ಹಿತ್ತಲಲ್ಲಿ ಅಸ್ಥಿಪಂಜರ ಪತ್ತೆ : ತಾಯಿ, ಮಗಳು ಅರೆಸ್ಟ್…!

Date:

ಮಗ ಬೇಕೆಂದು ಮಕ್ಕಳನ್ನು ಅಪಹರಣ ಮಾಡುತ್ತಿದ್ದ ಆರೋಪದ ಮೇಲೆ ತಾಯಿ ಮತ್ತು‌ ಆಕೆಯ ಮಗಳನ್ನು ಪೊಲೀಸರು ಬಂಧಿಸಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.

ರಶೀದಾ ಪಟೇಲ್ (40) ಮತ್ತು ಮೊಹ್ಸಿನಾ (19) ಬಂಧಿತರು. ರಶೀದಾಳ ಗಂಡು‌ ಮಗು ಹಲವು ವರ್ಷಗಳ ಹಿಂದೆ ತೀರಿಕೊಂಡಿದ್ದು, ತನ್ನ ಕೊನೆಗಾಲದಲ್ಲಿ ನೋಡಿಕೊಳ್ಳಲು ಮಗ ಬೇಕೆಂದು ರಶೀದಾ ಮಕ್ಕಳನ್ನು ಕಿಡ್ನಾಪ್ ಮಾಡ್ತಿದ್ದಳು ಎನ್ನಲಾಗಿದೆ.


ಮೊಹೀತ್ ಪಾಸ್ವಾನ್ ಎಂಬ 7ವರ್ಷದ ಬಾಲಕ 2017ರ ನವೆಂಬರ್ 17ರಂದು ಕಾಣೆಯಾಗಿದ್ದ. ಈತನನ್ನು ರಶೀದಾ ತನ್ನ ಮನೆಯಲ್ಲಿ ಕೂಡಿ ಹಾಕಿದ್ದಳು. 4 ತಿಂಗಳ ಬಳಿಕ ಬಾಲಕ ಅಲ್ಲಿಂದ ತಪ್ಪಿಸಿಕೊಂಡು ಬಂದು ತನ್ನ ಪೋಷಕರಿಗೆ ರಶೀದಾ ಬಗ್ಗೆ ವಿವರಿಸಿದ್ದ.‌ ಈತನ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ರಶೀದಾ ಮನೆಯನ್ನು ಪರಿಶೀಲಿಸುವಾಗ ಮನೆಯ ಹಿಂದೆ 7ವರ್ಷದ ಬಾಲಕನ ಅಸ್ಥಿಪಂಜರ ಸಿಕ್ಕಿದೆ. ಅದು 2016ರ ಮಾರ್ಚ್ ನಲ್ಲಿ ಗುರುದ್ವಾರ ಪ್ರದೇಶದ ತನ್ನ‌ ಮನೆಯಿಂದ ಕಾಣೆಯಾಗಿದ್ದ 7ವರ್ಷದ ಬಾಲಕ ವಿಕಿ ದೇವಿಪುಜಾಕ್ ಎಂಬ ಬಾಲಕನದ್ದು ಎಂದು ತಿಳಿದುಬಂದಿದೆ.‌ ರಶೀದ ಬಾಲಕ‌ ಕೀಟನಾಶಕ ಸೇವಿಸಿ ಸಾವನ್ನಪ್ಪಿದ ಎಂದು ಹೇಳುತ್ತಿದ್ದು , ದೇಹದ ಅವಶೇಷಗಳನ್ನು ಪೋರೆನ್ಸಿಕ್ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.‌
ಈಗ ರಶೀದ ಮತ್ತಾಕೆಯ ಮಗಳನ್ನು ಅಂಕೆಲೆಶ್ವರ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...