1. ಚುನಾವಣೆ ಮುಗಿಯುವವರೆಗೆ ಜನತಾ ಪರಿವಾರದ ಚರ್ಚೆ ಬೇಡ : ದೇವೇಗೌಡ
ಮುಂಬರುವ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆ ಮುಗಿಯುವವರೆಗೂ ಜನತಾ ಪರಿವಾರ ಒಗ್ಗೂಡುವಿಕೆ ಚರ್ಚೆ ಬೇಡ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಈ ಬಗ್ಗೆ ಗೊಂದಲಕ್ಕೊಳಗಾಗುವುದು ಬೇಡ, ಈಗ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿ ಎಂದರು.
2. ಸೋನಿಯಾ, ರಾಹುಲ್ ಗೆ ಜಾಮೀನು
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಆರೋಪವನ್ನು ಎದುರಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಇವತ್ತು ಪಟಿಯಾಲ ಹೌಸ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಸೋನಿಯಾ ಗಾಂಧಿಗೆ ಎಕೆ ಆಂಟನಿ ಹಾಗೂ ರಾಹುಲ್ ಗಾಂಧಿಗೆ ಪ್ರಿಯಾಂಕ ಗಾಂಧಿ ಶ್ಯೂರಿಟಿ ನೀಡಿದ್ದು, ಒಬ್ಬರ ಶ್ಯೂರಿಟಿಗೆ ತಲಾ 50 ಸಾವಿರ ರೂಪಾಯಿಗಳ ಬಾಂಡ್ ನೀಡುವಂತೆ ಸೂಚಿಸಿರುವ ಕೋರ್ಟ್ ಷರತ್ತು ರಹಿತ ಜಾಮೀನು ನೀಡಿದೆ. ಫೆ.20ಕ್ಕೆ ವಿಚಾರಣೆ ಯನ್ನು ಮುಂದೂಡಲಾಗಿದ್ದು ಸದ್ಯಕ್ಕೆ ಅಮ್ಮ-ಮಗನಿಗೆ ರಿಲೀಫ್ ಸಿಕ್ಕಂತಾಗಿದೆ.
3. ಭಾರತ ವಿರುದ್ಧ ಮಾತಾಡದಂತೆ ಪಾಕಿಗಳಿಗೇ ಷರೀಫ್ ಸೂಚನೆ..!
ಭಾರತದೊಂದಿಗಿನ ಶಾಂತಿಗೆ ಧಕ್ಕೆ ಉಂಟಾಗದಂತೆ ನೋಡಿಕೊಳ್ಳಲು, ಭಾರತದ ಪಾಕ್ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಲು ಪಾಕ್ ಪ್ರಧಾನಿ ನವಾಜ್ ಷರೀಫ್ ಸಿದ್ದರಾದಂತಿದ್ದು, ಎರಡು ದೇಶಗಳ ನಡುವಿನ ಸಂಬಂಧ ಉತ್ತಮಗೊಳ್ಳುವ ಸ್ಥಿತಿ ಕಂಡುಬರುತ್ತಿದ್ದು, ಭಾರತದ ವಿರುದ್ಧ ಹೇಳಿಕೆಯನ್ನು ನೀಡಬೇಡಿ ಎಂದು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಆದೇಶಿಸಿದ್ದಾರೆ. ಈ ಬಗ್ಗೆ ಪಾಕ್ ದೈನಿಕೆ ದಿ ನೇಷನ್ ವರದಿ ಮಾಡಿದೆ.
4. 2020ಕ್ಕೆ ಭಾರತದ ಮೇಲೆ ದಾಳಿಗೆ ಸಂಚು ರೂಪಿಸಿದೆ ಐಸಿಸ್..!?
ಸಿರಿಯಾಕ್ಕೆ ಹೋಗಿ ಐಸಿಸ್ ಸಂಘಟನೆಯನ್ನು ಸೇರಲು ಹೊರಟಿದ್ದ 16ರ ಹುಡುಗಿ ಅಘಾತಕಾರಿ ಸುದ್ದಿಯೊಂದನ್ನು ತಿಳಿಸಿದ್ದಾಳೆ..!
ಉಗ್ರ ಸಂಘಟನೆಯನ್ನು ಸೇರಲು ತೆರಳಿದ್ದ ಹುಡುಗಿಯನ್ನು ತಡೆದ ವಿಚಾರ ನಿಮಗೂ ಗೊತ್ತೇ ಇದೆ (ನಿನ್ನೆ ಸುದ್ದಿ). ಆಕೆಯನ್ನು ಮಹರಾಷ್ಟ್ರ ಭಯೋತ್ಪಾದಕ ದಳದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದಾಗ ಆಘಾತಕಾರಿ ಅಂಶವೊಂದು ಬಯಲಾಗಿದೆ..! ” ಸಿರಿಯಾ ಮತ್ತು ಇರಾಕ್ನ ಆಚೆಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಐಸಿಸ್ ತಯಾರಾಗಿದೆ..!2020ಕ್ಕೆ ಭಾರತದ ಮೇಲೆ ದಾಳಿ ನಡೆಸುವ ಉದ್ದೇಶವನ್ನೂ ಐಸಿಸ್ ಹೊಂದಿದೆ ಎಂದು ಆಕೆ ಹೇಳಿದ್ದಾಳೆ..!
5. ಬಾಲಕಿಗೆ ಬೆದರಿಸಿದ ಪಾಪ್ ಸ್ಟಾರ್ ರೇಮೋ ಮೇಲೆ ಕೇಸ್
ಡಿಸೆಂಬರ್ 1ರಂದು ತನ್ನ ಮಗ ಮಾಡಿದ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿರುವ ಬಾಲಕಿಯನ್ನು ಬೈದು, ಬೆದರಿಕೆಯೊಡ್ಡಿದ ಆರೋಪದಡಿಯಲ್ಲಿ ಪಾಪ್ ಸ್ಟಾರ್ ರೇಮೋ ಫರ್ನಾಂಡಿಸ್ ವಿರುದ್ಧ ಗೋವಾ ಪೊಲೀಸರು ಕೇಸು ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯ ಪರವಾಗಿ ನ್ಯಾಯವಾದಿ ಐರಿಸ್ ರಾಡ್ರಿಗ್ಸ್ ಎಫ್ಐರ್ ದಾಖಲಿಸಿದ್ದಾರೆ.
ಡಿ.1ರಂದು ರೇಮೋರ ಮಗ ಜೋನಾ ಚಲಾಯಿಸುತ್ತಿದ್ದ ಕಾರು ಬಾಲಕಿಗೆ ಡಿಕ್ಕಿ ಹೊಡೆದಿತ್ತು.
6. ಮಹದಾಯಿ ವಿವಾದದ ಕುರಿತು ಗೋವಾ ಸಿಎಂಗೆ ಸಿದ್ದು ಪತ್ರ
ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಎದ್ದಿರುವ ವಿವಾದವನ್ನುಪರಸ್ಪರ ಮಾತುಕತೆಯ ಮೂಲಕವೇ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕದ ನಿಯೋಗದ ಭೇಟಿಗೆ ಸಮಯವನ್ನು ನೀಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗೋವಾ ಸಿಎಂ ಲಕ್ಷ್ಮೀಕಾಂತ್ ಪರಿಕ್ಕರ್ ಅವರಿಗೆ ಪತ್ರ ಬರೆದಿದ್ದಾರೆ.
ಮಹದಾಯಿ ನ್ಯಾಯಾಧಿಕರಣದಲ್ಲಿ ಈ ವಿವಾದವು ವಿಚಾರಣೆಯಲ್ಲಿದ್ದು, ನದಿ ತೀರದ ಕರ್ನಾಟಕ ಮತ್ತು ಗೋವಾ ರಾಜ್ಯಗಳು ಪರಸ್ಪರ ಕೊಡುಕೊಳ್ಳುವಿಕೆ ತತ್ವದ ಅಡಿಯಲ್ಲಿ ಶಾಂತಿಯುತವಾಗಿ ವಿವಾದವನ್ನು ಬಗೆಹರಿಸಿಕೊಳ್ಳುವ ಬಗ್ಗೆ ಸಿಎಂ ಪತ್ರದಲ್ಲಿ ತಿಳಿಸಿದ್ದಾರೆ.
7. ಸ್ವಾಮಿ ಮೂಲಕ ಕಾಂಗ್ರೆಸ್ಸಿಗರ ಟಾರ್ಗೆಟ್ : ಆಜಾದ್
ಸುಬ್ರಮಣ್ಯಂ ಸ್ವಾಮಿ ಮೂಲಕ ಬಿಜೆಪಿ ಕಾಂಗ್ರೆಸ್ಸಿಗರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಗುಲಾಂನಬಿ ಆಜಾದ್ ಆರೋಪಿಸಿದ್ದಾರೆ. ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಜಾದ್, ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಲು ಸುಬ್ರಮಣ್ಯಂ ಸ್ವಾಮಿಗೆ ಕೇಂದ್ರ ಸರ್ಕಾರ, ಪ್ರಧಾನಿ ಹಾಗೂ ಸಚಿವರುಗಳ ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ
8. ಬಂಧಿತ ಉಗ್ರನ ಕುಟುಂಬ ಭಾರತದ ಸ್ವಾತಂತ್ರಕ್ಕಾಗಿ ಹೋರಾಡಿತ್ತು..!
ಅಲ್-ಖೈದಾ ಉಗ್ರ ಸಂಘಟನೆಯ ಭಾರತದ ಮುಖ್ಯಸ್ಥ ಸನಾವುಲ್ ಹಕ್ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಹಿನ್ನೆಲೆಯುಳ್ಳವನು ಎಂದು ತಿಳಿದುಬಂದಿದೆ. ನವದೆಹಲಿಯಿಂದ 200 ಕಿ.ಮಿ ದೂರದಲ್ಲಿರುವ ಸಂಭಾಲ್ ಮೂಲದ ಈತನ ಕುಟುಂಬದವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರುವ ಹಿನ್ನೆಲೆಯುಳ್ಳವರಾಗಿದ್ದಾರೆ ಎಂದು ತನಿಖೆ ವೇಳೆ ಬಹಿರಂಗವಾಗಿದೆ.
9. ಜನವರಿ 1 ರಿಂದ 15ರ ವರೆಗೆ ಶಾಲೆಗಳಿಗೆ ರಜೆ..!
ದೆಹಲಿ ಸರ್ಕಾರದ ಹೊಸ ವಾಹನ ಸಂಚಾರ ವ್ಯವಸ್ಥೆ ಪರಿಷ್ಕರಣೆಗೆ ಸಂಬಂಧಿಸಿದಂತೆ ಹೊಸ ವರ್ಷಾರಂಭದಲ್ಲಿ ದೆಹಲಿ ಶಾಲೆಗಳಿಗೆ 15 ದಿನ ರಜೆ ಘೋಷಿಸಲಾಗಿದೆ. ಶಾಲಾ ಶಿಕ್ಷಣ ನಿರ್ದೇಶಕರು ಮತ್ತು ಶಾಲಾ ಅಧಿಕೃತರೊಂದಿಗೆ ಈ ಹಿಂದೆಯೇ ಈ ಬಗ್ಗೆ ಮಾತುಕತೆ ನಡೆದಿತ್ತು ಎನ್ನಲಾಗುತ್ತಿದೆ. ವಾಹನ ಸಂಚಾರ ವ್ಯವಸ್ಥೆ ಪರಿಷ್ಕರಣೆ ಜಾರಿಗೆ ಬರುವ ದಿನಗಳಾದ ಜನವರಿ 1 ರಿಂದ 15 ರವರೆಗೆ ಇಲ್ಲಿನ ಶಾಲೆಗಳಿಗೆ ರಜೆ ನೀಡಲಾಗಿದೆ
10. ಇಲ್ಲಿದೆ ಮಾಸ್ಟರ್ ಪೀಸ್ ಟ್ರೈಲರ್
ರಾಕಿಂಗ್ ಸ್ಟಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ `ಮಾಸ್ಟರ್ ಪೀಸ್’ ಇದೇ ತಿಂಗಳ 24ರಂದು ರಿಲೀಸ್ ಆಗಲಿದೆ..! ರಾಮಾಚಾರಿ ಯಶಸ್ಸಿನ ನಂತರ ರಾಕಿಂಗ್ ಸ್ಟಾರ್ ಮಾಸ್ಟರ್ ಪೀಸ್ ಆಗಿ ಅಭಿಮಾನಿಗಳ ಮನಗೆಲ್ಲಲು ಬರ್ತಾ ಇದ್ದಾರೆ..! ಅದಕ್ಕೂ ಮೊದಲು ನಾವು ನೀವು ಟ್ರೈಲರ್ ನೋಡ್ಲೇ ಬೇಕಲ್ವಾ..?! ಮಾಸ್ಟರ್ ಪೀಸ್ ನ ಅಧಿಕೃತ ಟ್ರೈಲರ್ ನಿಮಗೋಸ್ಕರ ಇಲ್ಲಿದೆ..!
Masterpiece – Official Trailer | Rocking Star Yash