ಅವನು ರಾಮರಾಜ್.. ಹತ್ತನೇ ಕ್ಲಾಸ್ ಬಂಕ್ ಮಾಡಿದ್ರೂ 38 ಪರ್ಸೆಂಟ್ ಮಾರ್ಕ್ಸ್ ತೆಗೆದು ಸುರಪುರ(ಯಾದಗಿರಿ ಜಿಲ್ಲೆ)ದ ಕಾಲೇಜೊಂದರಲ್ಲಿ ಆರ್ಟ್ಸ್ ಅಡ್ಮೀಷನ್ ಆದ. ಆದರೆ ಇದ್ದಕ್ಕಿದ್ದಂತೆ ಸೈನ್ಸ್ ಗೆ ಟ್ರಾನ್ಸ್ ಫರ್ ಮಾಡಿಸಿ ಇಡೀ ಕಾಲೇಜಿಗೆ ಅಚ್ಚರಿ ಮೂಡಿಸಿದ್ದ. ಎಬಿಸಿಡಿ ಗೊತ್ತಿಲ್ಲದವನು ಸೈನ್ಸ್ ಮಾಡಿ ಮತ್ತೇನು ಮಾಡ್ತಾನಪ್ಪಾ ಅಂತ ಎಲ್ಲರೂ ಅಚ್ಚರಿಯ ಕಡಲಲ್ಲಿ ತೇಲಿದ್ದರು. ಆದರೆ. ಅವನು ಸೈನ್ಸ್ ಗೆ ಸೇರಿದ್ದರ ಹಿಂದಿನ ಹಕ್ಕೀಕತ್ತೇ ಬೇರೆ ಇತ್ತು.
This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.
ಅವಳು ಸ್ಮಿತಾ.. ನೋಡೋಕೆ ಸುಂದರವಾಗಿದ್ದಾಳೆ. ಕಾಲೇಜ್ ಗೆ ಹೋದ್ರೆ ನೋಡದ ಹುಡುಗರಿಲ್ಲ. ಆದರೆ ಅವಳನ್ನು ನೋಡಿದ್ದ ರಾಮರಾಜ್ ಮೊದಲ ದಿನವೇ ಆರ್ಟ್ಸ್ ಕ್ಲಾಸ್ ಬಿಟ್ಟು ಸೈನ್ಸ್ ಕ್ಲಾಸ್ಗೆ ಅಟೆಂಡ್ ಆದ. ಅವಳ ಒಂದೇ ಒಂದು ನೋಟಕ್ಕೆ ಆರ್ಟ್ಸ್ ಬಿಟ್ಟು ಸೈನ್ಸ್ ಸೇರಿದ. ದಿನಾಲೂ ಕ್ಲಾಸ್ ಅಟೆಂಡ್ ಮಾಡ್ತಿದ್ದ. ಪಾಠ ಕೇಳದಿದ್ರೂ ಸರಿ, ಅವಳ ಮುಖವನ್ನಂತೂ ನೋಡ್ತಿದ್ದ. ಅವಳು ಕ್ಲಾಸ್ಗೆ ಬರದಿದ್ದರೆ ಸೈಕೋ ತರಹ ಆಡ್ತಿದ್ದ.
ಅವನ ಅದೃಷ್ಠವೋ ಏನೋ ಸ್ಮಿತಾಳ ಮನೆಯಲ್ಲೇ ಬಾಡಿಗೆಗೆ ಸೇರಿದ. ಆದರೆ ಅವನಿಗೆ ನಾಚಿಕೇನೋ, ಅಂಜಿಕೆನೋ ಗೊತ್ತಿಲ್ಲ. ಸ್ಮಿತಾಳ ಜೊತೆ ಕ್ಲೋಸ್ ಆಗುವ ಗೋಜಿಗೆ ಹೋಗಲಿಲ್ಲ. ಆದರೂ ಕದ್ದು ಮುಚ್ಚಿ ನೋಡುವ, ನೋಟ್ಸ್ ಕೇಳುವ ಕೆಲಸ ಮಾಡ್ತಿದ್ದ. ಅವನಿಗೆ ಪ್ರೀತಿಯ ಹುಚ್ಚು ಎಷ್ಟು ಹಿಡಿದಿತ್ತು ಎಂದರೆ ಕೆಲವೊಮ್ಮೆ ಊಟ ಮಾಡದೇ ಸ್ಮಿತಾಳ ನೆನಪಲ್ಲೇ ಮಲಗಿಬಿಡುತ್ತಿದ್ದ.
ಅಂದು ಸ್ಮಿತಾ ಬರ್ತ್ ಡೇ ಅಂತ ಗೆಳೆಯರ ಬಳಿ ಸಾಲ ಮಾಡಿ ಅವಳಿಗೆ ಗೊತ್ತಾಗದಂತೆ ಪೋಸ್ಟ್ ಮೂಲಕ ಲವ್ ಲೆಟರ್ ಮತ್ತು ಕಾಸ್ಟ್ಲಿ ವಾಚ್ ಕಳಿಸಿಕೊಟ್ಟ. ಆದರೆ ತಾನ್ಯಾರು ಅಂತ ಹೇಳದೇ ಮೋಸಹೋಗಿಬಿಟ್ಟ. ಅದೇ ಖುಷಿಯಲ್ಲಿ ರೂಮ್ ಮೇಟ್ಸ್ ಗೆ ಕೇಳದೇ ಒಳ್ಳೆಯ ಪಾರ್ಟಿ ಕೊಡಿಸಿದ್ದ. ಅವಳ ಬರ್ತ್ ಡೇ ದಿನ ಕೊಟ್ಟಿದ್ದ ಕೇಕನ್ನು ಒಬ್ಬನೇ ಮುಕ್ಕಿಬಿಟ್ಟಿದ್ದ.
ತನ್ನನ್ನು ಪ್ರೀತಿಸುವವ ಯಾರು..? ಎಲ್ಲಿದ್ದಾನೆ..? ಎಂಬ ಕೊರಗಿನಲ್ಲಿ ಇರುವಾಗಲೇ ಒಂದು ದಿನ ಸ್ಮಿತಾಗೆ ಎಂಗೇಜ್ಮೆಂಟ್ ಫಿಕ್ಸ್ ಆಗಿತ್ತು. ಮರು ಮಾತನಾಡದೇ ಹ್ಹೂ ಅಂದಿದ್ಳು. ಅತ್ತ ಕಡೆ ವಿಷಯ ತಿಳಿದು ರಾಮರಾಜ್ ಬೇಸರವಾಗಿದ್ದ. ಆದರೂ ಮದುವೆ ವೇಳೆಗೆ ಏನಾದರೂ ಮಾಡಿಬಿಡೋಣ ಎಂಬ ನಿರ್ಧಾರಕ್ಕೆ ಬಂದಿದ್ದ. ಅದೇ ವೇಳೆಗೆ ಸೆಕೆಂಡ್ ಪಿಯುಸಿ ರಿಸಲ್ಟ್ ಬಂದಿತ್ತು. ವೈಚಿತ್ರ್ಯ ಹೇಗಿತ್ತು ಅಂದರೆ ಇಬ್ಬರದೂ ಒಂದೊಂದು ಸಬ್ಜೆಕ್ಟ್ ಹೊಗೆ ಹಾಕಿಸ್ಕೊಂಡಿದ್ವು. ಇತ್ತ ಕಡೆ ಇವನು ಪ್ರೀತಿಯ ಮುಸುಕು ಧರಿಸಿ ರೂಮಲ್ಲಿದ್ದುಕೊಂಡೇ ಓದತೊಡಗಿದ. ಅತ್ತ ಕಡೆ ಸ್ಮಿತಾ ಅಪ್ಪ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದ. ಬಹುಶಃ ಅದು 2010 ಅನ್ಸುತ್ತೆ ಸ್ಮಿತಾಗೆ ಶಾದಿ ಭಾಗ್ಯ ಒಲಿದಿತ್ತು. ಅವಳು ಗಂಡನ ಮನೆ ಸೇರಿ ಸುಖ ಸಂಸಾರ ನಡೆಸಲು ಅಣಿಯಾಗಿದ್ದಳು. ಇತ್ತ ರಾಮರಾಜ ಕೂಡಾ ಅಕ್ಷರಶಃ ಕುಗ್ಗಿಹೋಗಿದ್ದ. ಕುಡಿತ ಹೆಗಲೇರಿತ್ತು. ಆದರೆ ಸ್ನೇಹಿತ ಇದ್ದನಲ್ಲ ರಾಜವರ್ಧನ್, ಇವನಿಗೆ ಜೀವನದ ಭರವಸೆ ತುಂಬಿದ. ಪಿಯುಸಿ ಪಾಸಾಗುವಂತೆ ಮಾಡಿದ.
ಮುಂದೆ ನಡೆದಿದ್ದು ರಾಮರಾಜನ ಚೈತ್ರ ಯಾತ್ರೆ. ಇಂಗ್ಲೀಷ್ ಗೊತ್ತಿಲ್ಲದವ, ಇಂಜಿನಿಯರಿಂಗ್ ಪಾಸಾದ. ದೊಡ್ಡ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ. ಅವನಿಗೆ ಈಗ ಸ್ಯಾಲರಿ ಎಷ್ಟು ಗೊತ್ತಾ.. ಹತ್ತಿರ ಹತ್ತಿರ ಒಂದು ಲಕ್ಷ. ಭವಿಷ್ಯದ ಬಗ್ಗೆ ಅವನಿಗೆ ಈಗ ದೊಡ್ಡ ದೊಡ್ಡ ಕನಸುಗಳಿವೆ. ಮುಂದೆ ಮತ್ತಷ್ಟು ಎತ್ತರಕ್ಕೆ ಬೆಳೆಯುವ ಹಂಬಲವಿದೆ.
ಕೆಲ ದಿನಗಳ ಹಿಂದೆ ರಾಮರಾಜನಿಗೆ ಸ್ಮಿತಾ ಸಿಕ್ಕಿದ್ದಳಂತೆ. ತನ್ನನ್ನು ಪ್ರೀತಿಸುತ್ತಿದ್ದವ ಯಾರು ಎಂದು ಪ್ರಶ್ನೆ ಕೇಳಿದ್ಳಂತೆ. `ಛೇ ಹುಚ್ಚಿ ಅವನು ನಿನ್ನ ಮುಂದೆಯೇ ನಿಂತಿದ್ದಾನೆ. ನಿನ್ನನ್ನು ಪ್ರೀತಿಸುತ್ತಿದ್ದ ಹುಚ್ಚು ಪ್ರೇಮಿ. ನೀನೇ ನನಗೆ ಜೀವನ ಪಾಠ ಕಲಿಸಿಕೊಟ್ಟ ದೇವಿ’ ಎಂದು ಹೇಳಿಕೊಳ್ಳಬೇಕು ಎಂದರೆ ಆ ನಾಲಿಗೆಯಿಂದ ಒಂದೇ ಒಂದು ಪದ ಬರಲಿಲ್ಲವಂತೆ..!
ಈ ಪ್ರೀತಿ ಕೆಲವರನ್ನು ನರಕಕ್ಕೆ ದೂಡಿದರೆ, ಇನ್ನೂ ಕೆಲವರಿಗೆ ಜೀವನ ಪಾಠ ಹೇಳಿ ಕೊಡುತ್ತದೆ. ಅದಕ್ಕೆ ರಾಮರಾಜನೇ ಸಾಕ್ಷಿ ಅಲ್ವೇ..?
- ರಾಜಶೇಖರ ಜೆ
If you Like this Story , Like us on Facebook The New India Times
POPULAR STORIES :
ಇದ್ದಕ್ಕಿದ್ದಂತೆ ಗೇಲ್ ಸಿಡಿತಿರೋದು ಯಾಕೆ..!? ಕೊಹ್ಲಿ ಬಳಿ ಗೇಲ್ ಹೇಳಿದ್ದೇನು ಗೊತ್ತಾ..!?
ಐಶ್ವರ್ಯಗೆ ಶಾಕ್ ಕೊಟ್ಟ ಅಭಿಷೇಕ್ ಬಚ್ಚನ್ ನ ನಡುವಳಿಕೆ..! #Video
ಮುಳುಗಲಿದೆ ಮುಂಬೈ..! ಕೋಲ್ಕತಾಕ್ಕೂ ಅಪಾಯ ತಪ್ಪಿದಲ್ಲ..!
ಈ ಅವಳಿ ಸೋದರಿಯರಿಗೆ ವಿಚಿತ್ರ ಬಯಕೆ..!? ಅದೇನಂತಾ ನೀವೇ ಓದಿ..!?
ಕಾಮನ್ ಮ್ಯಾನ್ ಅಮಾಂಗ್ ದ ಅನ್ ಕಾಮನೆಸ್ಟ್..!
ಏಲಿಯೆನ್ಸ್ ಗಳನ್ನು ಹುಡುಕಲು ಹೊರಟ ವಿಜ್ಞಾನಿಗಳು.