ಸ್ಯಾಂಡಲ್ ವುಡ್ ನ ಬಹು ಬೇಡಿಕೆ ನಟರಲ್ಲೊಬ್ಬರು ಧನಂಜಯ್. ಹೌದು, ನಾವಿಲ್ಲಿ ಹೇಳ್ತಿರೋದು ಟಗರು ಡಾಲಿ ಖ್ಯಾತಿಯ ಧನಂಜಯ್ ಬಗ್ಗೆ.

ಟಗರು ಚಿತ್ರ ಬಿಡುಗಡೆ ಆಗುತ್ತಿದ್ದಂತೆ ಡಾಲಿ ಎಂದೇ ಮನೆಮಾತಾಗಿರೋ ಧನಂಜಯ್ ಓದಿನಲ್ಲೂ ಮುಂದಿದ್ದರು.
ಧನಂಜಯ್ ಪ್ರೌಢಶಿಕ್ಷಣ ಪಡೆದಿದ್ದು ಅರಸೀಕೆರೆ ತಾಲೂಕಿನ ಸೆಂಟ್ ಮೇರಿಸ್ ಪ್ರೌಢಶಾಲೆಯಲ್ಲಿ. ಆಗ ಧನಂಜಯ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 95.32ರಷ್ಟು ಅಂಕಪಡೆದು ಟಾಪರ್ ಆಗಿದ್ದರು. ಅವರ ಫೋಟೋ ಪ್ರಕಟವಾಗಿತ್ತು.

ಡೈರೆಕ್ಟರ್ ಸ್ಪೆಷಲ್, ಬಾಕ್ಸರ್, ರಾಟೆ ಮತ್ತು ಜೆಸ್ಸಿ ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ ಇವರು ಟಗರು ಚಿತ್ರದಲ್ಲಿ ಖಳನಟನಾಗಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿನ ಇವರ ಪಾತ್ರವನ್ನು ಅಭಿಮಾನಿಗಳು, ಚಿತ್ರರಸಿಕರು ಮೆಚ್ಚಿದ್ದಾರೆ. ಧನಂಜಯ್ ಅವರಿಗೆ ಬೇಡಿಕೆ ಕೂಡ ಹೆಚ್ಚುತ್ತಿದೆ.





