ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿನಯದ ‘ಟಗರು’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಸೂರಿ ನಿರ್ದೇಶನದ ಟಗರುವಿನ ಪೊಗರನ್ನು ಚಿತ್ರರಸಿಕ ಮೆಚ್ಚಿದ್ದಾನೆ. ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ದೊರೆತಿದೆ.
ಪರಭಾಷೆಯಿಂದಲೂ ಸಿನಿಮಾಕ್ಕೆ ಬಾರಿ ಬೇಡಿಕೆ ಬರುತ್ತಿದೆ. ಪರಭಾಷಿಗರು ಸಿನಿಮಾವನ್ನು ಇಷ್ಟಪಟ್ಟು ಥಿಯೇಟರ್ ಕಡಗೆ ಬರುತ್ತಿದ್ದಾರೆ.
ಪರಭಾಷಿಗರಿಗೆ ಅನುಕೂಲವಾಗುವಂತೆ ನಾಳೆಯಿಂದ ಎಲ್ಲಾ ಚಿತ್ರಮಂದಿರಗಳಲ್ಲಿಯೂ ಇಂಗ್ಲಿಷ್ ಸಬ್ ಟೈಟಲ್ ನೊಂದಿಗೆ ಚಿತ್ರಪ್ರದರ್ಶನವಾಗಲಿದೆ.