ಹಣವು ಹೆಣವಾದಾಗ

0
180

ಹೆಣವೇ ಹಣವ ನೋಡಿ
ನಕ್ಕು ಮಸಣ ಸೇರಿತು
ಉರುಳೋದ ಕಾಲದ ಕನಸಲ್ಲೇ ಕನವರಿಸುತ
ಮರೆಯಾದ ಮರೆಯಾಗಿಸುವ ಕಾಲದಿ
ಕಂಡಿದ್ದೆಲ್ಲ ಕಾರ್ಮೋಡ-ಬೆಳ್ಮೋಡ
ಎತ್ತ ಸಾಗಿದರೂ ಮತ್ತೆ ಬಾನೆತ್ತರವ ಬಾಚಿ ಸೇರದು
ಮಣ್ಣ ಮಹಿಮೆಗೆ ಸೋತು
ಬಿಂದು ರೂಪದಿ ಬಂದಿಳಿದು
ಬಂಧ-ಸಂಬಂಧಗಳ ಹಸಿರುಳಿಸಿ
ಭೂಗರ್ಭ ಸೇರಿತು
ಕಾಂಚಾಣದ ಕುರುಡು ತಲೆಯೆಂಬ ಮಡಿಕೆಯಲಿ
ವಿಷ ಬೀಜ ಬಿತ್ತಿಹಿಹುದು.
ಬತ್ತಿರುವ ಬೊಗಸೆಯು ಬೊಗಳುತಿಹಿದು
ಕೇಡ ಬಯಸುತಿಹುದು
ನೆತ್ತಿಹತ್ತಿರುವ ಬೊಗಸೆಯು ಹತ್ತಲಾರದ ಆಗಸದ
ಚಂದಿರನ ಬಾಚಿತಬ್ಬೆಂದಿಹುದು
ಗಂಜಿ ಕಟ್ಟಿ ಕೋಟೆಕಟ್ಟಿದವನೆದೆಯಲಿ
ರೋಗದಾ ಬೇನೆ ತುಂಬಿಹುದು
ಅತ್ತ ಸಾಗಲಿ ಕತ್ತಲು ಇತ್ತಸಾಗಲಿ ಕತ್ತಲು
ಎತ್ತಸಾಗಲಿ ನಾ ಆ ಬ್ರಹ್ಮಕೆತ್ತಿದ
ಮೂರುದಿನವ ಹೊತ್ತು ಬೆತ್ತಲಾಯಿತು
ಅಂದು ನಡುವೆ ಐಶ್ವರ್ಯವ ಸುತ್ತಲಾಯಿತು
ಮುಂದಿಹುದು ಬೆತ್ತಲೆಯ ಕತ್ತಲು
ನಿತ್ಯ ಹಚ್ಚಲೇ ಮೆಚ್ಚುವಾ ಪರಮಾತ್ಮನಿಗಿಷ್ಟವಾದ
ನ್ಯಾಯಾ-ನೀತಿಯ ದೀಪವಾ.?

?ದತ್ತರಾಜ್ ಪಡುಕೋಣೆ?

LEAVE A REPLY

Please enter your comment!
Please enter your name here