಾವು ಜೀವನ ಮಾಡುವ ಸುತ್ತಮುತ್ತ ಉತ್ತರ ಪರಿಸರ ಸೃಷ್ಟಿ ಮಾಡಿಕೊಳ್ಳಬೇಕು ಎಂದು ಸಂದೇಶ ಸಾರಿದ್ದ ಯಶ್ ಅವರು ಇದೀಗ ಸಿಸಿಬಿಯ ರಾಯಭಾರಿ ಆಗಿ ಆಯ್ಕೆಯಾಗಿದ್ದಾರೆ.
ಪ್ರೋ ಕಬ್ಬಡಿ ಜಾಹೀರಾತನ್ನು ಹೊರತುಪಡಿಸಿ ಈ ತನಕ ಯಾವುದೇ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳದ ಯಶ್ ಮೊದಲ ಬಾರಿಗೆ ಪೊಲೀಸ್ ಇಲಾಖೆಯ ರಾಯಭಾರಿ ಆಗಿದ್ದಾರೆ.
ಹಿಂದೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿಸಿಬಿಯ ರಾಯಭಾರಿ ಆಗಿದ್ದರು. ಕಿಚ್ಚನ ಬಳಿಕ ಯಶ್ ರಾಯಭಾರಿ ಆಗಿದ್ದಾರೆ.
ಅಪರಾಧ ಮುಕ್ತಚಟುವಟಿಕೆಗಳಿಂದ ಸಮಾಜವನ್ನು ಮುಕ್ತರಾಗುವಂತೆ ಸಂದೇಶ ಸಾರುವ ಜಾಹಿರಾತುಗಳಲ್ಲಿ ಯಶ್ ಅಭಿನಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.