ಕುದುರೆ ಏರಿ ಮೆರವಣಿಗೆಯೊಂದಿಗೆ ಬರ್ತಿದ್ದ ವರ ಅರೆಸ್ಟ್…!

Must read

ತನ್ನ ಮದುವೆಗೆ ಕುದುರೆಯನ್ನೇರಿ ಬರ್ತಿದ್ದ ವರನನ್ನು ಪೊಲೀಸರು ಬಂಧಿಸಿರುವ ಘಟನೆ ಮಧ್ಯ ಪ್ರದೇಶದ ಬಾಲಾಘಾಟ್ ನ ವಾರಾಸಿವಾನಿಯ ಸಿಕಂದರ್ ಗ್ರಾಮದಲ್ಲಿ ನಡೆದಿದೆ.‌
ದಿನೇಶ್ ಬಂಧಿತ. ಅಂದಹಾಗೆ ಕುದುರೆ ಏರಿ ಬಂದಿದ್ದಕ್ಕೆ ಈತನನ್ನು ಬಂಧಿಸಿದ್ದಲ್ಲ…ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪದ ಮೇಲೆ ಬಂಧಿಸಿರೋದು.


ದಿನೇಶ್ ತನ್ನ ಗ್ರಾಮದ ಯುವತಿಯೊಬ್ಬಳನ್ನು ಎರಡು ವರ್ಷದಿಂದ ಪ್ರೀತಿಸ್ತಿದ್ದ ..ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆ ದೈಹಿಕ ಸಂಪರ್ಕವನ್ನೂ ಹೊಂದಿದ್ದ ಎನ್ನಲಾಗಿದೆ.
ಆದರೆ ದಿನೇಶ್ ನ ಪೋಷಕರು ದಿನೇಶ್ ಗೆ ಬೇರೆ ಯುವತಿಯೊಡ‌ನೆ ಮದುವೆ ನಿಶ್ಚಯ ಮಾಡಿದ್ದರು.ಇದು ಪ್ರೀತಿಸುತ್ತಿದ್ದ ಯುವತಿಗೆ ಗೊತ್ತೇ ಇರ್ಲಿಲ್ಲ. ದಿನೇಶ್ ಮದುವೆಯ ಎರಡು ದಿನದ ಹಿಂದಷ್ಟೇ ಪ್ರೇಯಸಿಯನ್ನು ಭೇಟಿಯಾದಾಗ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ವರದಿಯಾಗಿದೆ.


ಮದುವೆ ದಿನ ಯುವತಿಗೆ ವಿಷಯ ಗೊತ್ತಾಗಿದ್ದು ಪೊಲೀಸರಿಗೆ ದೂರು ನೀಡಿದ್ದಾಳೆ. ಮೆರವಣಿಗೆ ವೇಳೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಾರ್ಚ್ 31ರಂದು ಮದುವೆ ನೆರವೇರಬೇಕಿತ್ತು. ಈ ಘಟನೆ ಇಂದು‌ ಬೆಳಕಿಗೆ ಬಂದಿದೆ

- Advertisement -spot_img

More articles

- Advertisement -spot_img

Latest article