ಪ್ರಜಾಪ್ರಭುತ್ವದಲ್ಲಿ ಚುನಾವಣೆ ಎನ್ನೋದು ಹಬ್ಬದಂತೆ. ಈ ಹಬ್ಬವನ್ನು ಅರ್ಥಗರ್ಭಿತವಾಗಿ ಹಾಗೂ ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಹೊಸ ಹೊಸ ಕಾರ್ಯಕ್ರಮಗಳನ್ನು ಕೈಗೊಂಡಿದೆ.
ಯುವ ಮತದಾರರನ್ನು ಸೆಳೆಯಲು ಹಾಗೂ ಮತದಾನದ ಬಗ್ಗೆ ಅರಿವು ಮೂಡಿಸಲು ಆಯೋಗ ಚುನಾವಣಾ ಥೀಮ್ ಸಾಂಗ್ ಅನ್ನು ಬರೆಯುವ ಹೊಣೆಯನ್ನು ವಿಕಟ ಕವಿ ಯೋಗರಾಜ್ ಭಟ್ಟರಿಗೆ ನೀಡಿದೆ.
ನಿರ್ದೇಶಕ ಯೋಗರಾಜ್ ಭಟ್ಟರು ತಮ್ಮ ‘ಭಟ್ರ’ ಶೈಲೀಲಿ ಹಾಡೊಂದನ್ನು ಬರೀತಿದ್ದಾರೆ. ಆದಷ್ಟು ಬೇಗ ಇದು ಬಿಡುಗಡೆಯಾಗಲಿದೆ.
ಇನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಕಿರಿಯರ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಆಯೋಗ ರಾಯಭಾರಿಯನ್ನಾಗಿ ಆರಿಸಿಕೊಂಡಿರುವುದು ನಿಮಗೆ ಗೊತ್ತೇ ಇದೆ.