ತಮಿಳುನಾಡು ಮತ್ತು ಕರ್ನಾಟಕ ನಡುವೆ ಕಾವೇರಿ ವಿವಾದ ನಿನ್ನೆದೆಯಲ್ಲ. ಕಾವೇರಿ ವಿಷಯವನ್ನು ಎರಡೂ ರಾಜ್ಯದವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎನ್ನೋದು ಎಲ್ರಿಗೂ ಗೊತ್ತಿರುವ ವಿಷಯ. ಈಗ ರಾಜಕೀಯಕ್ಕೆ ಪ್ರವೇಶಿಸಿರುವ ರಜನಿಕಾಂತ್ ಮತ್ತು ಕಮಲ ಹಾಸನ್ ಅವರೂ ಕಾವೇರಿ ವಿಷಯವನ್ನು ರಾಜಕೀಯವಾಹಿ ಬಳಸಿಕೊಳ್ಳಲು ಮುಂದಾಗಿದ್ದಾರೆ.
ಕಾವೇರಿ ವಿಷಯದಲ್ಲಿ ಕರ್ನಾಟಕದ ವಿರುದ್ಧ ಇವರಿಬ್ಬರು ಹೇಳಿಕೆ ನೀಡುತ್ತಿದ್ದಾರೆ. ಆದ್ದರಿಂದ ಇವರ ಸಿನಿಮಾಗಳನ್ನು ನಿಷೇಧಿಸುವಂತೆ ವಾಟಾಳ್ ನಾಗರಾಜ್ ಒತ್ತಾಯಿಸಿದ್ದರು. ಅದರಂತೆ ರಾಜ್ಯದಲ್ಲಿ ಕಮಲ ಹಾಸನ್ ಮತ್ತು ರಜನಿ ಸಿನಿಮಾಗಳ ಪ್ರದರ್ಶನ ನಿಷೇಧಿಸಲು ನಿರ್ಧರಿಸುವುದಾಗಿ ಸ್ವತಃ ಫಿಲಂ ಚೇಂಬರ್ ಅಧ್ಯಕ್ಷ ಸಾ. ರಾ ಗೋವಿಂದ್ ಹೇಳಿದ್ದಾರೆ.