ಹಾಟ್ ಕ್ವೀನ್ ಸಂಜನಾ ಗಲ್ರಾನಿ ನೀವೆಂದೂ ಕಾಣದ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ವಿಭಿನ್ನ ಪಾತ್ರಗಳ ಮೂಲಕ ವೀಕ್ಷಕರ ಮನಸೂರೆಗೊಂಡಿರುವ ಅಭಿನಯ ಚತುರೆ ರಾಣಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ.
ಹೌದು ಮೆಗಾ ಬಜೆಟ್ ಟಿ ವಿ ಶೋ ‘ಸ್ವರ್ಣ ಖಡ್ಗಂ’ ನಲ್ಲಿ ಸಂಜನಾ ವಾರಿಯರ್ ಕ್ವೀನ್ ಆಗಿ ಸದ್ದು ಮಾಡಲಿದ್ದಾರೆ. ಆರ್ಕಾ ಮೀಡಿಯಾ ನಿರ್ಮಾಣದ ಈ ಟಿವಿ ಶೋನಲ್ಲಿ ಸಂಜನಾ ಮಹಾರಾಣಿ.
ಇಡೀ ಶೋ ಸಂಜನಾ ಅವರ ಮೇಲೆಯೇ ನಿಂತಿದೆ.ಮಹಾರಾಣಿ ಮಹಾದಾತ್ರಿಯಾಗಿ ವೈರಿಗಳ ವಿರುದ್ಧ ಅಖಾಡದಲ್ಲಿ ಸೆಣಸಲಿದ್ದಾರೆ ವೀರ ವನಿತೆಯಾಗಿ ಸಂಜನಾ. ಈ ಶೋ ತೆಲುಗು ಮತ್ತು ಕನ್ನಡ ಮಾತ್ರವಲ್ಲದೆ ಈ ಟಿವಿ ಅಥವಾ ಕಲರ್ಸ್ ವಾಹಿನಿ ಯಾವೆಲ್ಲಾ ಪ್ರಾದೇಶಿಕ ಭಾಷೆಗಳಲ್ಲಿವೆಯೋ ಅಲ್ಲೆಲ್ಲಾ ಆಯಾ ಭಾಷೆಗಳಲ್ಲಿಯೇ ಪ್ರಸಾರವಾಗಲಿದೆ.
ರಾಮೋಜಿ ಫಿಲ್ಮ್ ಸಿಟಿಯಲ್ಲಿ ಈ ಶೋನ ಚಿತ್ರೀಕರಣ ನಡೀತಾ ಇದೆ. ಸಂಜನಾ ಈ ಶೋ ಗಾಗಿ ಯುದ್ಧಕಲೆ , ಕತ್ತಿವರಸೆ ಅಭ್ಯಾಸ ಮಾಡಿದ್ದಾರೆ.
ಬಹುಭಾಷೆಗಳಲ್ಲಿ ಬೇಡಿಕೆ ಗಿಟ್ಟಿಸಿಕೊಂಡಿರುವ ಸಂಜನಾ ಈ ಶೋ ಅಲ್ಲದೆ ಕನ್ನಡ ಮತ್ತು ಮಲೆಯಾಳಂನಲ್ಲಿ ತೆರೆಕಾಣಲಿರುವ ವಾಸವದುತ್ತ ಸಿನಿಮಾದ ಚಿತ್ರೀಕರಣದಲ್ಲೂ ಬ್ಯುಸಿಯಾಗಿದ್ದಾರೆ.