ಹಾವಳಿ ಶುರು ಮಾಡೋಕೆ ರೆಡಿ ಇದ್ದಾರೆ…ನೋಡೋಕೆ ನೀವ್ ರೆಡಿನಾ…?

Date:

ಅಪ್ಪಟ ಕನ್ನಡದಲ್ಲಿ ಹಾವಳಿ ಮಾಡಿ‌, ನಿಮ್ಮನ್ನು ರಂಜಿಸಲು ನಿಮ್ಮ ನೆಚ್ಚಿನ ನಟರು, ಯೂ ಟ್ಯೂಬ್ ಸ್ಟಾರ್ ಗಳು, ರ್ಯಾಪರ್ಸ್ ರೆಡಿ ಇದ್ದಾರೆ. ಈ ಕಾರ್ಯಕ್ರಮ ನೋಡೋಕೆ‌ ನೀವ್ ರೆಡಿನಾ…?
ಹೌದು, ನಾವಿಲ್ಲಿ ಮಾತಾಡ್ತಿರೋದು ಕಿರಿಕ್ ಕೀರ್ತಿ (ಕೀರ್ತಿ ಶಂಕರ ಘಟ್ಟ), ಚಂದನ್ ಶೆಟ್ಟಿ, ಆಲ್ ಓಕೆ ನಾಳೆ (ಮಾರ್ಚ್ 31) ನಡೆಸಲಿರುವ ‘ಹಂಟರ್ ಹಾವಳಿ’ ಬಗ್ಗೆ.


ಕರುನಾಡ ಚಕ್ರವರ್ತಿ , ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್, ಟಗರು ಡಾಲಿ ಖ್ಯಾತಿಯ ಧನಂಜಯ್ ಕೂಡ ಈ ಮೂವರೊಂದಿಗೆ ಸೇರಿ ಹಾವಳಿ ಮಾಡ್ತಾರೆ.
ಈಗಾಗಲೇ ನಿಮ್ಗೆ ಗೊತ್ತಿದೆ….ಬುಕ್ ಮೈ ಶೋ ನಲ್ಲಿ ಟಿಕೆಟ್ ಸಿಗ್ತಿದೆ. ನೀವಿನ್ನೂ ಬುಕ್ ಮಾಡಿಲ್ಲ ಅಂತಾದ್ರೆ , ತಡಮಾಡದೇ ಈಗಲೇ ಬುಕ್ ಮಾಡಿ. ಒಂದ್ ವೇಳೆ ಬುಕ್ ಮಾಡ್ದೇ ಇದ್ರೆ , ನಾಳೆ ನಿಮ್ ಫ್ರೆಂಡ್ಸೋ , ಅಕ್ಕಪಕ್ಕದವರೋ ಅಥವಾ ಇನ್ಯಾರೋ ಹೋಗಿ ಕಾರ್ಯಕ್ರಮ ನೋಡ್ಕೊಂಡ್ ಬಂದ್ಮೇಲೆ , ಅವ್ರ ಮಾತು‌ಕೇಳಿ…ಅಯ್ಯೋ ಒಂದೊಳ್ಳೆ ಕಾರ್ಯಕ್ರಮ ಮಿಸ್ ಮಾಡ್ಕೊಂಡ್ವಲ್ಲ ಅಂತ ಕೈ ಕೈ ಹಿಚ್ಕೋ ಬೇಡಿ…


ಟಗರು ಶಿವಣ್ಣ, ಡಾಲಿ‌ ಧನಂಜಯ್, ಯೂಟ್ಯೂಬ್ ಸ್ಟಾರ್, ಬಿಗ್ ಬಾಸ್ ಸೀಸನ್ 4 ರ ರನ್ನರ್ ಅಪ್ ಕಿರಿಕ್ ಕೀರ್ತಿ, ಕನ್ನಡ ರ್ಯಾಪರ್, ಬಿಗ್ ಬಾಸ್ ಸೀಸನ್ 5 ರ ವಿನ್ನರ್ ಚಂದನ್ ಶೆಟ್ಟಿ, ರ್ಯಾಪರ್ ಆಲ್ ಓಕೆ‌ ಈ ಐವರು ಪಂಚರತ್ನರನ್ನು ಮಾನ್ಯತಾ ಟೆಕ್ ಪಾರ್ಕ್ ನ ವೇದಿಕೆಯಲ್ಲಿ‌ ಕಣ್ತುಂಬಿಕೊಳ್ಳುವ ಅವಕಾಶವಿದೆ….ಇನ್ನೂ ತಡವೇಕೆ ಬುಕ್ ಮಾಡಿ….

https://in.bookmyshow.com/events/haavali-kannada-concert/ET00072154

Share post:

Subscribe

spot_imgspot_img

Popular

More like this
Related

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌ ಸೇರಿ 70 ಮಂದಿಗೆ ಗೌರವ

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌...

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ ಕಲಬುರಗಿ: ಚಿತ್ತಾಪುರದಲ್ಲಿ ನವೆಂಬರ್...

ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು?: ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ

ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು?: ಡಿಸಿಎಂ...

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ ಬೆಂಗಳೂರು:...