ಡಾ. ರಾಜ್ ಕುಮಾರ್ ರಸ್ತೆ ಹೆಸರಲ್ಲೊಂದು ಸಿನಿಮಾ ಬರಲಿದೆ. ಮೆಜಿಸ್ಟಿಕ್, ಕಲಾಸಿಪಾಳ್ಯ, ಶಿವಾಜಿನಗರ ಹೀಗೆ ರಾಜ್ಯ ರಾಜಧಾನಿ ಬೆಂಗಳೂರಿನ ವಿವಿಧ ಸ್ಥಳಗಳ ಹೆಸರಲ್ಲಿ ಸಿನಿಮಾಗಳು ಬಂದಿವೆ. ಈಗ ‘ಡಾ.ರಾಜ್ ಕುಮಾರ್ ರಸ್ತೆ’ ಹೆಸರಲ್ಲೊಂದು ಸಿನಿಮಾ ಬರುತ್ತಿದೆ.
ಸಿನಿಮಾ ಪತ್ರಕರ್ತ ವಿನಾಯಕ್ ರಾಮ್ ಕಲಗಾರು ಅವರು ಮೊದಲ ಬಾರಿಗೆ ಈ ಸಿನಿಮಾ ಮೂಲಕ ನಿರ್ದೇಶಕರಾಗುತ್ತಿದ್ದಾರೆ.
ರಿಯಾಲಿಟಿ, ಶೋ, ಟಿವಿ ಕಾರ್ಯಕ್ರಮಗಳಿಗೆ , ಧಾರವಾಹಿಗಳಿಗೆ ಸಂಭಾಷಣೆ ಬರೆದಿರುವ ವಿನಾಯಕ್ ಅವರ ನಿರ್ದೇಶನದ ಚೊಚ್ಚಲ ಚಿತ್ರವಿದು . ಲೂಸಿಯಾ ಪವನ್ ಕುಮಾರ್ ಅವರ ಸ್ಪೂರ್ತಿಯಿಂದಾಗಿ ವಿನಾಯಕ್ ಆ್ಯಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.