ಭಾರತದ ಅಗ್ರ ಸೆಲೆಬ್ರಿಟಿ ಯಾರು ಗೊತ್ತಾ..? ಟಾಪ್ 10 ಪಟ್ಟಿಯಲ್ಲಿದ್ದಾಳೆ ನಮ್ಮ ಕನ್ನಡತಿ..!

Date:

ಬಾಲಿವುಡ್ ಬಾದ್ ಶಾ ಎಂದೇ ಖ್ಯಾತಿ ಪಡೆದಿರುವ ಶಾರುಖ್ ಖಾನ್, ತಾವು ಅಭಿನಯಿಸಿರುವ ದಿಲ್ವಾಲೆ ಚಿತ್ರದ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಆಗಲೇ ಅವರಿಗೊಂದು ಸಿಹಿ ಸುದ್ದಿ ಸಿಕ್ಕಿದೆ. ಅದೇನೆಂದರೆ 2015ನೇ ಸಾಲಿನ ಫೋರ್ಬ್ಸ್ ಮ್ಯಾಗಜಿನ್ ಈ ವರ್ಷದ ಭಾರತದ ಸೆಲೆಬ್ರಿಟಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಶಾರುಖ್ ಖಾನ್ 257.5 ಕೋಟಿ ಗಳಿಕೆಯ ಮೂಲಕ ಅಗ್ರಸ್ಥಾನ ಅಲಂಕರಿಸಿದ್ದಾರೆ.
ಶಾರುಖ್ ಖಾನ್ ಗೆ ಎಲ್ಲಾ ವಿಷಯಗಳಲ್ಲೂ ಸವಾಲೊಡ್ಡುವ ಸಲ್ಮಾನ್ ಖಾನ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಅವರ ಕಳೆದ ವರ್ಷದ ಆದಾಯ ಬರೋಬ್ಬರಿ 202.75 ಕೋಟಿ..! ಇನ್ನು ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್ ಮೂರನೇ ಸ್ಥಾನದಲ್ಲಿದ್ದು, 112 ಕೋಟಿ ಗಳಿಸಿದ್ದಾರೆ.
ಬಾಲಿವುಡ್ ನಟರಿಗೆ ಸವಾಲೆಸೆದಿರುವ ಭಾರತದ ಏಕದಿನ ಮತ್ತು ಟಿ-20 ತಂಡದ ನಾಯಕ ಎಂ ಎಸ್ ಧೋನಿ ನಾಲ್ಕನೇ ಸ್ಥಾನ ಗಳಿಸಿದ್ದು, 120 ಕೋಟಿ ಗಳಿಕೆ ಮಾಡಿದ್ದಾರೆ. ಇನ್ನು ಇತ್ತೀಚೆಗೆ ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿಯಾಗಿದ್ದ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ 5ನೇ ಸ್ಥಾನ ಪಡೆದಿದ್ದಾರೆ. ಅವರ ಕಳೆದ ವರ್ಷದ ಆದಾಯ 104 ಕೋಟಿ..! ಇನ್ನು ಬಾಲಿವುಡ್ ನಲ್ಲಿ ಅಕ್ಕಿ ಎಂದೇ ಖ್ಯಾತಿ ಪಡೆದಿರುವ ಅಕ್ಷಯ್ ಕುಮಾರ್ ಕಳೆದ ವರ್ಷ 127 ಕೋಟಿ ಗಳಿಕೆ ಮಾಡಿದ್ದು, ಟಾಪ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.
ಭಾರತ ತಂಡದ ಟೆಸ್ಟ್ ಟೀಮ್ ಕ್ಯಾಪ್ಟನ್ ವಿರಾಟ್ ಕೊಹ್ಲಿಯ ಕಳೆದ ವರ್ಷದ ಆದಾಯ ಬರೋಬ್ಬರಿ 104.78 ಕೋಟಿ. ಅವರು ಭಾರತದ ಸೆಲೆಬ್ರಿಟಿಗಳ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದ್ದು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ರವರು 40 ಕೋಟಿ ಗಳಿಸಿ 8ನೇ ಸ್ಥಾನದಲ್ಲಿದ್ದಾರೆ. ಇನ್ನು 74.5 ಕೋಟಿ ಗಳಿಸಿರುವ ಹೃತಿಕ್ ರೋಷನ್ 10ನೇ ಸ್ಥಾನ ಪಡೆದಿದ್ದಾರೆ.
ಇಡೀ ಪಟ್ಟಿಯಲ್ಲಿರುವ ಅತಿ ದೊಡ್ಡ ಅಚ್ಚರಿ ಎಂದರೆ ದೀಪಿಕಾ ಪಡುಕೋಣೆ..! ಯೆಸ್.. ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್, ಕರೀನಾ ಕಪೂರ್ರಂತಹ ಘಟಾನುಘಟಿಗಳನ್ನೇ ಹಿಂದಿಕ್ಕಿರುವ ಈ ಕನ್ನಡತಿ ಕಳೆದ ವರ್ಷ 59 ಕೋಟಿ ಗಳಿಕೆ ಮಾಡುವ ಮೂಲಕ 9ನೇ ಸ್ಥಾನ ಗಳಿಸಿದ್ದಾರೆ.
ದಕ್ಷಿಣ ಭಾರತದ ಸೆಲೆಬ್ರಿಟಿಗಳನ್ನು ಗಮನಿಸಿದರೆ 36ನೇ ಸ್ಥಾನದಲ್ಲಿರುವ ತೆಲುಗು ನಟ ಮಹೇಶ್ ಬಾಬು ಮೊದಲ ಸ್ಥಾನದಲ್ಲಿದ್ದಾರೆ, ಅವರ ಕಳೆದ ವರ್ಷದ ಆದಾಯ ಬರೋಬ್ಬರಿ 51.1 ಕೋಟಿ. ನಂತರದ ಸ್ಥಾನ ತಮಿಳ್ ಸೂಪರ್ ಸ್ಟಾರ್ ಧನುಷ್ ಪಾಲಾಗಿದೆ.

2015-Forbes-India-Celebrity-List

top-10-indian-celebrity

Clicke here to see 2015 Forbes India Celebrity 100

 

  • ರಾಜಶೇಖರ ಜೆ

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಇಲ್ಲಿ ಉಳಿದುಕೊಳ್ಳೋಕೆ ಬೇಕಾಗಿದ್ದನ್ನೆಲ್ಲಾ ಸರ್ಕಾರವೇ ಕೊಟ್ಟು, ಸಂಬಳವನ್ನೂ ನೀಡುತ್ತೆ..!

ಈ ವ್ಯಕ್ತಿಗೆ ನಿದ್ದೆ ಮಾಡುವುದೇ ಮರೆತುಹೋಗಿದೆ..! 40 ವರ್ಷದಿಂದ ನಿದ್ದೆಯೇ ಮಾಡಿಲ್ವಂತೆ ಈ ಭೂಪ..!

ಸಲ್ಮಾನ್ ಖಾನ್ ನಿರಪರಾಧಿ..! ಹಾಗಾದರೆ ನಿಜವಾದ ಆಪರಾಧಿ ಯಾರು..?

ಇವರಿಗೆ 25 ವರ್ಷಗಳ ನಂತರ ಅಮ್ಮ ಸಿಕ್ಕಳು..! ಗೂಗಲ್ ಅರ್ಥ್ ಸಹಾಯದಿಂದ ತಾಯಿಯನ್ನು ಹುಡುಕಿದ ಮಗ..!

ಕೈ ಇಲ್ಲದ ಈ ಕ್ರಿಕೆಟಿರ್ ಗೂಗ್ಲೀ ಎಸೆಯುತ್ತಾನೆ..! ಸಿಕ್ಸರ್ ಸಿಡಿಸಿ ಮನೋರಂಜನೆ ಒದಗಿಸುತ್ತಾನೆ..!

ಬರೀ ಪೈರಸಿ ಸಿನಿಮಾಗಳನ್ನು ನೋಡ್ಕೊಂಡು ಕನ್ನಡ ಸಿನಿಮಾಗಳ ವಿರುದ್ಧವೇ ಮಾತಾಡಿದ್ರೆ ಹೇಗೆ ಸ್ವಾಮಿ..

ಇವರು ಎಂಬಿಬಿಎಸ್ ಸ್ಟೂಡೆಂಟ್, ಆಟೋ ಡ್ರೈವರ್..! ಇವರು ಉಚಿತ ಆಟೋ ಸೇವೆ ಕೊಡ್ತಾರೆ ಯಾಕೆ ಗೊತ್ತಾ..?

ಇಲ್ಲಿವೆ ನೋಡಿ ಕೋಟಿ ಕೋಟಿ ಬೆಲೆಯ ವಿಶ್ವದ ದುಬಾರಿ ತಿನಿಸುಗಳು..!

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...