ಗೋಲ್ಡನ್ ಸ್ಟಾರ್ ಗಣೇಶ್ ಅವರ ಅನುಮತಿ ಇಲ್ಲದೆ ಅವರ ಫೋಟೋವನ್ನು ಜಾಹಿರಾತು ರೂಪದಲ್ಲಿ ಬಳಸಿಕೊಂಡಿದ್ದಕ್ಕೆ ಅವರಿಗೆ 75 ಲಕ್ಷ ರೂ ಪರಿಹಾರ ನೀಡುವಂತೆ ಸಿಟಿ ಸಿವಿಲ್ ಕೋರ್ಟ್ ಮೋಕ್ಷ್ ಅಗರ್ಬತ್ತಿ ಕಂಪನಿಗೆ ಆದೇಶಿಸಿದೆ.

ಮೋಕ್ಷ್ ಅಗರ್ಬತ್ತಿ ಕಂಪನಿಯು ಚೆಲುವಿನ ಚಿತ್ತಾರ ಸಿನಿಮಾದ ಪೋಸ್ಟರ್ ಅನ್ನು ಬಳಸಿಕೊಂಡಿರುವ ಬಗ್ಗೆ ಗಣೇಶ್ 2008ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. 10ವರ್ಷಗಳ ವಿಚಾರಣೆ ಬಳಿಕ ಇದೀಗ ಗಣೇಶ್ ಪರವಾಗಿ ತೀರ್ಪು ಹೊರಬಿದ್ದಿದ್ದು , ಅಗರ್ಬತ್ತಿ ಕಂಪನಿ 75 ಲಕ್ಷ ರೂಗಳನ್ನು ಗಣೇಶ್ ಅವರಿಗೆ ಪರಿಹಾರದ ರೂಪದಲ್ಲಿ ನೀಡಬೇಕಿದೆ.





