ಇಂದಿನ ಟಾಪ್ 10 ಸುದ್ದಿಗಳು..! 12.12.2015

0
65

1. ಐಸಿಸ್ ಸೇರೋಕೆ ಹೊರಟವನ ಬಂಧನ..!
ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸೇರಲು ಹೋಗಿದ್ದ 23 ವರ್ಷದ ಚೆನ್ನೈ ನಿವಾಸಿಯನ್ನು ಎನ್ಐಎ( ರಾಷ್ಟ್ರೀಯ ತನಿಖಾ ಸಂಸ್ಥೆ)ಬಂಧಿಸಿದೆ.
ಕಂಪ್ಯೂಟರ್ ತಜ್ಞ ನಾಸಿರ್ ಫಕೀರ್ ಬಂಧಿತನೆಂದು ತಿಳಿದುಬಂದಿದೆ. ಈತ ದುಬೈಗೆ ತೆರೆಳಿ ಐಸಿಸ್ನ ನೇಮಕಾತಿ ಅಧಿಕಾರಿ ಮ್ಯಾಡ್ ಮುಲ್ಲಾನನ್ನು ಸಂಪರ್ಕಿಸಿದ್ದು, ಆತ ಲಿಬಿಯಾಗೆ ಕರೆದೊಯ್ಯುವ ಭರವಸೆಯನ್ನು ನೀಡುವುದರ ಜೊತೆಗೆ ವಿಸಾ ವ್ಯವಸ್ಥೆಯನ್ನೂ ಮಾಡಿದ್ದನೆಂದು ತಿಳಿದು ಬಂದಿದೆ. ಆದರೆ ಸುಡಾನ್ ಅಧಿಕಾರಿಗಳು ಫಕೀರ್ನ ಅನುಮಾನಾಸ್ಪದ ನಡುವಳಿಕೆಯನ್ನು ಕಂಡು ಭಾರತಕ್ಕೆ ಗಡಿಪಾರು ಮಾಡಿದ್ದಾರೆ…! ಆ ಬಳಿಕ ಎನ್ಐಎ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ವರದಿಯಾಗಿದೆ.
2. ಸಂಸತ್ತಲ್ಲಿ ಪ್ರತಿಭಟನೆ ನ್ಯಾಷನಲ್ ಹೆರಾಲ್ಡ್ ಗಾಗಿ ಅಲ್ವಂತೆ..!

ನಾವು ಸಂಸತ್ತಿನಲ್ಲಿ ಪ್ರತಿಭಟನೆ ಮಾಡ್ತಾ ಇರೋದು ನ್ಯಾಷನಲ್ ಹೆರಾಲ್ಡ್ ಕೇಸಿಗಾಗಿ ಅಲ್ವೇ ಅಲ್ಲ..! ವ್ಯಾಪಂ, ಲಲಿತ್ಗೇಟ್ ಹಗರಣ ಮತ್ತು ನಾಯಿ ಹೇಳಿಕೆ ನೀಡಿರೋ ಸಚಿವ ವಿ.ಕೆ.ಸಿಂಗ್ ಅವರ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವ ಬಿಜೆಪಿಯ ನಿಷ್ಕ್ರೀಯತೆ ಬಗ್ಗೆ ಅಂತ ಕಾಂಗ್ರೆಸ್ ಹೊಸದಾಗಿ ಸಮರ್ಥನೆ ನೀಡಿದೆ..!

3. ನಮಗೆ ಹೈಸ್ಪೀಡ್ ಅಭಿವೃದ್ಧಿಯೂ ಬೇಕೆಂದರು ಮೋದಿ..!

ಹೈದರಾಬಾದ್ನಲ್ಲಿ ಭಾರತ ಮತ್ತು ಜಪಾನ್ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಭಾರತದ ಅಭಿವೃದ್ಧಿಯಲ್ಲಿ ಜಪಾನ್ ದೊಡ್ಡ ಪಾಲುದಾರ ದೇಶವಾಗಿದೆ..! ನಮಗೆ ಹೈಸ್ಪೀಡ್ ರೈಲಿನ ಜೊತೆಗೆ ಹೈಸ್ಪೀಡ್ ಅಭಿವೃದ್ಧಿಯೂ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
3 ದಿನಗಳ ಭಾರತ ಭೇಟಿಗೆ ಬಂದಿರುವ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರನ್ನು ಪ್ರಧಾನಿ ಮೋದಿ ಸ್ವಾಗತಿಸಿದರು. ನಂತರ ಉದ್ಯಮಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಅಂತೆಯೇ ಪರಮಾಣು ವಿದ್ಯುತ್, ಮುಂಬೈ- ಅಹಮ್ಮದಾಬಾದ್ ನಡುವಿನ ಬುಲೆಟ್ ರೈಲು ಓಡಾಟ ಒಡಂಬಡಿಕೆ ಸೇರಿದಂತೆ ನಾಲ್ಕು ಮಹತ್ವದ ಒಪ್ಪಂದಗಳಿಗೆ ಭಾರತ-ಜಪಾನ್ ಸಹಿಹಾಕಿದೆ. ದೇಶದ ಮೊದಲ ಬುಲೆಟ್ ರೈಲು ಯೋಜನೆಗೆ ಜಪಾನ್ ಪ್ರಧಾನಿ ಶಿಂಜೋ ಅಬೆ ಮತ್ತು ನರೇಂದ್ರ ಮೋದಿ ಸಹಿ ಹಾಕಿದ್ದು, 98,000 ಕೋಟಿ ರೂ. ಮೊತ್ತದ ಯೋಜನೆ ಇದಾಗಿದೆ..! ಜಪಾನ್ ಈ ಯೋಜನೆಗೆ ಶೇ81 ಅಂದರೆ 52,800 ಕೋಟಿರೂಗಳನ್ನು ಸಾಲದ ರೂಪದಲ್ಲಿ ಒದಗಿಸಲಿದೆ..!

4. ಶಾರೂಖ್ ಖಾನ್ ಗೆ ಮಕ್ಕೊಳಡನೆ ಬೆಂಗಳೂರಲ್ಲಿ ಬದುಕುವ ಆಸೆ..!
ನಾನು ನನ್ನ ಬಾಲ್ಯವನ್ನು ಬೆಮಗಳೂರಲ್ಲಿ ಕಳೆದಿದ್ದೇನೆ. ನನ್ನ ಅಜ್ಜಿಮನೆ ಇಲ್ಲಿದೆ. ನೆಂಟರಿಷ್ಟರೂ ಇಲ್ಲೇ ಇದ್ದಾರೆ. ಆದ್ದರಿಂದ ನಾನೂ ಇಲ್ಲೊಂದು ಮನೆಯನ್ನು ಕಟ್ಟಿ ನನ್ನ ಮಕ್ಕಳ ಜೊತೆಯಲ್ಲಿ, ಸಂಬಂಧಿಕರೊಡನೆ ಕೆಲವು ಕಾಲವಾದರೂ ಕಳೆಯಬೇಕೆಂಬ ಆಸೆ ನನಗಿದೆ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಹೇಳಿದ್ದಾರೆ..! ಅವರು ಬೆಂಗಳೂರಿನ ಐಐಎಂ-ಬಿ ಹಳೆ ವಿದ್ಯಾರ್ಥಿಗಳ ಸಂಘ ಆಯೋಜಿಸಿರುವ ನಾಯಕತ್ವ ಶೃಂಗ `ಇಂಬ್ಯೂ’ ನ ಉದ್ಘಾನೆ ಸಮಾರಂಭದಲ್ಲಿ ಭಾಗವಹಿಸಿದ್ದರು.
5. ದಕ್ಷಿಣ ಭಾರತಕ್ಕೆ ಅಪ್ಪಳಿಸಲಿದೆ ಎಲ್ನಿಯೋ ಚಂಡಮಾರುತ..! ಭಾರಿ ಮಳೆಯಾಗುವ ಸಾಧ್ಯತೆ.

ಈಗಾಗಲೇ ತಮಿಳುನಾಡು ಮಳೆಯಿಂದ ತತ್ತರಿಸಿದೆ. ಈಗ ಮತ್ತೆ ಇನ್ನೊಂದು ಭಾರಿ ಮಳೆಯ ಮನ್ಸೂಚನೆ ಸಿಕ್ಕಿದೆ. ಎಲಿನಿಯೋ ಚಂಡಮಾರುತ ಕೆಲವೇ ದಿನಗಳಲ್ಲಿ ದ.ಭಾರತ ಮತ್ತು ಕೇಂದ್ರ ಭಾರತದಲ್ಲಿ ಭಾರಿ ಮಳೆ ಸುರಿಸಲಿದೆ ಎಂದುವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಮಾಜಿಕ ಆಯೋಗ ಹಾಗೂ ಆಫ್ರಿಕಾ ಮತ್ತು ಏಷ್ಯಾಗಳ ಸಮಗ್ರ ಮುನ್ಸೂಚನೆ ವ್ಯವಸ್ಥೆ ಜಂಟಿಯಾಗಿ ಬಿಡುಗಡೆ ಮಾಡಿರೋ ಮೂರನೇ ಸಲಹಾ ವರದಿಯಲ್ಲಿ ಹೇಳಲಾಗಿದೆ..! ಅಪ್ಪಳಿಸಲಿರೋ ಎಲ್ನಿಯೋದಿಂದಾಗಿ ಈ ವರ್ಷದ ಅಂತ್ಯ ಮತ್ತು 2016ರ ಆರಂಭದಲ್ಲಿಯೂ ಭಾರಿ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ.

6. ಪಾವಗಡದಲ್ಲಿ ನಿರ್ಮಾಣವಾಗಲಿದೆ ವಿಶ್ವದಲ್ಲೇ ಅತೀ ದೊಡ್ಡ ಸೌರಪಾರ್ಕ್..!
ತುಮಕೂರು ಜಿಲ್ಲೆಯ ಪಾವಗಡದಲ್ಲಿ ವಿಶ್ವದಲ್ಲೇ ಅತಿದೊಡ್ಡ ಸೌರಪಾರ್ಕ್ ನಿಮಾಣ ಮಾಡಲಾಗುತ್ತಿದ್ದು, ಪ್ರಧಾನಿ ನರೇಂದ್ರಮೋದಿಯವರು ಮುಂದಿನ ತಿಂಗಳು ಭೂಮಿ ಪೂಜೆ ನೆರವೇರಿಸಲಿದ್ದಾರೆಂದು ಇಂಧನ ಸಚಿವ ಡಿ.ಕೆ ಶಿವಕುಮಾರ್ ಹೆಳಿದ್ದಾರೆ.
12 ಸಾವಿರ ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರು ಸೌರಪಾರ್ಕ್ ವಿಶ್ವದಲ್ಲೇ ಅತಿದೊಡ್ಡ ಸೌರಪಾಕರ್್ ಆಗಲಿದೆ. ವಾರ್ಷಿಕವಾಗಿ 7ಸಾವಿರ ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾಧಿಸುವ ಗುರಿಯನ್ನು ಹೊಂದಿದೆ.

7. ಫೇಸ್ ಬುಕ್ ಹಿನ್ನೋಟ ವೀಡಿಯೋದಲ್ಲಿ ಸ್ಥಾನಪಡೆದ ಮೋದಿ..!

ಇನ್ನೇನು 2015 ಮುಗಿಯಯುತ್ತಲೇ ಬಂತು..! ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ದಿಗ್ಗಜ ಫೇಸ್ಬುಕ್ ಈ ವರ್ಷದ ಹಿನ್ನೋಟದ ವೀಡಿಯೋವನ್ನು ಪ್ರಕಟಮಾಡಿದೆ.

ವಿಯಾಟ್ನಂನಲ್ಲಿ ಸಲಿಂಗ ವಿವಾಹಕ್ಕೆ ಅನುಮತಿ ನೀಡಿ ಒತ್ತಾಯಿಸಿ ನಡೆಸಿದ ಸೈಕಲ್ ರ್ಯಾಲಿಯ ದೃಶ್ಯಗಳಿಂದ ಆರಂಭವಾಗುವ ಈ ವೀಡಿಯೋದಲ್ಲಿ ನಾಸಾದ ಸಾಧನೆ, ಬ್ಲಡ್ ಮೂನ್, ಪ್ಯಾರಿಸ್ ದುರಂತ, ಕ್ರೀಡಾ ವಿಷಯಗಳು, ಮೋದಿ ಭಾಷಣ ಸೇರಿದಂತೆ ಹಲವಾರು ವಿಷಯಗಳು ಈ 2.02 ನಿಮಿಷದ ವೀಡಿಯೋದಲ್ಲಿ ಸ್ಥಾನಗಿಟ್ಟಿಸಿಕೊಂಡಿದೆ.

8. ರೈಲಿನ ಶೌಚಾಲಯದಲ್ಲಿ ಸಿಕ್ಕಿಕೊಂಡ ವೃದ್ಧೆಯಕಾಲು..!

ಚಲಿಸುತ್ತಿದ್ದ ಕೊಂಕಣಕನ್ಯಾ ಎಕ್ಸ್ಪ್ರೆಸ್ ರೈಲಿನ ಶೌಚಾಲಯದ ರಂಧ್ರದಲ್ಲಿ ರಾಬಿಬಾಬಿ ಶೇಖ್ (65) ಎಂಬ ವೃದ್ಧೆ ಕಾಲು ಸಿಕ್ಕಿಕೊಂಡಿದ್ದ ಘಟನೆ ಗುರುವಾರ ಮಧ್ಯರಾತ್ರಿ 11ರ ಸುಮಾರಿಗೆ ನಡೆದಿದೆ. ರೈಲ್ವೇ ಸಿಬ್ಬಂದಿಗಳು 11 ಗಂಟೆಗಳ ರಕ್ಷಣಾ ಕಾರ್ಯಚರಣೆ ನಂತರ ಅಜ್ಜಿಯನ್ನು ಸುರಕ್ಷಿತವಾಗಿ ಹೊರತಮದಿದ್ದಾರೆ. ಬೆಳಿಗ್ಗೆ 1 ಗಂಟೆಗೆ ರತ್ನಾಗಿರಿ ನಿಲ್ದಾಣಕ್ಕೆ ತಲುಪುತ್ತಿದ್ದಂತೆ ಕಾರ್ಯಚರಣೆ ಆರಂಭಿಸಲಾಯಿತು. ರಾತ್ರಿ 1ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೆ ವೃದ್ಧೆ ಹಾಗೇ ಪ್ರಯಾಣಿಸಬೇಕಾಯಿತೆಂದು ನಂಬಲಾರ್ಹ ಮೂಲಗಳಿಂದ ತಿಳಿದುಬಂದಿದೆ.

9. ಮುಖ್ಯಮಂತ್ರಿಗಳಿಂದ ಶಿವಣ್ಣ- ಸುದೀಪ್ ಸಿನಿಮಾ ಟೈಟಲ್ ಲಾಂಚ್..!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಒಟ್ಟಾಗಿ ಅಭಿನಯಿಸುತ್ತಿದ್ದಾರೆ..! ಈ ಇಬ್ಬರು ಸಿನಿಲೋಕದ ಸ್ಟಾರ್ನಟರನ್ನುನ ಒಂದೇ ಪರದೆಯಲ್ಲಿ ತೋರಿಸೋಕೆ ಹೊರಟಿರೋದು ಜೋಗಿ ಪ್ರೇಮ್..! ಈ ಚಿತ್ರ ಸೆಟ್ಟೇರುವ ಮುನ್ನವೇ ಬಹುನಿರೀಕ್ಷೆಯನ್ನು ಹುಟ್ಟುಹಾಕಿದ್ದು ಈ ಚಿತ್ರದ ಟೈಟಲ್ ಅನ್ನು ಡಿಸೆಂಬರ್ 13ರಂದು (ನಾಳೆ) ಬೆಂಗಳೂರಿನ ಲಲೀತ್ ಅಶೋಕ್ ಹೋಟೆಲ್ನಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲಾಂಚ್ ಮಾಡಲೊದ್ದಾರೆ. ನಾಳೆ ಸಂಜೆ 7 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.

10. ಬ್ರಿಟನ್ ಮುಸ್ಲಿಂರು ಸೇನೆಗಿಂತ ಐಸಿಸ್ಲ್ಲೇ ಹೆಚ್ಚಂತೆ..!

ಬ್ರಿಟನ್ ಸೇನೆಯಲ್ಲಿರೋ ಮುಸ್ಲಿಂರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿಐಸಿಸ್( ಇಸ್ಲಾಮಿಕ್ ಉಗ್ರ ಸಂಘಟನೆ) ನಲ್ಲಿದ್ದಾರೆಂದು ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಕಣದಲ್ಲಿರೋ ರಿಪಬ್ಲಿಕನ್ ಅಭ್ಯಥರ್ಿ ಡೊನಲ್ಡ್ ಟ್ರಂಪ್ ಹೇಳಿದ್ದಾರೆ..!
69 ವರ್ಷದ ಟ್ರಂಪ್ ಎರಡು ದಿನದ ಹಿಂದಷ್ಟೇ ಮುಸ್ಲಿಂರಿಗೆ ಅಮೇರಿಕಾ ಪ್ರವೇಶ ನಿಷೇಧಿಸಬೇಕೆಂದು ವಿವಾದಿತ ಹೇಳಿಕೆಯನ್ನು ನೀಡಿದ್ದರು. ಈಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

LEAVE A REPLY

Please enter your comment!
Please enter your name here