ನಟ, ನಿರ್ದೇಶಕ ಮಾಸ್ಟರ್ ಆನಂದ್ ಈಗ ಆರ್ ಜೆ ಆಗಿದ್ದಾರೆ…! ಬಾಲ್ಯದಿಂದಲೂ ನಟನೆಯಲ್ಲಿ ತೊಡಗಿಸಿಕೊಂಡಿರುವ ಆನಂದ್ ಸಧ್ಯ ಕಿರುತೆರೆಯಲ್ಲಿ ಬ್ಯುಸಿ ಇದ್ದಾರೆ. ಒಂದು ಕಡೆ ಜೀ ವಾಹಿನಿಯ ‘ಕಾಮಿಡಿ ಕಿಲಾಡಿಗಳು-2’ ಕಾರ್ಯಕ್ರಮ ನಿರೂಪಣೆ ಮಾಡ್ತಿದ್ದಾರೆ. ಇನ್ನೊಂದು ಕಡೆ ‘ನಿಗೂಢ ರಾತ್ರಿ’ ಧಾರವಾಹಿ ನಿರ್ದೇಶನ ಮಾಡ್ತಿದ್ದಾರೆ.

ಈ ನಡುವೆ ಈಗ ಆರ್ ಜೆಯಾಗಿ ಕೇಳುಗರನ್ನು ಖುಷಿಪಡಿಸಲು ಬರ್ತಿದ್ದಾರೆ. ‘ನಮ್ ರೇಡಿಯೋ’ ದಲ್ಲಿ ಬರುತ್ತಿರುವ ಹೊಸ ಕಾರ್ಯಕ್ರಮಕ್ಕೆ ಮಾಸ್ಟರ್ ಆನಂದ್ ಸಾರಥ್ಯವಹಿಸಲಿದ್ದಾರೆ. ಈಗಾಗಲೇ ಈ ಬಗ್ಗೆ ಮಾತುಕತೆ ನಡೆದಿದೆ. ಆರ್ ಜೆಯಾಗಲು ಆನಂದ್ ಒಪ್ಪಿಕೊಂಡಿದ್ದಾರಂತೆ. ಹಿಂದೊಮ್ಮೆ ಆನಂದ್ ‘ನಮ್ ರೇಡಿಯೋದಲ್ಲಿ’ ಹೊಸವರ್ಷದ ವಿಶೇಷ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು. ಇದೀಗ ಮತ್ತೆ ಆರ್ ಜೆಯಾಗಿ ಅಭಿಮಾನಿಗಳನ್ನು ಖುಷಿಪಡಿಸಲು ಸಿದ್ಧರಾಗಿದ್ದಾರೆ.




