ಅನಾರೋಗ್ಯದಿಂದ ಮೃತಪಟ್ಟ ಮಗಳ ಸಾವಿನ ಸುದ್ದಿ ಕೇಳಿ ವೃದ್ಧ ತಾಯಿಯೂ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕು ಬೆಣಕಲ್ ಗ್ರಾಮದಲ್ಲಿ ನಡೆದಿದೆ.
ಈರಮ್ಮ ಹೊಟ್ಟಿ (55) ಮತ್ತು ಇವರ ತಾಯಿ ಹುಚ್ಚಮ್ಮ (85) ಸಾವಿನಲ್ಲೂ ಒಂದಾದ ತಾಯಿ ಮಗಳು.
ತಾಯಿ ಹುಚ್ಚಮ್ಮ ಅವರೊಂದಿಗೆ ವಾಸವಿದ್ದ ಮಗಳು ಈರಮ್ಮ ಅನಾರೋಗ್ಯಕ್ಕೀಡಾದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಈರಮ್ಮ ಸಾವನ್ನಪ್ಪಿದ್ದಾರೆ. ಅವರ ಶವವನ್ನು ಮನೆಗೆ ತಂದಾಗ ಹೃದಯಾಘಾತದಿಂದ ತಾಯಿ ಹುಚ್ಚಮ್ಮ ಸಾವನ್ನಪ್ಪಿದ್ದಾರೆ.