ರಸ್ತೆ ಅಪಘಾತದಲ್ಲಿ ಗಾಯಗೊಂಡು ದಾರಿ ಮಧ್ಯೆ ನರಳಾಡುತ್ತಿದ್ದ ವ್ಯಕ್ತಿಗೆ ವೈದ್ಯರೊಬ್ಬರು ಸ್ಥಳದಲ್ಲೇ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಘಟನೆ ಬ ಬಳ್ಳಾರಿಯಲ್ಲಿ ನಡೆದಿದೆ.
ಹೊಸಪೇಟೆ- ಬಳ್ಳಾರಿ ಮಾರ್ಗ ಮಧ್ಯೆ ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡು ನರಳಾಡುತ್ತಿದ್ದರು. ಈ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಹೊಸಪೇಟೆಯ ವೈದ್ಯ ಯುವರಾಜ್ ಗಾಯಾಳುವಿಗೆ ಚಿಕಿತ್ಸೆ ನೀಡಿದ್ದಾರೆ.
ವೀಡಿಯೋ ,ಫೋಟೋ ತೆಗೆಯುತ್ತಿದ್ದ ಜನರಿಗೆ ಇಂಥಹ ಸಂದರ್ಭದಲ್ಲಿ ವೀಡಿಯೋ ,ಫೋಟೋ ತೆಗೆದುಕೊಳ್ಳುತ್ತಾ ಇರಬೇಡಿ, ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಎಂದು ಮನವಿ ಮಾಡಿದ್ದಾರೆ.